ಇಂಗ್ಲೆಂಡ್ ವಿರುದ್ಧ ಜಯಗಳಿಸಿದ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮತ್ತೊಂದು ಚಿಂತೆ ಆರಂಭ, ಹೊಸ ತಲೆನೋವು ಆರಂಭ.

ನಮಸ್ಕಾರ ಸ್ನೇಹಿತರೇ ಬಹು ನೀರಿಕ್ಷಿತ ಟಿ 20 ವಿಶ್ವಕಪ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಅದಕ್ಕೆ ಪೂರಕವೆಂಬಂತೆ ಸೂಪರ್ 12 ತಂಡಗಳಿಗೆ ಅಭ್ಯಾಸ ಪಂದ್ಯಗಳನ್ನು ಸಹ ಐಸಿಸಿ ಏರ್ಪಾಡು ಮಾಡಿದೆ. ಇನ್ನು ನಿನ್ನೆ ನಡೆದ ಮೊದಲನೇ ಅಭ್ಯಾಸ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಶುಭಾರಂಭ ಮಾಡಿದೆ. ಆದರೂ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಈಗ ಚಿಂತೆಯೊಂದು ಶುರು ಆಗಿದೆ.

ಹೌದು ನಿನ್ನೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ಇಪ್ಪತ್ತು ಓವರ್ ಗಳಲ್ಲಿ ಬರೋಬ್ಬರಿ 188 ರನ್ ಕಲೆ ಹಾಕಿತ್ತು. ಮಹಮದ್ ಶಮಿ ಮೂರು ವಿಕೇಟ್ ಕಿತ್ತು ಮಿಂಚಿದರೇ, ಜಸ್ಪ್ರಿತ್ ಬುಮ್ರಾ ಹಾಗೂ ಆರ್.ಅಶ್ವಿನ್ ಕರಾರುವಕ್ಕಾಗಿ ಬೌಲಿಂಗ್ ಮಾಡಿದರು. ಆದರೇ ತಂಡದ ಇನ್ನಿತರ ಪ್ರಮುಖ ಬೌಲರ್ ಗಳಾದ ರಾಹುಲ್ ಚಾಹರ್ ಮತ್ತು ಸ್ವಿಂಗ್ ಬೌಲರ್ ಗಳಾದ ಭುವನೇಶ್ವರ್ ಕುಮಾರ್ ಬೌಲಿಂಗ್ ಬಹಳಷ್ಟು ನಿಸ್ತೇಜವಾಗಿತ್ತು. ಅದಲ್ಲದೇ ಇಬ್ಬರೂ ಸೇರಿ ತಮ್ಮ ಎಂಟು ಓವರ್ ಗಳಲ್ಲಿ 98 ರನ್ ಬಿಟ್ಟುಕೊಟ್ಟರು. ಇದು ಮುಂದಿನ ಪಂದ್ಯಗಳ ಬಗ್ಗೆ ತಲೆನೋವು ಬರುವಂತಾಗಿದೆ.

ಇನ್ನು ಬೃಹತ್ ಟಾರ್ಗೇಟ್ ನ ಚೇಸ್ ಮಾಡಲು ನಿಂತ ಭಾರತಕ್ಕೆ ಕೆ.ಎಲ್.ರಾಹುಲ್ ಹಾಗೂ ಇಶಾನ್ ಕಿಶನ್ ಭರ್ಜರಿ ಆರಂಭ ಒದಗಿಸಿದರು. ರಾಹುಲ್ 24 ಎಸೆತಗಳಲ್ಲಿ 52 ರನ್ ಸಿಡಿಸಿದರೇ, ಇಶಾನ್ ಕಿಶಾನ್ 42 ಎಸೆತಗಳಲ್ಲಿ 70 ರನ್ ಭಾರಿಸಿದರು. ಆದರೇ ನಂತರ ಬಂದ ರನ್ ಮಶೀನ್ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿ ಕಂಡು ಬಂದರೂ, ಕೆಟ್ಟ ಹೊಡೆತಕ್ಕೆ ಹೋಗಿ ಔಟಾದರು. ಆದರೇ ನಂತರ ಬಂದ ಸೂರ್ಯಕುಮಾರ್ ಎಂದಿನಂತೆ ಕಳಪೆ ಫಾರ್ಮ್ ಮುಂದುವರಿಸಿದರು. ಐಪಿಎಲ್ ನಲ್ಲಿಯೂ ಕಳಪೆ ಆಟ ಆಡಿದ್ದ ಸೂರ್ಯ, ಈಗ ಟಿ 20 ವಿಶ್ವಕಪ್ ನಲ್ಲಿಯೂ ಸಹ ಅದನ್ನೇ ಮುಂದುವರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿ ಹೊರಬೇಕಿರುವ ಸೂರ್ಯ ಕುಮಾರ್ ಯಾದವ್ ಹೀಗೆ ಪದೇ ಪದೇ ವಿಫಲರಾಗುತ್ತಿರುವುದು ಸದ್ಯ ಭಾರತ ತಂಡದ ಪಾಲಿಗೆ ತಲೆನೋವಾಗಿದೆ. ಇನ್ನು ಆಲ್ ರೌಂಡರ್ ಕೋಟಾದಡಿಯಲ್ಲಿ ಸ್ಥಾನ ಪಡೆದಿರುವ ಹಾರ್ದಿಕ್ ಪಾಂಡ್ಯ ಒಂದೇ ಒಂದು ಎಸೆತವನ್ನು ಸಹ ಬೌಲ್ ಮಾಡಲಿಲ್ಲ. ಇದು ಸಹ ತಂಡದ ಸಂಯೋಜನೆಗೆ ತೊಡಕಾಗಿದೆ. ಆದರೇ ಈ ಎಲ್ಲಾ ಗೊಂದಲಗಳ ಮಧ್ಯೆ ಭಾರತ ತಂಡ ಟಿ 20 ವಿಶ್ವಕಪ್ ಗೆಲ್ಲಲಿದೆ ಎಂಬ ವಿಶ್ವಾಸ ಅಭಿಮಾನಿಗಳಿಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav