ಪುಣ್ಯಕ್ಷೇತ್ರ ತಿರುಪತಿಯ ಬಾಲಾಜಿ ಕುರಿತು ನೀವರಿಯದ ಮಾಹಿತಿ. ವಿಜ್ಞಾನಿಗಳಿಗೆ ಸವಾಲಾಗಿರುವ ಅದೆಷ್ಟೋ ರಹಸ್ಯಗಳು. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತದೇಶ ಎನ್ನುವುದು ಹಿಂದೂ ಸಂಸ್ಕೃತಿಯ ಬುನಾದಿ ಎಂದು ಹೇಳಬಹುದಾಗಿದೆ. ಹಿಂದೂ ಸಂಸ್ಕೃತಿ ಎಂದ ಮೇಲೆ ಇಲ್ಲಿ ದೇವಸ್ಥಾನಗಳಿಗೂ ಕೂಡ ಅಷ್ಟೇ ಪ್ರಮುಖವಾದಂತಹ ಸ್ಥಾನವಿದೆ. ಇನ್ನು ದೇವಸ್ಥಾನಗಳ ವಿಚಾರಕ್ಕೆ ಬಂದರೆ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ದೇವಸ್ಥಾನಗಳ ಪಟ್ಟಿಯಲ್ಲಿ ತಿರುಪತಿಯ ಬಾಲಾಜಿ ದೇವಸ್ಥಾನ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು.

ಭಾರತ ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪೈಕಿ ಯಲ್ಲಿ ತಿರುಪತಿ ಬಾಲಾಜಿ ದೇವಸ್ಥಾನ ಅಗ್ರಸ್ಥಾನದಲ್ಲಿ ಕಾಣಸಿಗುತ್ತದೆ. ಇನ್ನು ನಮ್ಮ ಭಾರತ ದೇಶದಲ್ಲಿ ಅದೆಷ್ಟು ದೇವಸ್ಥಾನಗಳಿದ್ದು ಅವುಗಳ ರಹಸ್ಯ ಇಂದಿಗೂ ಕೂಡ ರಹಸ್ಯವಾಗಿ ಉಳಿದುಕೊಂಡು ಬಿಟ್ಟಿದೆ. ಇನ್ನು ಇಂದು ನಾವು ನಿಮಗೆ ತಿಳಿಯದೆ ಇರುವಂತಹ ತಿರುಪತಿ ದೇವಾಲಯದ ರಹಸ್ಯಗಳ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ.

ಮೊದಲನೇದಾಗಿ ತಿರುಪತಿ ವೆಂಕಟೇಶ್ವರನ ಮೂರ್ತಿಯಲ್ಲಿ ನಿಜವಾಗಿಯೂ ಕೂದಲು ಇದೆಯಂತೆ. ಇನ್ನು ಈ ಮೂರ್ತಿಯಲ್ಲಿ ನಿಜವಾಗಿಯೂ ವೆಂಕಟೇಶ ಸ್ವಾಮಿಯೇ ನೆಲೆಸಿದ್ದಾನೆ ಎಂಬ ನಂಬಿಕೆ ಕೂಡ ಇದೆ.

2 ನೀವು ದೇವಸ್ಥಾನದ ಒಳಗಡೆ ಬಂದು ನೋಡಿದಾಗ ವೆಂಕಟೇಶ್ವರನ ಮೂರ್ತಿ ಮಧ್ಯಭಾಗದಲ್ಲಿ ಇದೆ ಎಂಬಂತೆ ಭಾಸವಾಗುತ್ತದೆ. ಅದೇ ನೀವು ಹೊರಗಡೆ ಹೋಗಿ ನೋಡಿದಾಗ ದೇವರ ಮೂರ್ತಿ ಬಲಗಡೆಗೆ ಹೋದಂತೆ ಕಾಣಿಸುತ್ತದೆ.

3 ಇನ್ನು ಈ ದೇವರ ಮೂರ್ತಿಯಲ್ಲಿ ವೆಂಕಟೇಶ್ವರ ಸ್ವಾಮಿಯ ಜೊತೆಗೆ ಲಕ್ಷ್ಮೀದೇವಿಯು ಕೂಡ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಯಾಕೆಂದರೆ ಕೆಳಬಾಗಕ್ಕೆ ಧೋತಿಯನ್ನು ಹಾಕಿದರೆ ಮೇಲ್ಬಾಗಕ್ಕೆ ಸೀರೆಯನ್ನು ಉಡಿಸಲಾಗುತ್ತದೆ.

4 ವೆಂಕಟೇಶ್ವರನ ಮೂರ್ತಿಯನ್ನು ವಿಶೇಷವಾದ ಕಲ್ಲಿನಿಂದ ಕೆತ್ತಲಾಗಿದ್ದು ಇದು ನಿಜವಾಗಿಯೂ ವಿಷ್ಣು ದೇವರೇ ಸ್ವಯಂ ವಿರಾಜಮಾನವಾಗಿ ದ್ದಾರೆ ಎಂಬ ಭಾವವನ್ನು ಮೂಡುವಂತೆ ಮಾಡುತ್ತದೆ. ಇನ್ನು ಈ ಮೂರ್ತಿಯಿಂದ ನಿಜವಾಗಿಯೂ ಬೆವರು ಮೂಡಿದಂತೆ ಕಾಣಸಿಗುತ್ತದೆ.

5 ಈ ದೇವಸ್ಥಾನದ 23 ಕಿಲೋಮೀಟರ್ ದೂರದಲ್ಲಿರುವ ಒಂದು ಹಳ್ಳಿಯಲ್ಲಿ ಹೊರ ಊರಿನಿಂದ ಬಂದವರಿಗೆ ಪ್ರವೇಶ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ದೇವರ ನೈವೇದ್ಯಕ್ಕಾಗಿ ಬಳಸುವ ಹೂವುಹಣ್ಣು ಹಾಲುತುಪ್ಪ ಗಳನ್ನು ಈ ಹಳ್ಳಿಯಿಂದಲೇ ಬಳಸಲಾಗುತ್ತದೆ ಎಂಬ ಮಾತಿದೆ.

6 ಇನ್ನು ಬಾಲಾಜಿಯ ಮೂರ್ತಿಯಲ್ಲಿ ಮಧ್ಯಭಾಗದಲ್ಲಿ ಶ್ರೀಲಕ್ಷ್ಮಿದೇವಿ ಕೂಡ ವಿರಾಜಮಾನರಾಗಿದ್ದಾರೆ. ಆದರೆ ಅವರ ಮೂರ್ತಿ ಕಾಣಸಿಗುವುದು ಬಾಲಾಜಿ ದೇವರ ಮೂರ್ತಿಯ ಆಭರಣಗಳನ್ನು ಇಳಿಸಿ ಚಂದನದಿಂದ ಮಾಡಿಸುವಾಗ.

7 ಇನ್ನು ವೆಂಕಟೇಶ್ವರನ ಸನ್ನಿಧಿಯಲ್ಲಿ ಅದೆಷ್ಟು ವರ್ಷಗಳಿಂದ ಒಂದು ದೀಪ ಆರದಂತೆ ಉರಿದುಕೊಂಡು ಬಂದಿದೆ. ಇದಕ್ಕೆ ಎಣ್ಣೆ ಹಾಗೂ ತುಪ್ಪ ಹಾಕದಿದ್ದರು ಕೂಡ ಇದು ಉರಿದುಕೊಂಡು ಬಂದಿದೆ. ಇದನ್ನು ಯಾರು ಯಾವಾಗ ಹಚ್ಚಿದರು ಎಂಬ ಮಾಹಿತಿ ಕೂಡ ಇಲ್ಲಿವರೆಗೂ ಲಭ್ಯವಿಲ್ಲ.

8 ಇನ್ನು ದೇವಸ್ಥಾನದ ಮುಖ್ಯದ್ವಾರದ ಎಡಗಡೆಯಲ್ಲಿ ಒಂದು ಕೀಲಿ ಇದೆ. ಇದರಿಂದ ಚಿಕ್ಕವರಿರಬೇಕು ಆದರೆ ಬಾಲಾಜಿ ದೇವರಿಗೆ ತುಟಿಯ ಕೆಳಭಾಗದಲ್ಲಿ ಏಟನ್ನು ನೀಡಲಾಗಿತ್ತು ಎಂಬ ಮಾತಿದೆ. ಇದಕ್ಕಾಗಿ ಪ್ರತಿ ಶುಕ್ರವಾರ ಆ ಜಾಗಕ್ಕೆ ಚಂದನದ ಲೇಪನವನ್ನು ಮಾಡಲಾಗುತ್ತದೆ.

9 ಇನ್ನು ಇಲ್ಲಿಗೆ ಬರುವ ಭಕ್ತಾದಿಗಳು ಹೇಳುವಂತೆ ಬಾಲಾಜಿ ದೇವರ ಮೂರ್ತಿಯ ಎಡೆಗೆ ಕಿವಿಕೊಟ್ಟು ಕೇಳಿದರು ಸಮುದ್ರದ ಅಲೆಗಳ ಸದ್ದು ಕೇಳಿಬರುತ್ತದೆ. ಕೊನೆಯದಾಗಿ ಇನ್ನು ವೆಂಕಟೇಶ್ವರನ ಪ್ರತಿಮೆಗೆ ವಿಭಿನ್ನವಾದ ಕರ್ಪೂರವನ್ನು ಬಳಸಲಾಗುತ್ತದೆ. ಇದು ಬೇರೆ ಸಾಮಾನ್ಯ ಕಲ್ಲಿನಲ್ಲಿ ಇಟ್ಟಾಗ ಬಿರುಕು ಬಿಡುತ್ತದೆ ಆದರೆ ವೆಂಕಟೇಶ್ವರನ ಪ್ರತಿಮೆಯಲ್ಲಿ ಏನು ಕೂಡ ಆಗದ ಹಾಗೆ ಉಳಿದು ಕೊಂಡಿರುತ್ತದೆ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav