ಬಿಡುಗಡೆಯಾಯ್ತು ಕೋಟಿಗೊಬ್ಬ 3 ಮೊದಲ ಕಲೆಕ್ಷನ್, ಹೆಸರಿಗೆ ತಕ್ಕಂತೆ ಕೋಟಿಗೊಬ್ಬ 3 ಬಾಚಿದ್ದು ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೊನೆಗೂ ಕನ್ನಡ ಚಿತ್ರರಂಗದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದಾದ ಕೋಟಿಗೊಬ್ಬ 3 ಸಿನಿಮಾ ಇಂದು ಇಡೀ ಕರ್ನಾಟಕದ ಎಲ್ಲೆಡೆ ಬಿಡುಗಡೆಗೊಂಡಿದೆ. ಅಭಿನಯ ಚಕ್ರವರ್ತಿ ಸುದೀಪ್ ರವರ ಸಿನಿಮಾಗಾಗಿ ತುದಿಗಾಲಲ್ಲಿ ಕಾದು ನಿಂತಿದ್ದ ಅಭಿಮಾನಿಗಳಿಗೆ ಕೊನೆಗೂ ಸಂತಸ ತಂದಿದ್ದು, ಮುನ್ನೂರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಯಾಗುವ ಮೂಲಕ ತನ್ನ ಯಶಸ್ಸಿನ ಹಾದಿಯನ್ನು ಭರ್ಜರಿಯಾಗಿ ಆರಂಭಿಸಿದೆ. ನೆನ್ನೆ ವಿವಿಧ ಕಾರಣಗಳಿಂದ ಸಿನಿಮಾ ಬಿಡುಗಡೆ ಆಗಿರಲಿಲ್ಲ.

ಆದರೆ ಇಂದು ಕೊನೆಗೂ ಸಿನಿಮಾ ಅಧಿಕೃತವಾಗಿ ಬಿಡುಗಡೆಯಾಗಿ ಥಿಯೇಟರ್ಗಳಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಇನ್ನು ಈ ಸಿನಿಮಾದ ಮೂಲಕ ಸುದೀಪ್ ರವರು ತನ್ನನ್ನು ಯಾಕೆ ಅಭಿನಯ ಚಕ್ರವರ್ತಿ ಎಂದು ಕರೆಯುತ್ತಾರೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದಂತೆ ಕಾಣುತ್ತಿದೆ. ಯಾಕೆಂದರೆ ಸಿನಿಮಾದಲ್ಲಿ ಸುದೀಪ್ ರವರು ಬಹಳ ಅದ್ಭುತ ನಟನೆಯ ಮೂಲಕ ಮತ್ತೊಮ್ಮೆ ಸಿನಿರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಾಮಾನ್ಯವಾಗಿ ಕಿಚ್ಚನ ಮೂವಿ ಎಂದರೆ ಅಭಿಮಾನಿಗಳಿಗೆ ಹಬ್ಬ ಆದರೆ ಇತರ ಸಿನಿಪ್ರಿಯರಿಗೆ ಕೂಡ ಸಿನಿಮಾದಲ್ಲಿ ನಟನೆ ಬಹಳ ಇಷ್ಟವಾಗಿದ್ದು ಎಲ್ಲರೂ ಕೂಡ ಫುಲ್ ಮಾರ್ಕ್ಸ್ ನೀಡುತ್ತಿದ್ದಾರೆ.

ಇನ್ನು ಹೀಗೆ ಭರ್ಜರಿಯಾಗಿ ಆರಂಭ ಪಡೆದು ಕೊಂಡಿರುವ ಕೋಟಿಗೊಬ್ಬ ಸಿನಿಮಾದ ಬಾಕ್ಸಾಫೀಸ್ ಲೆಕ್ಕಾಚಾರಗಳು ಈಗಾಗಲೇ ಆರಂಭಗೊಂಡಿದೆ. ಮುನ್ನೂರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿರುವ ಕೋಟಿಗೊಬ್ಬ ಸಿನಿಮಾಗೆ ಈಗಾಗಲೇ ಮುಂದಿನ ಹಲವಾರು ಶೋ ಗಳ ಟಿಕೆಟ್ಗಳನ್ನು ಕಾದಿರಿಸಲಾಗಿದೆ. ಈ ಲೇಖನ ಬರೆಯುವ ಸಮಯದಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ಶುಕ್ರವಾರದ ಟಿಕೆಟ್ಗಳು ಬುಕಿಂಗ್ ಆಗಿದ್ದು ಒಟ್ಟಾರೆಯಾಗಿ ಶುಕ್ರವಾರವೇ ಕೋಟಿ ಕೋಟಿ ಭಾಷೆಯಲ್ಲಿ ಕೋಟಿಗೊಬ್ಬ ಸಿನಿಮಾ ಯಶಸ್ವಿಯಾಗಿದೆ. ಹೌದು ಸ್ನೇಹಿತರೆ ಗಾಂಧಿ ನಗರದ ಮೂಲಗಳ ಪ್ರಕಾರ ಕೋಟಿಗೊಬ್ಬ ಸಿನಿಮಾ ಮೊದಲ ದಿನವೇ ಹತ್ತರಿಂದ ಹನ್ನೆರಡು ಕೋಟಿಯಷ್ಟು ಹಣ ಗಳಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಮೂಲಕ ಸಿನಿಮಾ ಹೆಸರಿಗೆ ತಕ್ಕಂತೆ ಕೋಟಿ ಕೋಟಿ ಗಣಿಸುವ ಮೂಲಕ ಅತ್ಯುತ್ತಮ ಆರಂಭ ಮಾಡಿದೆ. ಇನ್ನು ಮುಂದಿನ ಎರಡು ದಿನಗಳು ವೀಕೆಂಡ್ ಆಗಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಪ್ರೇಕ್ಷಕರು ಥಿಯೇಟರ್ಗೆ ಹರಿದು ಬರುವ ಸಾಧ್ಯತೆ ಇದೆ

Post Author: Ravi Yadav