ರವಿಶಾಸ್ತ್ರಿ ರವರು ನಿವೃತ್ತಿಯಾದ ಮೇಲೆ ಏನು ಮಾಡುತ್ತಾರಂತೆ ಗೊತ್ತೇ?? ಆರ್ಸಿಬಿ ಅಭಿಮಾನಿಗಳಿಗೆ ಇಲ್ಲಿ ದೊಡ್ಡ ಸುದ್ದಿ.

ನಮಸ್ಕಾರ ಸ್ನೇಹಿತರೇ ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹುದ್ದೆ ಈ ಟಿ 20 ವಿಶ್ವಕಪ್ ನಂತರ ತೆರವಾಗಲಿದೆ. ರವಿಶಾಸ್ತ್ರಿ ನಂತರ ಕನ್ನಡಿಗ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಈ ಮಧ್ಯೆ ಕೋಚ್ ಮುಗಿದ ನಂತರ ಮುಂದೇನು ಎಂಬ ಪ್ರಶ್ನೆಗೆ ರವಿಶಾಸ್ತ್ರಿ ಯೋಚಿಸುತ್ತಿದ್ದು, ತಮ್ಮ ನೆಚ್ಚಿನ ಕೆಲಸ ಕ್ರಿಕೇಟ್ ಕಾಮೆಂಟರಿ ಅಥವಾ ಐಪಿಎಲ್ ತಂಡದ ಕೋಚ್ ಆಗಲು ಚಿಂತಿಸಿದ್ದಾರಂತೆ. ವರ್ಷ ಪೂರ್ತಿ ತಂಡದ ಜೊತೆ ಇರುವ ಬದಲು ಕೇವಲ ಯಾವುದಾದರೊಂದು ಸೀಸನ್ ನಲ್ಲಿ ಮಾತ್ರ ಕ್ರಿಕೇಟ್ ಚಟುವಟಿಕೆಯಲ್ಲಿ ಭಾಗಿಯಾಗಿ,

ಉಳಿದ ಸಮಯದಲ್ಲಿ ಕುಟುಂಬದ ಜೊತೆ ಕಾಲ ಕಳೆಯುವ ಚಿಂತನೆಯನ್ನು ರವಿಶಾಸ್ತ್ರಿ ಹೊಂದಿದ್ದಾರೆಂದು ಮೂಲಗಳು ತಿಳಿಸಿವೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಶುಭಸುದ್ದಿಯೊಂದು ದೊರಕಿದ್ದು, ಸದ್ಯ ಆರ್ಸಿಬಿ ತಂಡದ ಮುಖ್ಯ ಕೋಚ್ ಹುದ್ದೆ ಖಾಲಿಯಿದ್ದು, ಮುಂದಿನ ಸಾರ್ವತ್ರಿಕ ಹರಾಜಿನ ವೇಳೆ ಸಂಪೂರ್ಣ ತಂಡವನ್ನೇ ಬದಲಿಸುವ ಚಿಂತನೆಯಲ್ಲಿ ತಂಡದ ಮ್ಯಾನೇಜ್ ಮೆಂಟ್ ಚಿಂತಿಸುತ್ತಿದೆ. ಈಗಿರುವ ಕೋಚ್ ಮೈಕ್ ಹಸನ್ ರವರನ್ನ ಕೈ ಬಿಟ್ಟು ಅವರ ಸ್ಥಾನಕ್ಕೆ ರವಿಶಾಸ್ತ್ರಿರವರನ್ನ ಕರೆತರಲು ಗಂಭೀರ ಚಿಂತನೆ ನಡೆಸುತ್ತಿದೆ.

ಇನ್ನೊಂದೆಡೆ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ನಡುವಿನ ಸಂಭಂದ ಸಹ ಉತ್ತಮವಾಗಿದ್ದು, ಹಾಗಾಗಿ ರವಿಶಾಸ್ತ್ರಿಯವರನ್ನೇ ಕೋಚ್ ಹುದ್ದೆಗೆ ತರಲು ವಿರಾಟ್ ಸಹ ಪ್ರಯತ್ನಿಸುತ್ತಿದ್ದಾರಂತೆ. ನಾಯಕನಾಗಿ ಕೊನೆ ಸೀಸನ್ ನಲ್ಲಿ ಏಲಿಮಿನೇಟರ್ ಪಂದ್ಯದಲ್ಲಿ ಸೋತಿರುವ ವಿರಾಟ್, ಮುಂದಿನ ಸೀಸನ್ ಗಳಲ್ಲಿ ನಾಯಕನಾಗಿ ಆರ್ಸಿಬಿ ತಂಡದ ಪರ ಆಡುವುದಿಲ್ಲ, ಬದಲಾಗಿ ಆಟಗಾರನಾಗಿರುತ್ತಾರೆ. ಹೀಗಾಗಿ ಆರ್ಸಿಬಿ ತಂಡಕ್ಕೆ ಹೊಸ ನಾಯಕನ ಅಗತ್ಯ ಸಹ ಇದೆ. ಜೊತೆಗೆ ತಂಡವನ್ನ ಹೊಸದಾಗಿ ಕ್ರಿಯೇಟ್ ಮಾಡಬೇಕಿದೆ. ಈ ಎಲ್ಲಾ ಗಮನಗಳನ್ನ ಮುಂದಿಟ್ಟುಕೊಂಡು ಆರ್ಸಿಬಿ ತಂಡಕ್ಕೆ ರವಿಶಾಸ್ತ್ರಿಯವರೇ ಮುಖ್ಯ ಕೋಚ್ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav