ದರ್ಶನ್ ರವರಿಗೆ ಶಾಕ್ ನೀಡಲು ಪ್ರಯತ್ನ ಪಟ್ಟ ಮಾಧ್ಯಮಗಳು, ಆದರೆ ದರ್ಶನ್ ಅಭಿಮಾನಿಗಳು ಮಾಡಿದ್ದೇನು ಗೊತ್ತೇ?? ಇದಪ್ಪ ಹವಾ ಅಂದ್ರೆ.

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ನಟನೆಯ 55ನೇ ಚಿತ್ರ ವಾದಂತಹ ಕ್ರಾಂತಿ ಚಿತ್ರದ ಮುಹೂರ್ತ ಪೂಜೆ ದೇವಸ್ಥಾನವೊಂದರಲ್ಲಿ ಅದ್ದೂರಿಯಾಗಿ ನಡೆದಿತ್ತು. ಹೌದು ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಮಾಣದಲ್ಲಿ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ ನಿರ್ದೇಶನದಲ್ಲಿ ಕ್ರಾಂತಿ ಚಿತ್ರ ಮೂಡಿ ಬರುತ್ತಿದ್ದು, ಈ ಚಿತ್ರದಲ್ಲಿ ನಾಯಕ ನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕಾಣಿಸಿಕೊಂಡರೆ ನಾಯಕ ನಟಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಪ್ರಮುಖ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುಮಲತಾ ಅಂಬರೀಶ್ ಅವರು ಕೂಡ ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯಕರ ಸುದ್ದಿಯಾಗಿದೆ. ಇನ್ನು ಇಷ್ಟೊಂದು ದೊಡ್ಡ ಸುದ್ದಿಯನ್ನು ಮಾಧ್ಯಮಗಳು ಯಾಕೆ ಪ್ರಚಾರ ಮಾಡುತ್ತಿಲ್ಲ ಎಂಬುದರ ಕುರಿತಂತೆ ಈಗ ಉತ್ತರ ಸಿಕ್ಕಿದೆ ಸ್ನೇಹಿತರೆ. ಈ ಹಿಂದೆ ಎಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡರ ಅವರ ನಡುವಿನ ಹಲವಾರು ವಿಚಾರಗಳು ಸುದ್ದಿಯಾಗಿದ್ದವು. ಈ ಸಂದರ್ಭದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕೂಡ ಇದರಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ನಿರ್ದೇಶಕ ಪ್ರೇಮ್ ರವರ ಕುರಿತಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾತುಗಳನ್ನು ಆಡಿದ್ದಾರೆ ಎಂಬುದಾಗಿ ವಾಹಿನಿಗಳು ಪ್ರಸಾರ ಮಾಡಿದವು. ಈ ಸಂದರ್ಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮಾಧ್ಯಮ ಮೂಲದ ವ್ಯಕ್ತಿಯೊಬ್ಬರಿಗೆ ಕರೆಮಾಡಿ ಕೆಟ್ಟ ಪದಗಳನ್ನು ಉಪಯೋಗಿಸಿ ಬೈದಿದ್ದರು ಎಂಬುದಾಗಿ ಸುದ್ದಿಯಾಗಿತ್ತು. ನಂತರ ಮಾಧ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ಷಮೆ ಕೇಳಿದರೆ ಮಾತ್ರ ಅವರ ಮುಂಬರುವ ಚಿತ್ರಗಳನ್ನು ನಾವು ಪ್ರಮೋಷನ್ ಮಾಡುತ್ತೇವೆ ಎಂಬುದಾಗಿ ಷರತ್ತನ್ನು ವಿಧಿಸಿದ್ದರು. ಆದರೆ ಇದಕ್ಕೆ ದರ್ಶನ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಬಹುಶಃ ಅದೇ ಕಾರಣಕ್ಕಾಗಿ ದರ್ಶನ್ ರವರ ಚಿತ್ರದ ಮುಹೂರ್ತ ನಡೆದರೂ ಕೂಡ ಯಾವ ಮಾಧ್ಯಮವು ಸುದ್ದಿ ಬಿತ್ತರಿಸಿಲ್ಲ. ಆದರೆ ಮಾಧ್ಯಮ ಇಲ್ಲದಿದ್ದರೆ ಏನಂತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬದಲಾಗಿ ಅವರ ಅಭಿಮಾನಿಗಳೇ ಪ್ರಮೋಷನ್ ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

Post Author: Ravi Yadav