ಶತಾಯಗತಾಯ ವಿಶ್ವಕಪ್ ಗೆಲ್ಲಲು ಪಣ ತೊಟ್ಟ ರವಿಶಾಸ್ತ್ರಿ, ಮಾಡಿರುವ ಮಾಸ್ಟರ್ ಬ್ಲೂ ಪ್ರಿಂಟ್, ಹೇಗೆ ಗೊತ್ತೇ??

ಶತಾಯಗತಾಯ ವಿಶ್ವಕಪ್ ಗೆಲ್ಲಲು ಪಣ ತೊಟ್ಟ ರವಿಶಾಸ್ತ್ರಿ, ಮಾಡಿರುವ ಮಾಸ್ಟರ್ ಬ್ಲೂ ಪ್ರಿಂಟ್, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇದೇ ಅಕ್ಟೋಬರ್ 23 ರಿಂದ ಟಿ 20 ವಿಶ್ವಕಪ್ ನಡೆಯಲಿದೆ. ಅಕ್ಟೋಬರ್ 24 ರಿಂದ ಭಾರತ ತನ್ನ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನದ ವಿರುದ್ದ ತನ್ನ ಮೊದಲ ಪಂದ್ಯ ಆಡುವ ಮೂಲಕ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಈ ಭಾರಿ ಶತಾಯಗತಾಯ ವಿಶ್ವಕಪ್ ಗೆಲ್ಲಲೇಬೇಕೆಂದು ನಿರ್ಧರಿಸಿರುವ ಭಾರತ ಈಗಾಗಲೇ ಅದಕ್ಕೆ ತಕ್ಕ ಯೋದನೆಗಳನ್ನ ಹಾಕಿಕೊಂಡಿದೆಯಂತೆ.

ಇನ್ನು ಈ ಟಿ 20 ವಿಶ್ವಕಪ್ ಭಾರತ ತಂಡಕ್ಕೆ ವಿಶೇಷವಾಗಿದೆ. ಈ ವಿಶ್ವಕಪ್ ನಂತರ ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಕೋಚಿಂಗ್ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. ಅದೇ ರೀತಿ ಭಾರತ ತಂಡದ ನಾಯಕರಾಗಿರುವ ವಿರಾಟ್ ಕೋಹ್ಲಿ ಈ ಸರಣಿಯ ನಂತರ ಭಾರತ ತಂಡದ ಟಿ 20 ನಾಯಕತ್ವವನ್ನು ತೊರೆಯಲಿದ್ದಾರೆ. ಹಾಗಾಗಿ ಶತಾಯಗತಾಯವಾಗಿ ಈ ಭಾರಿ ವಿಶ್ವಕಪ್ ಎತ್ತಿಹಿಡಿಯಬೇಕೆಂಬ ಭಾರತ ತಂಡದ ಹಂಬಲ ಜೋರಾಗಿದೆ.

ನಾಯಕ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಜೋಡಿ 2017 ರಿಂದ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ದೇಶಗಳಲ್ಲಿ ಹೋಗಿ ಟೆಸ್ಟ್ ಸರಣಿಗಳನ್ನ ಗೆದ್ದಿತ್ತು. ಏಕದಿನ ಹಾಗೂ ಟಿ 20 ಪಂದ್ಯಗಳಲ್ಲಿ ಮಿಂಚಿತ್ತು. ಆದರೇ ಒಂದೇ ಒಂದು ಐಸಿಸಿ ಚಾಂಪಿಯನ್ ಶಿಪ್ ಟ್ರೋಫಿಯನ್ನ ಈ ಜೋಡಿ ಗೆದ್ದಿಲ್ಲವೆಂಬುದು ಬಿಸಿಸಿಐಗೆ ಇರುವ ಅಸಮಾಧಾನವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ, ಐಸಿಸಿ ಎಕದಿನ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸಹ ಭಾರತ ತಂಡ ಮುಗ್ಗರಿಸಿತ್ತು.

ಹೀಗಾಗಿ ಈ ಭಾರಿ ಶತಾಯಗತಾಯ ಟ್ರೋಫಿ ತಪ್ಪಬಾರದೆಂದು ನಿರ್ಧರಿಸಿರುವ ರವಿಶಾಸ್ತ್ರಿ ಈಗಾಗಲೇ ಭಾರತ ತಂಡದ ಸಹಾಯಕ ಕೋಚ್ ಸಿಬ್ಬಂದಿಯನ್ನ ಯು.ಎ.ಇ ಗೆ ಕಳುಹಿಸಿಕೊಟ್ಟಿದ್ದಾರಂತೆ. ಐಪಿಎಲ್ ಲೀಗ್ ಹಂತ ಮುಗಿದ ನಂತರ ಲಭ್ಯವಿರುವ ಆಟಗಾರಿಗೆ ಈಗಾಗಲೇ ಅಭ್ಯಾಸ ಆರಂಭವಾಗಿದೆಯಂತೆ. ಅದಲ್ಲದೇ ತಂಡಕ್ಕೆ ಅನುಕೂಲವಾಗಲು ಅಕ್ಟೋಬರ್ 18 ರಂದು ಇಂಗ್ಲೆಂಡ್ ವಿರುದ್ದ ಹಾಗೂ ಅಕ್ಟೋಬರ್ 20 ರಂದು ಆಸ್ಟ್ರೇಲಿಯಾದ ವಿರುದ್ದ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಈ ವೇಳೆ ವಿರೋಧಿಗಳ ಶಕ್ತಿ ಸಾಮರ್ಥ್ಯಕ್ಕನುಗುಣವಾಗಿ ಈಗಾಗಲೇ ಬ್ಲೂ ಪ್ರಿಂಟ್ ತಯಾರಿಸಿರುವ ರವಿ ಶಾಸ್ತ್ರಿ ಅನುಷ್ಠಾನಗೊಳಿಸಲು ಎದುರು ನೋಡುತ್ತಿದ್ದಾರಂತೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.