ರವಿಶಾಸ್ತ್ರೀ ನಂತರ ಭಾರತದ ಕೋಚ್ ಯಾರಂತೆ ಗೊತ್ತೇ?? ಕೇಳದೆ ಇದ್ದರೂ ಬಿಸಿಸಿಐ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಇದಪ್ಪ ಹವಾ ಅಂದ್ರೆ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ವರ್ಷಗಳಿಂದ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್ ರವರು ಟೀಮ್ ಇಂಡಿಯಾದ ಆಗಬೇಕು ಎಂದು ಅಭಿಮಾನಿಗಳು ಕನಸು ಕಂಡಿದ್ದರು. ಅದೇ ಸಮಯದಲ್ಲಿ ಮತ್ತಷ್ಟು ಜನ ರಾಹುಲ್ ದ್ರಾವಿಡ್ ಅವರು ಯುವ ಆಟಗಾರರನ್ನು ಬಹಳ ಅದ್ಭುತವಾಗಿ ಪರ್ಫೆಕ್ಟ್ ಆಟಗಾರನನ್ನಾಗಿ ಮಾಡುತ್ತಾರೆ. ಆದ ಕಾರಣ ಅವರು ಅಂಡರ್ ನೈಂಟೀನ್ ತಂಡದ ಕೋಚ್ ಆಗಿರಲಿ ಎಂದು ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದ್ದವು. ಆದರೆ ಬಲಿಷ್ಠ ಭಾರತ ತಂಡ ಮಹತ್ವದ ಟೂರ್ನಿಗಳಲ್ಲಿ ಅಂದರೆ ಐಸಿಸಿ ಟೂರ್ನಮೆಂಟ್ ಗಳಲ್ಲಿ ಕಪ್ ಗೆಲ್ಲುವಲ್ಲಿ ಕಳೆದ ಎಂಟು ವರ್ಷಗಳಿಂದ ವಿಫಲವಾಗಿದೆ.

ಅದೇ ಕಾರಣಕ್ಕಾಗಿ ರವಿಶಾಸ್ತ್ರಿ ರವರ ಅವಧಿ ಮುಕ್ತಾಯಗೊಂಡ ತಕ್ಷಣ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ರವರು ಆಗಬೇಕು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಹಲವಾರು ಬಾರಿ ಬಿಸಿಸಿಐ ಕೂಡ ಆಫರ್ ನೀಡಿತ್ತು. ಆದರೆ ರಾಹುಲ್ ದ್ರಾವಿಡ್ ಯಾಕೋ ಗೊತ್ತಿಲ್ಲ ಆಸಕ್ತಿ ತೋರಿರಲಿಲ್ಲ. ಆದರೆ ಕೊನೆಗೂ ರಾಹುಲ್ ದ್ರಾವಿಡ್ ರವರು ಟೀಂ ಇಂಡಿಯಾ ಕೋಚ್ ಆಗಲು ಒಪ್ಪಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು ಸ್ನೇಹಿತರೇ ಟಿ ಟ್ವೆಂಟಿ ವಿಶ್ವಕಪ್ ಮುಗಿದ ಮೂರು ದಿನಗಳಲ್ಲಿ ರವಿಶಾಸ್ತ್ರಿ ರವರ ಕೋಚ್ ಅವಧಿ ಮುಕ್ತಾಯವಾಗಲಿದ್ದು ಮುಂದಿನ ಎರಡು ವರ್ಷಗಳ ಕಾಲ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಾಣಿಸಲಿದ್ದಾರೆ ಎಂಬುದು ತಿಳಿದು ಬಂದಿದೆ.

ಇನ್ನು ಈ ಸಮಯದಲ್ಲಿ ಗಮನಾರ್ಹವಾಗಿ ರಾಹುಲ್ ದ್ರಾವಿಡ್ ಅವರು ಎಂದು ಸಂಭಾವನೆ ಕುರಿತು ಆಲೋಚನೆ ಮಾಡಿಲ್ಲ, ಅದೇ ರೀತಿ ಈ ಬಾರಿಯೂ ಕೂಡ ಯಾವುದೇ ಬೇಡಿಕೆ ಇಟ್ಟಿಲ್ಲ ಎಂಬುದು ತಿಳಿದು ಬಂದಿದೆ. ಆದರೂ ಕೂಡ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ರಾಹುಲ್ ದ್ರಾವಿಡ್ ರವರು ಯಾವುದೇ ಬೇಡಿಕೆ ಇಡದೇ ಇದ್ದರೂ ಕೂಡ ರವಿಶಾಸ್ತ್ರಿ ರವರೆ ಗಿಂತ ಹೆಚ್ಚಿನ ಸಂಭಾವನೆಯನ್ನು ಘೋಷಣೆ ಮಾಡಿದೆ ಎಂಬುದು ತಿಳಿದು ಬಂದಿದೆ. ಹೌದು ಸ್ನೇಹಿತರೇ ಇದೀಗ ಬಂದಿರುವ ಮೂಲಗಳ ಪ್ರಕಾರ ಬಿಸಿಸಿಐ ವರ್ಷಕ್ಕೆ ರಾಹುಲ್ ದ್ರಾವಿಡ್ ರವರಿಗೆ ಸಂಭಾವನೆಯ ರೂಪದಲ್ಲಿ 10 ಕೋಟಿ ರೂಪಾಯಿಗಳನ್ನು ನೀಡಲಿದೆ ಎಂಬುದು ತಿಳಿದು ಬಂದಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದುಕೊಂಡ ಕೋಚ್ ಎಂಬ ಹೆಗ್ಗಳಿಕೆಗೆ ನಮ್ಮ ಕನ್ನಡಿಗರು ಪಾತ್ರರಾಗಲಿದ್ದಾರೆ. ಅದೇನೆ ಆಗಲಿ ರಾಹುಲ್ ದ್ರಾವಿಡ್ ಅವರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡ ಮತ್ತಷ್ಟು ಯಶಸ್ಸು ಕಂಡು ಇಡೀ ವಿಶ್ವದಲ್ಲಿ ಕೀರ್ತಿ ಪತಾಕೆ ಹಾರಿಸಲು ಎಂಬುದೇ ನಮ್ಮೆಲ್ಲರ ಆಶಯ.

Post Author: Ravi Yadav