ನಾಳೆ ಬಿಡುಗಡೆಯಾಗುತ್ತಿರುವ ಭಜರಂಗಿ 2 ಚಿತ್ರದ ಕುರಿತಂತೆ ಮಾತನಾಡಿದ ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೆ ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಚಿತ್ರಗಳ ಬಿಡುಗಡೆಗೆ ಒಳ್ಳೆಯ ಕಾಲ ಕೂಡಿ ಬಂದಿದೆ ಎಂದು ಹೇಳಬಹುದು. ಹೌದು ಗೆಳೆಯರೇ ಈಗಾಗಲೇ ದುನಿಯಾ ವಿಜಯ್ ನಟನೆಯ ಸಲಗ ಚಿತ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ಈಗ ಇನ್ನು ಇದರ ಬೆನ್ನಲ್ಲೇ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಭಜರಂಗಿ-2 ಚಿತ್ರ ಕೂಡ ನಾಳೆಯಿಂದ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.

ಹೌದು ಗೆಳೆಯರೇ ಈ ಹಿಂದೆ ಈ ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬಂದಂತಹ ಭಜರಂಗಿ ಚಿತ್ರ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿತು. ಇದರಿಂದ ಉತ್ಸಾಹಿತರಾದಂತಹ ಚಿತ್ರತಂಡ ಈಗ ಭಜರಂಗಿ 2 ಚಿತ್ರವನ್ನು ಬಿಡುಗಡೆ ಮಾಡಲು ಸಜ್ಜಾಗಿ ಕುಳಿತಿದೆ. ಈ ಚಿತ್ರವನ್ನು ನಿರ್ಮಾಣ ಮಾಡಿರುವುದು ಕನ್ನಡ ಚಿತ್ರರಂಗದ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರಾಗಿರುವ ಜಯಣ್ಣ. ಚಿತ್ರದ ಹಾಡುಗಳು ಈಗಾಗಲೇ ಯೂಟ್ಯೂಬ್ನಲ್ಲಿ ಸೂಪರ್ ಹಿಟ್ ಆಗಿ ಮಿಂಚುತ್ತಿವೆ. ಚಿತ್ರದ ಟೀಸರ್ ಈಗಾಗಲೇ ಚಿತ್ರ ನೆಕ್ಸ್ಟ್ ಲೆವೆಲ್ ನಲ್ಲಿ ಸಿದ್ಧವಾಗಿರುವುದನ್ನು ನಿರೂಪಿಸಿದೆ.

ಇನ್ನು ನಾಳೆಯಿಂದ ಚಿತ್ರಮಂದಿರಗಳಲ್ಲಿ ದೇಶದಾದ್ಯಂತ ಬಿಡುಗಡೆಯಾಗಲು ಕ್ಷಣಗಣನೆ ಯಷ್ಟೇ ಬಾಕಿ. ಈ ಸಂದರ್ಭದಲ್ಲಿ ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರವರು ಚಿತ್ರದ ಕುರಿತಂತೆ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು ಗೆಳೆಯರೇ ತೆಲುಗು ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಲ್ಲು ಅರ್ಜುನ್ ರವರು ಈಗಾಗಲೇ ದೇಶದಾದ್ಯಂತ ಚಿತ್ರಮಂದಿರಗಳಿಗೆ ಪೂರ್ಣ ಪ್ರಮಾಣದ ಅವಕಾಶವನ್ನು ನೀಡಲಾಗುತ್ತದೆ ಇನ್ನು ನಾಳೆ ಭಜರಂಗಿ-2 ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ ಚಿತ್ರಕ್ಕೆ ನನ್ನ ಕಡೆಯಿಂದ ಶುಭಹಾರೈಕೆ ಎಂಬುದಾಗಿ ಹೇಳಿದ್ದರು. ಅಲ್ಲು ಅರ್ಜುನ್ ರವರ ಶುಭಹಾರೈಕೆ ಭಜರಂಗಿ-2 ಚಿತ್ರತಂಡಕ್ಕೆ ಇನ್ನಷ್ಟು ಸಂತಸವನ್ನು ತಂದಿರುವುದು ಸುಳ್ಳಲ್ಲ.

Post Author: Ravi Yadav