ಚಿತ್ರಮಂದಿರದ ಗಳಿಕೆ ಬಿಟ್ಟು ಬಿಡಿ, ಕೇವಲ ಇತರ ದಾರಿಯಲ್ಲಿ ಕೋಟಿಗೊಬ್ಬ೩ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?? ಅಭಿಮಾನಿಗಳು ಫುಲ್ ಕುಶ್.

ನಮಸ್ಕಾರ ಸ್ನೇಹಿತರೇ ಅಕ್ಟೋಬರ್ 15ರಂದು ವಿಜಯದಶಮಿಯ ವಿಶೇಷವಾಗಿ ಸೂರಪ್ಪ ಬಾಬು ನಿರ್ಮಾಣದ ಶಿವ ಕಾರ್ತಿಕ್ ನಿರ್ದೇಶನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರ ರಾಜ್ಯಾದ್ಯಂತ ಹಾಗೂ ದೇಶದಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಒಂದು ದಿನ ಲೇಟಾಗಿ ಬಿಡುಗಡೆಯಾದರೂ ಕೂಡ ಲೇಟೆಸ್ಟ್ ಆಗಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಮನರಂಜನೆಯ ಮಹಾ ಊಟವನ್ನೇ ಉಣಬಡಿಸಿತು. ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆಯನ್ನು ಕೂಡ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು ನೋಡಿ ಆನಂದಿಸಿದರು.

ಇನ್ನು ಕೋಟಿಗೊಬ್ಬ 3 ಚಿತ್ರದಲ್ಲಿ ರವಿಶಂಕರ್ ಅವರ ನಟನೆ ಕೂಡ ಎಲ್ಲರ ಮನಗೆದ್ದಿತ್ತು. ಹಬ್ಬದ ದಿನವಾಗಿದ್ದರಿಂದ ಬಾಕ್ಸ್ ಆಫೀಸ್ ನಲ್ಲಿ ಕೂಡ ಕೋಟಿಗೊಬ್ಬ3 ಚಿತ್ರ ಉತ್ತಮವಾದ ಗಳಿಗೆಯನ್ನು ಕಂಡಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಈಗಾಗಲೇ ಚಿತ್ರದ ನಿರ್ಮಾಪಕರಾಗಿರುವ ಸೂರಪ್ಪ ಬಾಬು ರವರು ಲಾಭದಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಒಂದು ದೊಡ್ಡ ಚಿತ್ರದ ಎದುರಿಗೆ ಬಿಡುಗಡೆಯಾಗಿ ಕೂಡ ಬಾಕ್ಸ್ ಆಫೀಸ್ ನಲ್ಲಿ ಈ ಮಟ್ಟದ ಕಲೆಕ್ಷನ್ ಮಾಡಿದೆ ಎಂದರೆ ಖಂಡಿತವಾಗಿ ಕೋಟಿಗೊಬ್ಬ3 ಚಿತ್ರದ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜನಪ್ರಿಯತೆಯನ್ನು ಮೆಚ್ಚಲೇಬೇಕು.

ಇನ್ನು ಚಿತ್ರಮಂದಿರದಲ್ಲಿ ಗಳಿಸಿರುವ ಗಳಿಕೆಯನ್ನು ಹೊರತುಪಡಿಸಿ ಕೋಟಿಗೊಬ್ಬ3 ಚಿತ್ರ ಎಷ್ಟು ಹಣವನ್ನು ಇಲ್ಲಿಯವರೆಗೆ ಗಳಿಸಿದೆ ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ. ಹೌದು ಸ್ನೇಹಿತರೆ ಬಾಕ್ಸಾಫೀಸ್ ನಲ್ಲಿ ಈಗಾಗಲೇ ಕೋಟಿಗಟ್ಟಲೆ ಬಾಸುತ್ತಿರುವ ಕೋಟಿಗೊಬ್ಬ 3 ಚಿತ್ರ ಡಿಜಿಟಲ್ ಹಕ್ಕು ಆಡಿಯೋ ಹಕ್ಕು ಹೀಗೆ ಇತರ ಮಾಧ್ಯಮಗಳ ಮೂಲಕ ಒಟ್ಟು ಈಗಾಗಲೇ 29 ಕೋಟಿಗೂ ಅಧಿಕ ಹಣ ಗಳಿಸಿದೆ. ಇನ್ನು ಚಿತ್ರಮಂದಿರದಲ್ಲಿ ಈಗಾಗಲೇ 35 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ ಎಂಬ ಸುಳಿವು ಸಿಗುತ್ತಿದೆ. ನಿಮ್ಮ ಪ್ರಕಾರ ಕೋಟಿಗೊಬ್ಬ3 ಚಿತ್ರ ಒಟ್ಟು ಎಷ್ಟು ಕಲೆಕ್ಷನ್ ಮಾಡಬಹುದು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav