ದೀಪಾವಳಿ ಸಮಯದಲ್ಲಿ ಕೇವಲ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ, ಆದರೆ ವಿಷ್ಣುವಿಗೆ ಪೂಜೆ ಇಲ್ಲ ಯಾಕೆ ಗೊತ್ತೇ??

ದೀಪಾವಳಿ ಸಮಯದಲ್ಲಿ ಕೇವಲ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ, ಆದರೆ ವಿಷ್ಣುವಿಗೆ ಪೂಜೆ ಇಲ್ಲ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಪಂಚಾಂಗದಲ್ಲಿ ಹಾಗೂ ಹಿಂದು ಸನಾತನ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ಸಾಕಷ್ಟು ಮಹತ್ವವಿದೆ. ಬೆಳಕಿನ ಹಬ್ಬವೆಂದೇ ಖ್ಯಾತವಾಗಿರುವ ಈ ಹಬ್ಬವನ್ನು ಎಲ್ಲರೂ ಕೂಡ ಸಂಭ್ರಮದಿಂದ ಹಾಗೂ ಸಕಲ ಶಾಸ್ತ್ರೋಕ್ತವಾಗಿ ಆಚರಿಸುತ್ತಾರೆ. ಹಿಂದೂ ಪಂಚಾಗದ ಪ್ರಕಾರ 8ನೇ ತಿಂಗಳನ್ನು ಕಾರ್ತಿಕ ಮಾಸ ಎಂದು ಕರೆಯುತ್ತಾರೆ. ಇನ್ನು ಇದೇ ಕಾರ್ತಿಕ ಮಾಸದ ದೀಪಾವಳಿ ಹಬ್ಬವನ್ನು ಆಚರಿಸುವ ಮಾಸ.

ಈ ಸಂದರ್ಭದಲ್ಲಿ 4 ತಿಂಗಳ ನಿದ್ದೆಯಿಂದ ಎದ್ದು ಶ್ರೀ ವಿಷ್ಣು ಪರಮಾತ್ಮ ತನ್ನ ಪತ್ನಿ ಲಕ್ಷ್ಮಿಯೊಂದಿಗೆ ಭೂ ಸಂಚಾರಕ್ಕೆ ಹೋಗುತ್ತಾರೆ. ಇನ್ನು ನಿಮಗೆಲ್ಲ ಒಂದು ವಿಷಯ ಗೊತ್ತಿರಲಿ ಸ್ನೇಹಿತರೆ ಈ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಕೂಡ ಬೇರೆಯಲ್ಲ ಮಾಸ ಗಳಿಗಿಂತ ಹೆಚ್ಚಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಅಧಿದೇವತೆಯ ಲಕ್ಷ್ಮೀದೇವಿ ಮೊದಲ ಪೂಜಿತ ಗಣೇಶನಿಗೆ ಶಾರದೆಗೆ ಹೀಗೆ ಹಲವಾರು ದೇವ ದೇವತೆಗಳಿಗೆ ಪೂಜೆ ಸಲ್ಲಿಕೆಯಾಗುತ್ತದೆ ಆದರೆ ಶ್ರೀವಿಷ್ಣು ಪರಮಾತ್ಮನಿಗೆ ಮಾತ್ರ ಪೂಜೆ ಸಲ್ಲಿಕೆ ಆಗುವುದಿಲ್ಲ ಯಾಕೆ ಗೊತ್ತಾ. ಇದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ.

ಹೌದು ಗೆಳೆಯರೇ ವಿಷ್ಣು ಪರಮಾತ್ಮನಿಗೆ ಪೂಜೆ ಸಲ್ಲಿಕೆ ಆಗುವುದಿಲ್ಲ ಯಾಕೆಂದರೆ ವಿಷ್ಣು ಪರಮಾತ್ಮ ನಾಲ್ಕು ತಿಂಗಳ ನಿದ್ರಾವಸ್ಥೆಯಲ್ಲಿ ಇರುತ್ತಾರೆ. ಅಂದರೆ ಅದೇ ಚಾತುರ್ಮಾಸದಲ್ಲಿ ವಿಷ್ಣು ಪರಮಾತ್ಮನು ನಿದ್ದೆಯಲ್ಲಿ ಇರುವುದರಿಂದಾಗಿ ಭಕ್ತರು ಭಗವಂತನಿಗೆ ನಿದ್ರೆ ಭಂಗ ಆಗದೆ ಇರಲಿ ಎಂದು ಕೇವಲ ಲಕ್ಷ್ಮಿ ಮಾತೆಗೆ ಹಾಗೂ ಗಣೇಶನಿಗೆ ಶಾರದೆಗೆ ಪೂಜೆ ಮಾಡುತ್ತಾರೆ. ಇನ್ನು ಇದೇ ಸಂದರ್ಭದಲ್ಲಿ ಕಾರ್ತಿಕ ಹುಣ್ಣಿಮೆಯಂದು ಭಗವಂತ ಎದ್ದೇಳುತ್ತಾನೆ ಇದೇ ಸಂದರ್ಭದಲ್ಲಿ ತನ್ನ ಪತ್ನಿ ಲಕ್ಷ್ಮಿ ಯೊಂದಿಗೆ ಭೂ ಸಂಚಾರಕ್ಕೆ ತೆರಳುತ್ತಾರೆ. ಇದನ್ನೇ ದೇವ ದೀಪಾವಳಿ ಎಂದು ಕೂಡ ಕರೆಯುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಯನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.