ಯಶಸ್ಸಿನ ಮೆಟ್ಟಿಲು ಹತ್ತುವಾಗ ಸಲಗ ತಂಡಕ್ಕೆ ಶಾಕ್, ಸಿನಿಮಾ ನಿಲ್ಲಿಸಲು ಶುರುವಾಯಿತು ಪ್ರತಿಭಟನೆ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರ ರಾಜ್ಯಾದ್ಯಂತ ನಿನ್ನೆ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆತನ್ನು ಪ್ರೇಕ್ಷಕರಿಂದ ಪಡೆದುಕೊಂಡು ಬಾಕ್ಸಾಫೀಸ್ ನಲ್ಲಿ ಕೂಡ ಸಾಕಷ್ಟು ಯಶಸ್ಸನ್ನು ಕಂಡಿತ್ತು. ಹೌದು ಸ್ನೇಹಿತರ ಕೆಪಿ ಶ್ರೀಕಾಂತ್ ನಿರ್ಮಾಣದ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸಲಗ ಚಿತ್ರ ಈಗಾಗಲೇ ನೆನ್ನೆಯಷ್ಟೇ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿ ಕನ್ನಡ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಪಕ್ಕಾ ಲೋಕಲ್ ಕಮರ್ಷಿಯಲ್ ಮಾಸ್ ಚಿತ್ರವಾಗಿದ್ದು ಅಂತಹ ಸಲಗ ಚಿತ್ರ ಪಡ್ಡೆಹೈಕಳ ಮನ ಗೆಲ್ಲೋದಕ್ಕೆ ಯಶಸ್ವಿಯಾಗಿತ್ತು. ಇನ್ನು ಈ ಚಿತ್ರದಲ್ಲಿ ಡಾಲಿ ಧನಂಜಯ್ ರವರು ಕೂಡ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದರು. ಇವರ ಪಾತ್ರವನ್ನು ಕೂಡ ಕನ್ನಡ ಸಿನಿರಸಿಕರು ಮೆಚ್ಚಿಕೊಂಡಿದ್ದರು. ಸಂಜನಾ ಆನಂದ್ ರವರ ನಾಯಕ ನಟಿಯ ಪಾತ್ರವು ಕೂಡ ಕನ್ನಡ ಪ್ರೇಕ್ಷಕರ ಹುಬ್ಬೇರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಷ್ಟೆಲ್ಲ ಯಶಸ್ಸಿನ ನಡುವೆ ಈಗ ಮತ್ತೊಂದು ವಿಘ್ನ ಸಲಗ ಚಿತ್ರತಂಡಕ್ಕೆ ಎದುರಾಗಿದೆ.

ಅದೇನೆಂದರೆ ಸಲಗ ಚಿತ್ರದಲ್ಲಿ ಬಳಸಬಾರದ ಶಬ್ದಗಳು ಸಾಕಷ್ಟು ಹೆಚ್ಚಾಗಿ ಬಳಕೆಯಾಗಿದ್ದು ಇದರಿಂದ ಸೆನ್ಸಾರ್ ಮಂಡಳಿಗೆ ಜಯ ಕರ್ನಾಟಕ ಸಂಸ್ಥೆ ಮೊರೆ ಹೋಗಿದೆ. ಎ ಸರ್ಟಿಫಿಕೇಟ್ ನೀಡಿದ ಮಾತ್ರಕ್ಕೆ ಎಲ್ಲ ಶಬ್ದಗಳ ಬಳಕೆಯನ್ನು ಬಳಸಲು ಬಿಟ್ಟಿದ್ದು ಸೆನ್ಸಾರ್ ಮಂಡಳಿಯ ತಪ್ಪು, ದೃಢೀಕರಣ ಪತ್ರವನ್ನು ನೀಡುವಾಗ ಇದನ್ನೆಲ್ಲ ಸೆನ್ಸಾರ್ ಮಂಡಳಿಯವರು ಗಮನಿಸಬೇಕಾಗಿದೆ ಎಂಬುದಾಗಿ ಜಯ ಕರ್ನಾಟಕ ಸಂಸ್ಥೆಯ ಮೂಲಗಳು ಹೇಳಿವೆ. ಇನ್ನು ಈ ಕುರಿತಾಗಿ ಚಿತ್ರಮಂದಿರದ ಎದುರುಗಡೆ ಪ್ರತಿಭಟನೆ ಮಾಡುವ ಹೇಳಿಕೆಯನ್ನು ಕೂಡ ನೀಡಿದೆ. ಈ ಚಿತ್ರವನ್ನು ಫ್ಯಾಮಿಲಿ ಆಡಿಯನ್ಸ್ ಮಕ್ಕಳು ಯುವಕರು ನೋಡುವ ಚಿತ್ರವಲ್ಲ ಎಂಬುದಾಗಿ ಕೂಡ ಇಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಜಯ ಕರ್ನಾಟಕ ಸಂಸ್ಥೆ ಸಲಗ ಚಿತ್ರದ ಪ್ರದರ್ಶನವನ್ನು ರದ್ದು ಮಾಡುವಂತೆ ಕೂಡ ಕೋರಿದ್ದಾರೆ ಮುಂದಿನ ದಿನಗಳಲ್ಲಿ ಇದು ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.