ಬಿಗ್ ನ್ಯೂಸ್: ಮತ್ತೆ ಒಂದಾಗ್ತಾರಾ ಸುದೀಪ್ ದರ್ಶನ್?? ಜೀ ಸಮಾರಂಭದಲ್ಲಿ ದರ್ಶನ್ ರವರ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗಕ್ಕೆ ಸ್ನೇಹಕ್ಕೆ ಪ್ರತಿಬಿಂಬ ವಾಗುವಂತೆ ಇದ್ದವರು ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್. ಇವರನ್ನು ಕನ್ನಡ ಚಿತ್ರರಂಗದ ಕುಚಿಕು ಗಳು ಹಾಗೂ ದಿಗ್ಗಜರು ಎಂಬುದಾಗಿ ಎಲ್ಲರೂ ಕರೆಯುತ್ತಿದ್ದರು. ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ವಿಷ್ಣುವರ್ಧನ್ ರವರ ನಂತರ ಕನ್ನಡ ಚಿತ್ರರಂಗದಲ್ಲಿ ಸ್ನೇಹಕ್ಕೆ ಸಂಕೇತವಾಗಿದ್ದರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು. ಯಾವುದೇ ಸಮಾರಂಭಗಳಿಗೂ ಹಾಗೂ ಸಿನಿಮಾ ಕಾರ್ಯಕ್ರಮಗಳಿಗೂ ಜೊತೆಯಾಗಿ ಹೋಗುತ್ತಿದ್ದರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.

ಇವರಿಬ್ಬರ ಸ್ನೇಹವನ್ನು ರೆಬಲ್ ಸ್ಟಾರ್ ಅಂಬರೀಶ್ ಹಾಗೂ ವಿಷ್ಣುವರ್ಧನ್ ರವರ ಸ್ನೇಹಕ್ಕೆ ಹೋಲಿಸುತ್ತಿದ್ದರು. ಪರಸ್ಪರ ಇಬ್ಬರ ಚಿತ್ರಗಳಿಗೆ ಒಬ್ಬರು ಸಹಾಯ ಮಾಡುವುದು ಹಾಗೂ ಮೆಚ್ಚುಗೆಯನ್ನು ಮಾಡುವುದು ಹೀಗೆಲ್ಲ ಮಾಡುತ್ತಿದ್ದರು. ಆದರೆ ಇವರಿಬ್ಬರ ಸ್ನೇಹಕ್ಕೆ ಯಾರ ಕಣ್ಣು ಬಿತ್ತೋ ಏನೋ ಅಂದಿನಿಂದ ಇಬ್ಬರೂ ಕೂಡ ಒಬ್ಬರ ಮುಖ ನೋಡಿದರೆ ಆಗಲಾರದಷ್ಟು ಮಾತುಕತೆಯನ್ನು ಬಿಟ್ಟುಬಿಟ್ಟಿದ್ದಾರೆ. ಇನ್ನು ಇತ್ತೀಚಿಗಷ್ಟೇ ಜೀ ಕನ್ನಡ ವಾಹಿನಿಯ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮ ನಡೆದಿದ್ದು ಈ ಸಮಾರಂಭದಲ್ಲಿ ಕಿಚ್ಚ ಸುದೀಪ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರಿಗೆ ಇದ್ದವರು ಹಾಗೂ ದರ್ಶನ್ ರವರು ಜೊತೆಯಾಗಿರುವ ಫೋಟೋವನ್ನು ತೋರಿಸಿ ಇದರ ಕುರಿತಂತೆ ಒಂದು ಮಾತನ್ನು ಹೇಳಿ ಎಂಬುದಾಗಿ ನಿರೂಪಕಿ ಅನುಶ್ರೀ ಅವರು ಹೇಳುತ್ತಾರೆ. ಆಗ ಕಿಚ್ಚ ಸುದೀಪ್ ರವರು ದರ್ಶನ್ ಜೊತೆ ನಾನು ಮಾತನಾಡದೆ ಇರಬಹುದು ಅಥವಾ ಒಟ್ಟಿಗೆ ಕಾಣಿಸಿಕೊಳ್ಳದೆ ಇರಬಹುದು. ಆದರೆ ಅವನು ಎಂದಿಗೂ ನನ್ನ ಸ್ನೇಹಿತನೇ ನನ್ನ ಸ್ನೇಹ ಎಂದಿಗೂ ಕೂಡ ಶಾಶ್ವತ ಎಂಬುದಾಗಿ ಹೇಳಿಕೊಂಡಿದ್ದಾರೆ. ಈ ಮಾತನ್ನು ಕೇಳಿದ ಮೇಲೆ ಖಂಡಿತವಾಗಿಯೂ ಕಿಚ್ಚ ಹಾಗೂ ದಚ್ಚು ಅಭಿಮಾನಿಗಳು ಇನ್ನು ಮುಂದೆಯಾದರೂ ಒಂದಾಗುತ್ತಾರೆ ಎಂಬ ಆಶಾ ಭಾವನೆಯನ್ನು ಹೊಂದಿದ್ದಾರೆ. ಇದರ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ತಪ್ಪದೆ ಹಂಚಿಕೊಳ್ಳಿ.

Post Author: Ravi Yadav