ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸೋತ ಆರ್ಸಿಬಿಗೆ ಟ್ರೋಲ್ ಮಾಡಲು ಬಂದ ಬೇರೆ ತಂಡದ ಫ್ಯಾನ್ಸ್, ಇಲ್ಲಿದೆ ನೋಡಿ ಕಡಕ್ ಉತ್ತರ. ಇದು ಆರ್ಸಿಬಿ ಫ್ಯಾನ್ಸ್ ಗತ್ತು

8

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ಬಹುಶಹ ಈಗಾಗಲೇ ತಿಳಿದಿರುವಂತೆ ಆರ್ಸಿಬಿ ತಂಡ ಈ ಬಾರಿಯೂ ಕೂಡ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ವಿಫಲವಾಗಿದೆ. ಒಂಬತ್ತು ಪಂದ್ಯಗಳನ್ನು ಗೆದ್ದು ಪ್ಲೇಆಫ್ ತಲುಪಿದ್ದ ಆರ್ಸಿಬಿ ತಂಡ ನಿನ್ನೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೊಲ್ಕತ್ತಾ ತಂಡದ ವಿರುದ್ಧ ಕಳಪೆ ಬ್ಯಾಟಿಂಗ್ ಕಾರಣದಿಂದಾಗಿ ಸೋಲನ್ನು ಅನುಭವಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಪ್ರತಿ ಪಂದ್ಯದಂತೆ ಈ ಬಾರಿಯೂ ಕೂಡ ಆರ್ಸಿಬಿ ಫಲಿತಾಂಶ ಸದ್ದು ಮಾಡಲು ಆರಂಭಿಸಿದೆ, ಹೌದು ಸ್ನೇಹಿತರೇ ಇತರ ಯಾವುದೇ ಚಾಂಪಿಯನ್ ತಂಡಗಳು ಗೆದ್ದರೂ ಸೋತರೂ ನಡೆಯದ ಚರ್ಚೆ ಆರ್ಸಿಬಿ ತಂಡದ ಪಂದ್ಯ ನಡೆದ ತಕ್ಷಣ ಆರಂಭವಾಗುತ್ತದೆ.

ಅದರಲ್ಲಿಯೂ ಆರ್ಸಿಬಿಯ ಅಭಿಮಾನಿಗಳನ್ನು ಇತರ ತಂಡದ ಅಭಿಮಾನಿಗಳು ಕೆಣಕುವುದುರಲ್ಲಿ ನಿಸ್ಸೀಮರು. ನಮ್ಮ ಕರ್ನಾಟಕದಲ್ಲಿ ಇದ್ದುಕೊಂಡು ಉದ್ದುದ್ದ ಪಾಠ ಮಾಡಿ ಇತರ ತಂಡಗಳನ್ನು ಬೆಂಬಲಿಸುವಂತೆ ಆರ್ಸಿಬಿ ತಂಡದ ಅಭಿಮಾನಿಗಳಿಗೆ ಹೇಳುತ್ತಿರುತ್ತಾರೆ. ಅದರಲ್ಲಿಯೂ ಪಕ್ಕದ ಮನೆ ಅಂಕಲ್ ಗಳ ಅಭಿಮಾನಿಗಳಿಗೆ ತಾವು ಎರಡು ವರ್ಷ ಬ್ಯಾನ್ ಆಗಿದ್ದೀವಿ ಎಂಬುದನ್ನು ಮರೆತು ಕೂಡ ಸದಾ ಆರ್ಸಿಬಿ ಫಲಿತಾಂಶದ ಕುರಿತು ಕಮೆಂಟ್ಸ್ ಬಾಕ್ಸ್ನಲ್ಲಿ ಆರ್ಸಿಬಿ ತಂಡದ ಅಭಿಮಾನಿಗಳನ್ನು ಟ್ರೋಲ್ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಹೇಳಿಕೇಳಿ ಆರ್ಸಿಬಿ ಅಭಿಮಾನಿಗಳು ಬಹಳ ನಿಯತ್ತಿನ ಜನರು, 14 ವರ್ಷಗಳಿಂದ ಸೋಲನ್ನು ಕಂಡರೂ ಕೂಡ ಆರ್ ಸಿ ಬಿ ತಂಡವನ್ನು ಒಮ್ಮೆಯೂ ಕೂಡ ಬಿಟ್ಟುಕೊಟ್ಟಿಲ್ಲ.

ಇನ್ನು ಈ ಬಾರಿಯೂ ಕೂಡ ಕಿಂಚಿತ್ತು ಬಿಟ್ಟುಕೊಡದೆ ಪಕ್ಕದ ಮನೆಯ ಅಂಕಲ್ ಅಭಿಮಾನಿಗಳಿಗೆ ಎಂದಿನಂತೆ ಖಡಕ್ ಉತ್ತರಗಳನ್ನು ನೀಡುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಆರ್ಸಿಬಿ ತಂಡ ಸೋತಿರುವ ಪರಿಸ್ಥಿತಿಯಲ್ಲಿ ಪಕ್ಕದ ಮನೆ ಅಂಕಲ್ ಅಭಿಮಾನಿಗಳು ಹಾಗೂ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಆರ್ ಸಿ ಬಿ ತಂಡವನ್ನು ಟ್ರೋಲ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿಯೂ ಹಲವಾರು ಕಾಮೆಂಟ್ಗಳು ನೀವು ಕಪ್ ಗೆಲ್ಲುವ ತಂಡಕ್ಕೆ ಸಪೋರ್ಟ್ ಮಾಡಿ, ಆರ್ಸಿಬಿ ತಂಡ ಜನ್ಮದಲ್ಲಿ ಕಪ್ ಗೆಲ್ಲುವುದಿಲ್ಲ ಇತರ ತಂಡಗಳನ್ನು ಸಪೋರ್ಟ್ ಮಾಡುವ ಮೂಲಕ ಕಪ್ ಗೆಲ್ಲಬಹುದಾದ ಆಲೋಚನೆ ಮಾಡಿ ಎನ್ನುತ್ತಿದ್ದಾರೆ.

ಇಂತಹ ನೂರಾರು ಕಾಮೆಂಟ್ಗಳು ಪ್ರತಿ ಆರ್ಸಿಬಿ ಪೋಸ್ಟಿನ ಕಮೆಂಟುಗಳಲ್ಲಿ ಕಂಡು ಬರುತ್ತಿವೆ. ಬಹುಶಹ ಈ ಪೋಸ್ಟ್ ಓದಿದ ನಂತರ ಮತ್ತೊಮ್ಮೆ ಪಕ್ಕದ ಮನೆಯ ಅಂಕಲ್ ಗಳ ಅಭಿಮಾನಿಗಳು ಇಲ್ಲೂ ಕೂಡ ಕಮೆಂಟ್ ಮಾಡಬಹುದು ಆದರೆ ಇಲ್ಲಿ ಕೆಲವೊಂದು ವಿಚಾರಗಳನ್ನು ಸ್ಪಷ್ಟಪಡಿಸಲು ನಾವು ಬಂದಿದ್ದೇವೆ, ಹೌದು ಸ್ನೇಹಿತರೆ ನಾವು ಇಂದು ಹಲವಾರು ವಿಚಾರಗಳನ್ನು ಸ್ಪಷ್ಟಪಡಿಸುತ್ತೇವೆ ಕೇಳಿ. ಅಂದಹಾಗೆ ಆರ್ಸಿಬಿ ತಂಡದ ಹೊಗಳಿಕೆಯನ್ನು ಇಲ್ಲಿ ನಾವು ಮಾಡುವುದಿಲ್ಲ ಬದಲಾಗಿ ಆರ್ಸಿಬಿ ಅಭಿಮಾನಿಗಳ ಕುರಿತು ಮಾತ್ರ ಹೇಳುತ್ತೇವೆ ಹಾಗೂ ಕೊನೆಯಲ್ಲಿ ಪಕ್ಕದ ಮನೆಯ ಅಂಕಲ್ ಅಭಿಮಾನಿಗಳಿಗೆ ಒಂದು ಪ್ರಶ್ನೆ ಕೂಡ ಇದೆ, ಸಾಧ್ಯವಾದರೆ ಉತ್ತರಿಸಲಿ

ಸ್ನೇಹಿತರೇ ಆರ್ಸಿಬಿ ಅಭಿಮಾನಿಗಳು ಎಂದ ತಕ್ಷಣ ಅಲ್ಲಿ ಯಾವುದೋ ಒಬ್ಬ ಆಟಗಾರನನ್ನು ನೋಡಿ ಸಪೋರ್ಟ್ ಮಾಡಲು ಆರ್ಸಿಬಿ ಅಭಿಮಾನಿಗಳು ನಿಂತಿಲ್ಲ, ವಿರಾಟ್ ಕೊಹ್ಲಿ ಆರ್ ಸಿಬಿ ತಂಡದಲ್ಲಿ ಇದ್ದಾರೆ ಎಂದು ಯಾರು ಆರ್ಸಿಬಿ ತಂಡಕ್ಕೆ ಸಪೋರ್ಟ್ ಮಾಡುತ್ತಿಲ್ಲ, ಎಬಿ ಡಿವಿಲಿಯರ್ಸ್ ಅವರು ಆರ್ಸಿಬಿ ತಂಡದಲ್ಲಿ ಇದ್ದಾರೆ ಎಂದು ಆರ್ಸಿಬಿ ತಂಡಕ್ಕೆ ಯಾರು ಸಪೋರ್ಟ್ ಮಾಡುತ್ತಿಲ್ಲ ಬದಲಾಗಿ ಆರ್ಸಿಬಿ ತಂಡವನ್ನೇ ನೆಚ್ಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಎಷ್ಟು ವರ್ಷವಾದರೂ ಆರ್ಸಿಬಿ ಯಲ್ಲಿ ಆಡಲಿ ನಂತರ ನಿವೃತ್ತಿಯಾದ ಮೇಲೆ ಕೂಡ ಆರ್ಸಿಬಿ ತಂಡದ ಅಭಿಮಾನ ಹಾಗೆ ಇರುತ್ತದೆ ಇದು ಇತರ ಆಟಗಾರರಿಗೂ ಇದೇ ರೀತಿ ಅಪ್ಲೇ ಆಗುತ್ತದೆ..

ಇನ್ನು ಇಷ್ಟು ವರ್ಷ ಕಪ್ ಗೆದ್ದಿಲ್ಲ ಆದರೂ ಕೂಡ ಯಾಕೆ ಬೆಂಬಲಿಸುತ್ತೀರಾ ಎನ್ನುವವರಿಗೆ ನಾವು ಹೇಳುವುದೇನೆಂದರೆ ಸ್ನೇಹಿತರೇ ಭಾರತ 1983 ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು, ನಂತರ ಧೋನಿಯ ನಾಯಕತ್ವದಲ್ಲಿ 2011ರಲ್ಲಿ ಕಪ್ ಗೆಲ್ಲುವವರೆಗೂ ವಿಶ್ವಕಪ್ ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ, ಹಾಗೆಂದು ಯಾವುದಾದರೂ ಒಬ್ಬ ಭಾರತೀಯ ಅಭಿಮಾನಿಯೂ ಕೂಡ ಪಾಕಿಸ್ತಾನದ ದೇಶಕ್ಕೆ ಅಥವಾ ಇನ್ಯಾವುದಾದರೂ ಕಪ್ ಗೆಲ್ಲುವ ದೇಶಕ್ಕೆ ಜೈ ಎಂದಿದ್ದನ್ನು ನೀವೇನಾದರೂ ನೋಡಿದ್ದೀರಾ?? ಸಾಧ್ಯವೇ ಇಲ್ಲ ವಿಶ್ವ ಕಪ್ ಗೆಲ್ಲಲಿ ಅಥವ ಗೆಲ್ಲದೆ ಇರಲಿ ಪ್ರತಿಯೊಬ್ಬ ಭಾರತೀಯನು ಸಪೋರ್ಟ್ ಮಾಡುವುದು ಭಾರತ ತಂಡಕ್ಕೆ.

ಅವನು ವಿರಾಟ್ ಕೊಹ್ಲಿ ಅಭಿಮಾನಿ ಯಾಗಿರಲಿ ಅಥವಾ ಧೋನಿ ಅಭಿಮಾನಿ ಆಗಿರಲಿ ಅಥವಾ ರೋಹಿತ್ ಅಭಿಮಾನಿ ಆಗಿರಲಿ ಎಲ್ಲರೂ ಭಾರತಕ್ಕೆ ಮಾತ್ರ ಸಪೋರ್ಟ್ ಮಾಡುತ್ತಾರೆ. ಹೀಗೆ ಎಂದಿಗೂ ತಂಡ ಮುಖ್ಯವಾಗಿರುತ್ತದೆ ಕಪ್ ಮುಖ್ಯವಾಗಿರುವುದಿಲ್ಲ. ಈಗ ಹೇಳಿ ನಾವು ಯಾವ ತಂಡಕ್ಕೆ ಸಪೋರ್ಟ್ ಮಾಡಬೇಕು?? ಪಕ್ಕದ ಮನೆ ಅಂಕಲ್ ಗಳಿಗಾ ಅಥವಾ ಆರ್ಸಿಬಿಗಾ?? ನೀವು yendaru ಹೇಳಿ ಇಂದಿಗೂ ಎಂದೆಂದಿಗೂ ನಾವು ಅಪ್ಪಟ ಆರ್ಸಿಬಿ ಅಭಿಮಾನಿಗಳು. ಈ ಸಲ ಕಪ್ ನಮ್ಮದಲ್ಲ ಆದರೆ ಮತ್ತೆ ಮತ್ತೆ ಹೇಳುತ್ತೇವೆ ಮುಂದಿನ ಸಲ ಕಪ್ ನಮ್ಮದೇ. ಜೈ ಆರ್ಸಿಬಿ ಜೈ ಕರ್ನಾಟಕ ಮಾತೆ