ಮುಂಬೈ ತಂಡಕ್ಕೆ ಹೊಸ ನಾಯಕನ ಘೋಷಣೆ, ಫಾರ್ಮ್ ನಲ್ಲಿ ಇಲ್ಲದಿದ್ದರೂ ಅಜಿಂಕ್ಯಾ ರಹಾನೆಗೆ ಸಿಕ್ಕಿದೆ ಬಹುದೊಡ್ಡ ಜವಾಬ್ದಾರಿ

ನಮಸ್ಕಾರ ಸ್ನೇಹಿತರೇ ಅಜಿಂಕ್ಯಾ ರಹಾನೆ ಭಾರತ ಕ್ರಿಕೇಟ್ ಟೆಸ್ಟ್ ತಂಡದ ಉಪನಾಯಕ. ವಿರಾಟ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನ ಆಸ್ಟ್ರೇಲಿಯಾದಲ್ಲಿ ಮುನ್ನಡೆಸಿ ಐತಿಹಾಸಿಕ ಟೆಸ್ಟ್ ಸರಣಿಯನ್ನ ಜಯಿಸಿಕೊಟ್ಟ ನಾಯಕ. ಅಂತಹ ಅಜಿಂಕ್ಯಾ ರಹಾನೆ ದೇಶಿ ಕ್ರಿಕೇಟ್ ನಲ್ಲಿ ಮುಂಬೈ ಪರ ಆಡುತ್ತಾರೆ. ಮುಂಬೈ ಪರ ಆಡುವಾಗ ರನ್ ಮಶೀನ್ ಎಂದು ಕರೆಸಿಕೊಳ್ಳುತ್ತಿದ್ದ ರಹಾನೆ , ಟಿ 20 ಕ್ರಿಕೇಟ್ ನಲ್ಲಿ ಆರು ಎಸೆತಗಳಿಗೆ ಆರು ಬೌಂಡರಿ ಸಿಡಿಸಿರುವ ವಿಶೇಷ ದಾಖಲೆಯನ್ನು ಸಹ ಹೊಂದಿದ್ದಾರೆ. ಆದರೇ ಇತ್ತಿಚೇಗೆ ಕೇವಲ ಟೆಸ್ಟ್ ತಂಡದಲ್ಲಿ ಮಾತ್ರ ಸ್ಥಾನ ಪಡೆಯುತ್ತಿರುವ ಅಜಿಂಕ್ಯಾ ರಹಾನೆಗೆ ಈಗ ಐಪಿಎಲ್ ತಂಡದಲಾಲಿಯೂ ಸಹ ಆಡುವ 11 ರ ಬಳಗದಲ್ಲಿ ಸ್ಥಾನ ಸಿಗುತ್ತಿಲ್ಲ. ಆದರೇ ಕೊನೆಯಲ್ಲಿ ಅಜಿಂಕ್ಯಾ ರಹಾನೆಗೆ ಶುಭ ಸುದ್ದಿಯೊಂದು ಸಿಗುತ್ತಿದ್ದು, ಮುಂಬೈ ಕ್ರಿಕೇಟ್ ಸಂಸ್ಥೆ, ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ 20 ಟ್ರೋಫಿಗೆ ಮುಂಬೈ ತಂಡಕ್ಕೆ ನಾಯಕನ್ನಾಗಿ ನೇಮಿಸಿದೆ.

ಟಿ 20 ಕ್ರಿಕೇಟ್ ನಲ್ಲಿ ಜೂನಿಯರ್ ಹಿಟ್ ಮ್ಯಾನ್ ಎಂದು ಕರೆಸಿಕೊಳ್ಳುವ ಪೃಥ್ವಿ ಶಾ ರನ್ನ ಉಪನಾಯಕನನ್ನಾಗಿ ನೇಮಿಸಿದೆ. ಇನ್ನು ಮತ್ತೊಬ್ಬ ಆರಂಭಿಕ ಯಶಸ್ವಿ ಜೈಸ್ವಾಲ್ ಸಹ ಸ್ಥಾನ ಪಡೆದಿದ್ದಾರೆ. ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಸಹಜವಾಗಿ ಸ್ಥಾನ ಪಡೆದಿಲ್ಲ. ಇನ್ನು ಐಪಿಎಲ್ ನಲ್ಲಿ ಮಿಂಚಿದ್ದ ಶಿವಂ ದುಬೆ ಸಹ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗವನ್ನು ಅನುಭವಿ ಧವಳ್ ಕುಲಕರ್ಣಿ ಮುನ್ನಡೆಸುತ್ತಿದ್ದು, ಅವರಿಗೆ ಸಾಥ್ ನೀಡಲು ತುಷಾರ್ ದೇಶಪಾಂಡೆ, ಮೋಹಿತ್ ಆವಸ್ಥಿ ಇದ್ದಾರೆ. ಇನ್ನು ಸ್ಪಿನ್ ಬೌಲಿಂಗ್ ಜವಾಬ್ದಾರಿಯನ್ನು ಅನುಭವಿ ಶ್ಯಾಮ್ಸ್ ಮುಲಾನಿ ನಿರ್ವಹಿಸುವುದು ಖಚಿತವಾಗಿದೆ.

ಫಾರ್ಮ್ ಅಸ್ಥಿರತೆಯಿಂದ ಬಳಲುತ್ತಿರುವ ಅಜಿಂಕ್ಯಾ ರಹಾನೆಗೆ ಇದೊಂದು ಉತ್ತಮ ಅವಕಾಶವಾಗಿದ್ದು, ದೇಶಿ ಕ್ರಿಕೇಟ್ ನಲ್ಲಿ ಚಾಂಪಿಯನ್ ಕಾ ಚಾಂಪಿಯನ್ ಎಂದು ಕರೆಸಿಕೊಂಡಿರುವ ಮುಂಬೈ ತಂಡವನ್ನ ಮುನ್ನಡೆಸುವುದರ ಜೊತೆ, ಫಾರ್ಮ್ ಗೂ ಸಹ ಮರಳಬಹುದು. ನವೆಂಬರ್ ನಾಲ್ಕರಿಂದ ಆರಂಭವಾಗಲಿರುವ ದೇಶಿ ಟಿ 20 ಕ್ರಿಕೇಟ್ ಟೂರ್ನಮೆಂಟ್ ಸೈಯದ್ ಮುಶ್ತಾಕ್ ಅಲಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಮುಂಬೈ ತಂಡ ಕರ್ನಾಟಕವನ್ನು ಎದುರಿಸಲಿದೆ. ಕಳೆದ ಭಾರಿ ಕೋರೋನಾ ಕಾರಣ ಬಿಸಿಸಿಐ ಸೂಕ್ತವಾಗಿ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಆದರೇ ಈ ಭಾರಿ ಅತ್ಯುತ್ತಮವಾಗಿ ಆಯೋಜಿಸುವ ಸಾಧ್ಯತೆ ಅಧಿಕವಾಗಿದೆ. ದೇಶಿ ಕ್ರಿಕೇಟಿಗರಿಗೂ ಮುಂಬರುವ ಐಪಿಎಲ್ ಹರಾಜಿನಲ್ಲಿ ಸೂಕ್ತ ಬೆಲೆಗೆ ಫ್ರಾಂಚೈಸಿಗಳು ಕೊಳ್ಳಲು ಸಹ ಈ ಟೂರ್ನಿ ಉತ್ತಮವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav