ತನ್ನ ಹರಾಜಿನ ಹಣಕ್ಕಿಂತ ಹೆಚ್ಚಿನದನ್ನು ಗಳಿಸಿದ ಹರ್ಷಲ್ ಪಟೇಲ್, ಈ ಐಪಿಎಲ್ ನಲ್ಲಿ ಪಡೆದ ಬಹುಮಾನದ ಹಣ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಮಯ ಎಲ್ಲವನ್ನೂ ಸರಿಪಡಿಸುತ್ತದೆ, ಸಮಾಧಾನದಿಂದಿರಿ ಎಂಬ ನಾಣ್ಣುಡಿ ಜನಪ್ರಿಯವಾಗಿದೆ. ಇದು ಹರ್ಷಲ್ ಪಟೇಲ್ ವಿಷಯದಲ್ಲಿ ನಿಜವಾಗಿದೆ. 2011 ರಲ್ಲಿ ಐಪಿಎಲ್ ಗೆ ಪದಾರ್ಪಣೆ ಮಾಡಿದರೂ, ಹರ್ಷಲ್ ಪಟೇಲ್ ನೆಟ್ಸ್ ನಲ್ಲಿ ಉತ್ತಮವಾಗಿ ಚೆಂಡೆಸೆಯುತ್ತಿದ್ದರು. ಆದರೇ ಆಡುವ ಸಂದರ್ಭದಲ್ಲಿ ದುಬಾರಿಯಾಗುತ್ತಿದ್ದರು. ಹೀಗಾಗಿ ಹರ್ಷಲ್ ರನ್ನ ಹಲವಾರು ಫ್ರಾಂಚೈಸಿಗಳು ಖರೀದಿಸಿದರೂ, ಆಡುವ ಬಳಗದಲ್ಲಿ ಅವಕಾಶ ಆಗೊಮ್ಮೆ ಈಗೊಮ್ಮೆ ಸಿಗುತ್ತಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಒಮ್ಮೆ ಖರೀದಿಸಿ, ಹೆಚ್ಚು ಪಂದ್ಯಗಳನ್ನ ಆಡಿಸದೇ ಆ ನಂತರ ಕೈ ಬಿಟ್ಟಿತ್ತು.

ಆದರೇ 2021 ಹರ್ಷಲ್ ಪಾಲಿಗೆ ಲಕ್ಕಿ ಎನಿಸಿತು. ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಹರ್ಷಲ್ ರನ್ನ ಟ್ರಾನ್ಸಫರ್ ರೂಪದಲ್ಲಿ 20 ಲಕ್ಷ ರೂಪಾಯಿಗೆ ಆರ್ಸಿಬಿ ಖರೀದಿಸಿತು. ಮೊದಲು ಸಂಭಾವ್ಯ ಇಲೆವೆನ್ ನಲ್ಲಿ ಇವರ ಹೆಸರು ಸಹ ಇರಲಿಲ್ಲ. ಆದರೇ ಆಡುವ ಅವಕಾಶ ಪಡೆದ ಹರ್ಷಲ್, ಮುಂಬೈ ವಿರುದ್ದ ಮೊದಲ ಪಂದ್ಯದಲ್ಲೇ ಐದು ವಿಕೇಟ್ ಪಡೆದು ಮಿಂಚಿದರು. ಇಷ್ಟು ವರ್ಷ ಪೇಸ್ ಗೆ ಆದ್ಯತೆ ನೀಡುತ್ತಿದ್ದ ಹರ್ಷಲ್, ಈ ಭಾರಿ ಸ್ಲೋವರ್ ಎಸೆತ, ಲೋ ಫುಲ್ಟಾಸ್, ಯಾರ್ಕರ್ ಗಳನ್ನ ಕರಾರುವಕ್ಕಾಗಿ ಹಾಕಲು ಶುರು ಮಾಡಿದರು. ಇದು ಆರ್ಸಿಬಿ ತಂಡದ ಫಲಿತಾಂಶದ ಮೇಲೆ ಗಣನೀಯ ಪ್ರಮಾಣದಲ್ಲಿ ಪರಿಣಾಮ ಬೀರಿತು. ಸ್ಲಾಗ್ ಓವರ್ ಗಳಲ್ಲಿ ವೀಪರೀತ ರನ್ ನೀಡುತ್ತಿದ್ದ ಆರ್ಸಿಬಿ ಈ ಭಾರಿ ಆ ಸಮಯದಲ್ಲಿ ಕಡಿಮೆ ರನ್ ನೀಡಲು ಶುರು ಮಾಡಿತು. ಇದು ಸಹಜವಾಗಿ ಆರ್ಸಿಬಿಗೆ ಗೆಲುವಿನ ಅವಕಾಶವನ್ನ ತೆರೆಯಿತು. ಹರ್ಷಲ್ ಪಟೇಲ್ ಸ್ಲಾಗ್ ಓವರ್ ಗಳಲ್ಲಿ ಹೆಚ್ಚು ವಿಕೇಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಸಹ ತಮ್ಮದಾಗಿಸಿಕೊಂಡರು.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಭಾರಿ ಅಂತರಾಷ್ಟ್ರೀಯ ಕ್ರಿಕೇಟ್ ಪದಾರ್ಪಣೆ ಮಾಡದ ಆಟಗಾರನೊಬ್ಬ ಅತಿ ಹೆಚ್ಚು ವಿಕೇಟ್ ಪಡೆದ ದಾಖಲೆ ನಿರ್ಮಿಸಿದ್ದಾರೆ. 15 ಪಂದ್ಯ ಆಡಿ ಅದರಲ್ಲಿ 32 ವಿಕೇಟ್ ಪಡೆದಿದ್ದಾರೆ. ಆರ್ಸಿಬಿ ಫೈನಲ್ ಗೆ ಬಂದಿದ್ದರೇ ಹರ್ಷಲ್ ಮತ್ತಷ್ಟು ವಿಕೇಟ್ ಸಹ ಪಡೆಯುವ ಸಾಧ್ಯತೆ ಇತ್ತು. ಇನ್ನು ಇದು ಸಹಜವಾಗಿಯೇ ಹರ್ಷಲ್ ಪಟೇಲ್ ರ ಜೇಬು ಸಹ ತುಂಬಿಸಿದೆ. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾವನ್ನ ಪ್ರತಿನಿಧಿಸುವ ಸಾಧ್ಯತೆಯ ಜೊತೆಗೆ ಮುಂದಿನ ಐಪಿಎಲ್ ಹರಾಜಿನಲ್ಲಿ ಹೆಚ್ಚು ಮೊತ್ತಕ್ಕೆ ಸಹ ಬಿಕರಿಯಾಗುವ ಎಲ್ಲಾ ಸಾಧ್ಯತೆಗಳು ಇವೆ. ಹರ್ಷಲ್ ಈ ಭಾರಿ ಐಪಿಎಲ್ ನ ಸರಣಿ ಶ್ರೇಷ್ಠ ಪ್ರಶಸ್ತಿ, ಪರ್ಪಲ್ ಕ್ಯಾಪ್ ಪ್ರಶಸ್ತಿ, ಗೇಮ್ ಚೆಂಜರ್ ಪ್ರಶಸ್ತಿ ಹಾಗೂ ಮೋಸ್ಟ್ ವ್ಯಾಲುವೇಬಲ್ ಆಟಗಾರ ಎಂಬ ಪ್ರಶಸ್ತಿಗೂ ಸಹ ಭಾಜನರಾಗಿದ್ದಾರೆ. ಈ ಮೂಲಕ ಫೈನಲ್ ಪಂದ್ಯದಲ್ಲಿ ಒಟ್ಟು 40 ಲಕ್ಷ ರೂಪಾಯಿ ಪಡೆದು ಕೊಂಡರು. ಇದಲ್ಲದೇ ಹಲವಾರು ಪಂದ್ಯಗಳಲ್ಲಿಯೂ ಪ್ರಶಸ್ತಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದ ಹರ್ಷಲ್ ಆ ಮೂಲಕ 10 ಲಕ್ಷಕ್ಕೂ ಹೆಚ್ಚು ಪ್ರಶಸ್ತಿ ಹಣ ಪಡೆದಿದ್ದಾರೆ. ಹೀಗಾಗಿ ಹರ್ಷಲ್ ತಮ್ಮ ಪ್ರದರ್ಶನದ ಮೂಲಕವೇ 50 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav