ಭಾರತ ತಂಡಕ್ಕೆ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಸಿಕ್ಕ ಟಾಪ್ 5 ರತ್ನಗಳು ಯಾವ್ಯಾವು ಗೊತ್ತೇ?? ಇವರಲ್ಲಿ ನಿಮ್ಮ ಭರವಸೆಯ ಆಟಗಾರ ಯಾರು??

ಭಾರತ ತಂಡಕ್ಕೆ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಸಿಕ್ಕ ಟಾಪ್ 5 ರತ್ನಗಳು ಯಾವ್ಯಾವು ಗೊತ್ತೇ?? ಇವರಲ್ಲಿ ನಿಮ್ಮ ಭರವಸೆಯ ಆಟಗಾರ ಯಾರು??

ನಮಸ್ಕಾರ ಸ್ನೇಹಿತರೇ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತ ಕ್ರಿಕೇಟ್ ಜಗತ್ತಿಗೆ ಹೊಸ ಸಂಚಲನ ಮೂಡಿಸಿದ ಟೂರ್ನಿ. ಇಲ್ಲಿ ಬೆಳಕಿಗೆ ಬಂದ ಅದೆಷ್ಟೋ ಪ್ರತಿಭೆಗಳು ಅಂತರಾಷ್ಟ್ರೀಯ ಕ್ರಿಕೇಟ್ ನಲ್ಲಿ ಮಿಂಚಿದವರಾಗಿದ್ದಾರೆ. ಪ್ರತಿ ಸೀಸನ್ ನಲ್ಲಿಯೂ ಭಾರತ ತಂಡ ಪ್ರತಿನಿಧಿಸುವ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ಈ ಸೀಸನ್ ನಲ್ಲಿ ಬೆಳಕಿಗೆ ಬಂದ ಭಾರತ ತಂಡದ ಟಾಪ್ – 5 ಪ್ರತಿಭೆಗಳು ಈ ಕೆಳಗಿನಂತಿದ್ದಾರೆ.

ಟಾಪ್ 5 : ಅರ್ಶದೀಪ್ ಸಿಂಗ್ – ಪಂಜಾಬ್ ಕಿಂಗ್ಸ್ ತಂಡದ ಅರ್ಶದೀಪ್ ಈ ಭಾರಿ ಬೆಳಕಿಗೆ ಬಂದ ಆಟಗಾರ. ಕಳೆದ ಸೀಸನ್ ನಲ್ಲಿ ಆಡಿದ್ದರೂ, ಈ ಸೀಸನ್ ನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ್ದರು. ಐದು ವಿಕೇಟ್ ಗೊಂಚಲನ್ನು ಸಹ ಪಡೆದಿದ್ದರು. ಮುಂದಿನ ದಿನಗಳಲ್ಲಿ ಭಾರತ ತಂಡವನ್ನ ಪ್ರತಿನಿಧಿಸುವ ಸಾಧ್ಯತೆ ಇದೆ.

ಟಾಪ್ 4 – ವೆಂಕಟೇಶ್ ಅಯ್ಯರ್ : ಕೆಕೆಆರ್ ತಂಡ ಯು.ಎ.ಇ ಯಲ್ಲಿ ನಡೆದ ಪಂದ್ಯಗಳಿಂದ ಅಯ್ಯರ್ ಗೆ ಸ್ಥಾನ ನೀಡಿತು. ಅಯ್ಯರ್ ಕಾರಣದಿಂದಲೇ ಕೆಕೆಆರ್ ಫೈನಲ್ ತಲುಪಲು ಪ್ರಮುಖ ಕಾರಣವೆಂದರೇ ಅದು ಅಯ್ಯರ್ ಬ್ಯಾಟಿಂಗ್ ಎಂದು ಹೇಳಬಹುದು. ಆಲ್ ರೌಂಡರ್ ಅಯ್ಯರ್ 10 ಪಂದ್ಯಗಳಿಂದ 370 ರನ್ ಗಳಿಸಿ, ಮೂರು ವಿಕೇಟ್ ಪಡೆದರು.

ಟಾಪ್ 3 : ಆವೇಶ್ ಖಾನ್ – ದೆಹಲಿ ತಂಡದಲ್ಲಿ ಇಶಾಂತ್ ಶರ್ಮಾ ಗಾಯಗೊಂಡ ಕಾರಣ ತಂಡದಲ್ಲಿ ಸ್ಥಾನ ಪಡೆದ ಆವೇಶ್ ಖಾನ್, ನಂತರ ತಮ್ಮ ಸ್ಥಾನವನ್ನ ಭದ್ರಪಡಿಸಿಕೊಂಡರು. ಆಡಿರುವ 16 ಪಂದ್ಯಗಳಲ್ಲಿ 23 ವಿಕೇಟ್ ಕಬಳಿಸಿ ಭಾರತ ತಂಡದ ಕದ ತಟ್ಟುತ್ತಿದ್ದಾರೆ.

ಟಾಪ್ 2 : ಋತುರಾಜ್ ಗಾಯಕ್ವಾಡ್ – ಈ ಸೀಸನ್ ನ ಆರೆಂಜ್ ಕ್ಯಾಪ್ ವಿಜೇತರಾಗಿರುವ ಋತುರಾಜ್ , ಶ್ರೀಲಂಕಾ ಸರಣಿಯಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ್ದರು. ಭವಿಷ್ಯದ ದಿನಗಳಲ್ಲಿ ಭಾರತ ತಂಡವನ್ನ ಪ್ರತಿನಿಧಿಸುವ ಭರವಸೆಯ ಬ್ಯಾಟ್ಸಮನ್ ಆಗಿದ್ದಾರೆ.

ಟಾಪ್ 1 : ಹರ್ಷಲ್ ಪಟೇಲ್ – ಹಲವಾರು ವರ್ಷಗಳಿಂದ ಐಪಿಎಲ್ ಆಡುತ್ತಿದ್ದ ಹರ್ಷಲ್ ಪಟೇಲ್ ಗೆ ಈ ಸೀಸನ್ ಮಾತ್ರ ಮರೆಯಲಾಗದಂತಹ ಅನುಭವ ನೀಡಿತು. ಪರ್ಪಲ್ ಕ್ಯಾಪ್ ವಿಜೇತರಾದ ಹರ್ಷಲ್ 15 ಪಂದ್ಯಗಳಲ್ಲಿ 32 ವಿಕೇಟ್ ಪಡೆದು ಮಿಂಚಿದರು. ಮುಂಬರುವ ನ್ಯೂಜಿಲೆಂಡ್ ವಿರುದ್ದದ ಪ್ರವಾಸದಲ್ಲಿ ಹರ್ಷಲ್ ಪಟೇಲ್ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.