ವಿಶ್ವಕಪ್ ನಲ್ಲಿ ಈತನೇ ಭಾರತದ ಟ್ರಂಪ್ ಕಾರ್ಡ್, ಈತನಿಂದಲೇ ಗೆಲುವು ಸಿಗುತ್ತದೆ ಎಂದ ಗಂಭೀರ್, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ಕ್ರಿಕೇಟ್ ಗೆ ಕೆಲವೇ ಕೆಲವು ದಿನಗಳು ಬಾಕಿ ಇವೆ. ಈಗಾಗಲೇ ಅಭ್ಯಾಸ ಪಂದ್ಯಗಳು ಸಹ ನಡೆಯುತ್ತಿವೆ. ಇನ್ನು ಈ ಟೂರ್ನಿ ವಿರಾಟ್ ಕೊಹ್ಲಿಯವರಿಗೆ ನಾಯಕನಾಗಿ ಕೊನೆ ಟೂರ್ನಿಯಾಗಿದ್ದು , ಶತಾಯಗತಾಯವಾಗಿ ಈ ಭಾರಿ ಗೆಲ್ಲಲೇಬೆಕೆಂದು ಪಣ ತೊಟ್ಟಿದ್ದಾರೆ. ಇನ್ನು ಈ ಬಗ್ಗೆ ಭಾರತ ತಂಡದ ಹಿರಿಯ ಕ್ರಿಕೇಟರ್ ಗಳು ತಮ್ಮ ಯೂಟ್ಯೂಬ್ ಚಾನೆಲ್ ಗಳಲ್ಲಿ ಮಾತನಾಡಿದ್ದಾರೆ. ಭಾರತ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಗೌತಮ್ ಗಂಭೀರ್ ಹಾಗೂ ಇರ್ಫಾನ್ ಪಠಾಣ್ ಈ ಬಗ್ಗೆ ಮಾತನಾಡಿದ್ದು ಭಾರತ ತಂಡದ X ಫ್ಯಾಕ್ಟರ್ ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಗಂಭೀರ್ ಪ್ರಕಾರ ಭಾರತ ತಂಡದ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಜಸ್ಪ್ರಿತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿಯವರು ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಿದರು. ಇದರಲ್ಲಿ ರಾಹುಲ್, ರೋಹಿತ್ ಮತ್ತು ವಿರಾಟ್ ಈ ಮೂವರಲ್ಲಿ ಯಾರಾದರೊಬ್ಬರು ಇನ್ನಿಂಗ್ಸ್ ಪೂರ್ತಿ ಆಡುವ ಜವಾಬ್ದಾರಿಯನ್ನು ಹೊರಬೇಕು. ಆಗ ಭಾರತ ತಂಡ ಮತ್ತಷ್ಟು ಬಲಿಷ್ಠವಾಗುತ್ತದೆ. ಈ ಮೂವರ ವಿಕೇಟ್ ಕಳೆದು ಕೊಂಡರೇ ಭಾರತದ ಇನ್ನಿಂಗ್ಸ್ ಸಂಕಷ್ಟಕ್ಕೆ ಸಿಲುಕಬಹುದು ಎಂದು ಎಚ್ಚರಿಸಿದ್ದಾರೆ.

ಇನ್ನು ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿರುವ ಗಂಭೀರ್ ಮತ್ತು ಪಠಾಣ್, ವರುಣ್ ಚಕ್ರವರ್ತಿ ಹಾಗೂ ಜಸ್ಪ್ರಿತ್ ಬುಮ್ರಾ ಭಾರತ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ. ಅದರಲ್ಲಿಯೂ ಮಿಸ್ಟರಿ ಸ್ಪಿನ್ನರ್ ಆಗಿರುವ ವರುಣ್ ಚಕ್ರವರ್ತಿ ಎದುರಾಳಿ ತಂಡಗಳಿಗೆ ಒತ್ತಡ ಹೇರಲಿದ್ದಾರೆ. ಆದರೇ ನನ್ನ ಪ್ರಕಾರ ಜಸ್ಪ್ರಿತ್ ಬುಮ್ರಾ ಮಾತ್ರ ಭಾರತ ತಂಡದ ಪಾಲಿಗೆ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ. ಬುಮ್ರಾರಂತಹ ಬೌಲರ್ ವಿಶ್ವದಲ್ಲಿಯೇ ಇಲ್ಲ. ಅದು ಪವರ್ ಪ್ಲೇ ಆಗಲಿ, ಅಥವಾ ಸ್ಲಾಗ್ ಓವರ್ ಆಗಲಿ, ಬುಮ್ರಾ ಎಂದಿಗೂ ಅದ್ಭುತ ಬೌಲಿಂಗ್ ಮಾಡುತ್ತಾರೆ. ಹಾಗಾಗಿ ಅವರು ಭಾರತ ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ ಎಂದು ಹೇಳಿದರು.

ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯದಲ್ಲಿಯೇ ಭಾರತ ಅಭೂತ ಪೂರ್ವ ಜಯಗಳಿಸಿದರೇ, ಖಂಡಿತ ಟೂರ್ನಿಯಲ್ಲಿ ಭಾರತದ ಆತ್ಮವಿಶ್ವಾಸ ಹೆಚ್ಚುತ್ತದೆ. ಹಾಗಾಗಿ ಮೊದಲ ಪಂದ್ಯದಲ್ಲಿ ಗೆಲ್ಲುವ ಇಲೆವೆನ್ ರನ್ನ ತಂಡದಲ್ಲಿ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಗಂಭೀರ್ ಮತ್ತು ಪಠಾಣ್ ಪಾಕಿಸ್ತಾನ ವಿರುದ್ದ ಆಯ್ಕೆ ಮಾಡಿರುವ ತಂಡ ಇಂತಿದೆ. – ರಾಹುಲ್, ರೋಹಿತ್, ವಿರಾಟ್, ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,ಶಾರ್ದುಲ್ ಠಾಕೂರ್, ಅಶ್ವಿನ್, ಬುಮ್ರಾ, ಮಹಮದ್ ಶಮಿ, ಚಕ್ರವರ್ತಿ.

Post Author: Ravi Yadav