ಆರ್ಸಿಬಿ ಸೋತ ತಕ್ಷಣ ತನ್ನ ಮುಂದಿನ ಜೀವನದ ಕುರಿತು ತಮ್ಮ ನಿರ್ಧಾರ ಬದಲಿಸಿಕೊಂಡ ಎಬಿ ಡಿವಿಲಿಯರ್ಸ್, ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ ಈಗ ಸೋಲನ್ನು ಅನುಭವಿಸಿದೆ, ಈ ಬಾರಿಯೂ ಕೂಡ ಆರ್ಸಿಬಿ ಅಭಿಮಾನಿಗಳ ಕಪ್ ಗೆಲ್ಲುವ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಇಷ್ಟು ಸಾಲದು ಎಂಬಂತೆ ವಿರಾಟ್ ಕೊಹ್ಲಿ ಅವರು ನಾಯಕನಾಗಿ ಕಟ್ಟಕಡೆಯ ಬಾರಿ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ, ಕನಿಷ್ಠ ಪಕ್ಷ ಆ ಕಾರಣಕ್ಕೆ ಆದರೂ ಕೂಡ ಆರ್ಸಿಬಿ ತಂಡ ಗೆಲ್ಲಬೇಕು ಎಂಬುದು ಆರ್ಸಿಬಿ ಅಭಿಮಾನಿಗಳ ಕನಸಾಗಿತ್ತು. ವಿಶ್ವಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ರವರು ಖಂಡಿತವಾಗಲೂ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಎಂಬ ನಂಬಿಕೆ ಎಲ್ಲರಿಗೂ ಇತ್ತು ಆದರೆ ಅದು ಹುಸಿಯಾಗಿದೆ.

ಈತನ್ಮಧ್ಯೆ ಕಳೆದ ಹಲವಾರು ತಿಂಗಳುಗಳಿಂದ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ರವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ ಆದ ಕಾರಣ ಬಹುಶಃ ಇದು ಅವರ ಕೊನೆಯ ಐಪಿಎಲ್, ಇನ್ನೂ ರಾಷ್ಟ್ರೀಯ ತಂಡಕ್ಕೆ ಅವಕಾಶ ನೀಡಿದರೂ ಕೂಡ ಆಟವಾಡುತ್ತಿಲ್ಲ. ಆದ ಕಾರಣ ಬಹುತೇಕ ಕೊನೆಯ ಐಪಿಎಲ್ ಆಗಿರುವ ಸಮಯದಲ್ಲಿ ಎಬಿ ಡಿವಿಲಿಯರ್ಸ್ ರವರಿಗೆ ಒಂದಾದರು ಐಪಿಎಲ್ ಟ್ರೋಫಿ ಸಮರ್ಪಿಸಬೇಕು ಎಂಬ ಆಸೆ ಎಲ್ಲರಿಗೂ ಇತ್ತು ಅದು ಕೂಡ ಸಾಧ್ಯವಾಗಿಲ್ಲ.

ಹಾಗೂ ಅಷ್ಟೇ ಅಲ್ಲದೆ ಎಬಿ ಡಿವಿಲಿಯರ್ಸ್ ಅವರು ಇದೇ ಕೊನೆಯ ಬಾರಿಗೆ ಐಪಿಎಲ್ ಆಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಪೂರಕವೆಂಬಂತೆ ಎಬಿ ಡಿವಿಲಿಯರ್ಸ್ ಅವರು ಅಧಿಕೃತವಾಗಿ ರಾಷ್ಟ್ರೀಯ ತಂಡಕ್ಕೆ ಸೇರಿಕೊಳ್ಳುವ ಆಹ್ವಾನ ಬಂದರೂ ಕೂಡ ಒಪ್ಪಿಕೊಂಡಿಲ್ಲ ಹಾಗೂ ವಿಶ್ವದ ಬಹುತೇಕ ಟೂರ್ನಿಗಳಿಂದ ಹೊರ ಬರುತ್ತೇನೆ, ಕುಟುಂಬದ ಜೊತೆ ಸಮಯ ಕಳೆಯಬೇಕು ಎಂದು ಹೀಗಾಗಲೇ ಘೋಷಣೆ ಮಾಡಿದ್ದಾರೆ. ಹೀಗಿರುವಾಗ ಎಬಿ ಡಿವಿಲಿಯರ್ಸ್ ರವರು ಐಪಿಎಲ್ ನಿಂದ ಕೂಡ ಹೊರಹೋಗುತ್ತಾರೆ ಹಾಗೂ ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಗಳು ಕೇಳಿ ಬಂದಿದ್ದವು. ಆದರೆ ಎಬಿ ಡಿವಿಲಿಯರ್ಸ್ ಅವರು ಇದ್ದಕ್ಕಿದ್ದ ಈ ಕುರಿತು ಮಾತನಾಡಿರುವ ಎಬಿ ಡಿವಿಲಿಯರ್ಸ್ ರವರು ನಾನು ಇಷ್ಟು ದಿವಸ ನಮ್ಮ ತಂಡಕ್ಕೆ ಸಪೋರ್ಟ್ ಮಾಡಿದ ಎಲ್ಲಾ ಆರ್ಸಿಬಿ ಅಭಿಮಾನಿಗಳಿಗೂ ಕ್ಷಮೆ ಕೇಳುತ್ತೇನೆ, ಯಾಕೆಂದರೆ ಈ ಬಾರಿ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹಾಗೂ ಇಲ್ಲಿ (ಅಂದರೆ ಬೆಂಗಳೂರಿನಲ್ಲಿ) ಬಾಕಿ ಉಳಿದಿರುವ ಕೆಲಸಗಳು ಬಾಕಿ ಇವೆ ಮುಂದಿನ ವರ್ಷ ಮತ್ತಷ್ಟು ಬಲಿಷ್ಠವಾಗಿ ಬಂದು ಉಳಿದಿರುವ ಕೆಲಸಗಳನ್ನು ಮುಗಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಮುಂದಿನ ಐಪಿಎಲ್ ನಲ್ಲಿ ಎಬಿ ಡಿವಿಲಿಯರ್ಸ್ ಅವರು ಆಟವಾಡುವುದು ಇದೀಗ ಖಚಿತವಾಗಿದೆ