ಪಾಕ್ ವಿರುದ್ಧ ಸೋತ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೆ ಹೊಸ ರಣತಂತ್ರ ಹೆಣೆದ ಭಾರತ, ಏನಂತೆ ಗೊತ್ತೇ??

ಪಾಕ್ ವಿರುದ್ಧ ಸೋತ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೆ ಹೊಸ ರಣತಂತ್ರ ಹೆಣೆದ ಭಾರತ, ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಸಿಸಿ ಟಿ 20 ಚಾಂಪಿಯನ್ ಶಿಪ್ ನ ಮೊದಲ ಹೈವೋಲ್ಟೇಜ್ ಪಂದ್ಯ ಭಾರತ ಮತ್ತು ಪಾಕಿಸ್ತಾನದ ಪಂದ್ಯ ಕಳೆದ ಭಾನುವಾರ ನಡೆಯಿತು. ಸಂಪೂರ್ಣ ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ದ ಹತ್ತು ವಿಕೇಟ್ ಗಳ ಭರ್ಜರಿ ಜಯ ಸಾಧಿಸಿತು. ಈಗ ಬರುವ ಭಾನುವಾರ ಸಹ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು ಕ್ವಾರ್ಟರ್ ಫೈನಲ್ ಎಂದೇ ಬಿಂಬಿತವಾಗಿರುವ ಈ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ದ ನಡೆಯಲಿದೆ. ಈ ಪಂದ್ಯದಲ್ಲಿ ಸೋಲುವ ತಂಡ ಸೆಮಿಫೈನಲ್ ರೇಸ್ ನಿಂದ ಹೊರಗುಳಿಯಲಿದೆ. ಪಾಕಿಸ್ತಾನ ತಂಡದ ವಿರುದ್ದ ಸೋತಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಒಂದು ಗೆಲುವಿಗಾಗಿ ಎದುರು ನೋಡುತ್ತಿವೆ.

ಇನ್ನು ಈ ಪಂದ್ಯಕ್ಕಾಗಿ ವಿಶೇಷ ಯೋಜನೆಯೊಂದನ್ನ ಹಾಕಿಕೊಂಡಿರುವ ಭಾರತ ಪ್ರತಿ ಓವರ್ ನಲ್ಲಿ ಸಿಕ್ಸರ್,ಬೌಂಡರಿ ಭಾರಿಸುವ ಬದಲು , ಪ್ರತಿ ಎಸೆತದಲ್ಲಿಯೂ ರನ್ ಗಳಿಸುವ ಗುರಿ ಇಟ್ಟುಕೊಂಡಿದೆ. ಹೀಗಾಗಿ ಸ್ಟ್ರೈಕ್ ರೋಟೇಟ್ ಮಾಡುವ ನಿರ್ಧಾರಕ್ಕೆ ಬಂದಿದೆ. ಪ್ರತಿ ಎಸೆತದಲಾಲಿಯೂ ರನ್ ಗಳಿಸುವತ್ತ ಗಮನಹರಿಸಿದರೇ ಆಗ ರನ್ ರೇಟ್ ಕುಸಿಯುವುದಿಲ್ಲ. ಜೊತೆಗೆ ಟಿ 20 ಪಂದ್ಯಗಳಲ್ಲಿ ಡಾಟ್ ಬಾಲ್ ಆಡುವುದನ್ನ ಕಡಿಮೆ ಮಾಡಿಕೊಳ್ಳುವುದು ಇದರ ಹಿಂದಿನ ಉದ್ದೇಶವಾಗಿದೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ ದೊಡ್ಡದಾಗಿದ್ದು, ಗ್ಯಾಪ್ ನಲ್ಲಿ ಆಡಿದರೇ, ಸುಲಭವಾಗಿ ಎರಡರಿಂದ ಮೂರು ರನ್ ಗಳಿಸಬಹುದು. ಕಳೆದ ಪಂದ್ಯದಲ್ಲಿ ಇದೇ ಮಾದರಿಯನ್ನು ಅನುಸರಿಸಿ ವಿರಾಟ್ ಕೊಹ್ಲಿ 57 ರನ್ ಗಳಿಸಿದರು. ಕೊನೆಯ ಕೆಲ ಓವರ್ ಗಳಲ್ಲಿ ಆರ್ಭಟಿಸಿದರೂ ಸಾಕು, ನಿಗದಿತ ಗುರಿಯನ್ನ ಸುಲಭವಾಗಿ ತಲುಪಬಹುದು.

ಇನ್ನು ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ದ ಆಡಿದ್ದ ವಿಂಡೀಸ್ ತಂಡದ ಆಟಗಾರರಾದ ನಿಕೋಲಸ್ ಪೂರನ್ 172 ರ ಸ್ಟ್ರೈಕ್ ರೇಟ್ ನಲ್ಲಿ 12 ರನ್ ಭಾರಿಸಿದ್ದರು. ಪೋಲಾರ್ಡ್ 130 ರ ಸ್ಟ್ರೈಕ್ ರೇಟ್ ನಲ್ಲಿ 25 ರನ್ ಗಳಿಸಿದ್ದರೇ, ಆಂಡ್ರೇ ರಸೆಲ್ ರವರ ಸ್ಟ್ರೈಕ್ ರೇಟ್ 125 ಇತ್ತು. ಎಲ್ಲಾ ಆಟಗಾರರ ಸ್ಟ್ರೈಕ್ ರೇಟ್ 100 ಕ್ಕಿಂತ ಜಾಸ್ತಿ ಇದ್ದರೂ ತಂಡದ ಒಟ್ಟು ಮೊತ್ತ 144 ರನ್ನ ಅಷ್ಟೇ ಆಗಿತ್ತು. ವಿಂಡೀಸ್ ಆಟಗಾರದು ದೊಡ್ಡ ಹೊಡೆತದ ಕಡೆ ಗಮನ ಕೊಟ್ಟರೇ ವಿನಃ, ಸ್ಟ್ರೈಕ್ ರೋಟೇಟ್ ನತ್ತ ಗಮನ ಹರಿಸಲಿಲ್ಲ. ಹಾಗಾಗಿ ದಕ್ಷಿಣ ಆಫ್ರಿಕಾ ಸುಲಭವಾಗಿ ಗೆಲ್ಲುವಂತಾಯಿತು.

ಹಾಗಾಗಿ ನ್ಯೂಜಿಲೆಂಡ್ ವಿರುದ್ದ ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಭಾರತ, ಈಗ ಸ್ಟ್ರೈಕ್ ರೇಟ್ ಬದಲು ಸ್ಟ್ರೈಕ್ ರೊಟೇಟ್ ಮಾಡುವ ಯೋಜನೆಯನ್ನ ರೂಪಿಸಿಕೊಂಡಿದೆ. ಈ ಮೂಲಕ ಮೊದಲು ಬ್ಯಾಟ್ ಮಾಡಿದರೇ 200 ಕ್ಕಿಂತ ಜಾಸ್ತಿ ರನ್ ಗಳಿಸುವ ಯೋಜನೆಯನ್ನ ಭಾರತ ರೂಪಿಸಿಕೊಂಡಿದೆ. ಮೈದಾನದಲ್ಲಿ ಈ ಯೋಜನೆಯನ್ನ ಹೇಗೆ ಕಾರ್ಯರೂಪಕ್ಕೆ ಇಳಿಸುತ್ತದೆ ಎಂಬುದನ್ನ ತಿಳಿಯಲು ಭಾನುವಾರದ ತನಕ ಕಾಯಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.