ತನ್ನ ಸ್ವಾರ್ಥಕ್ಕಾಗಿ ಟಾಪ್ ಪ್ಲೇಯರ್ ಎಂಬುದನ್ನು ನೋಡದೆ ವಾರ್ನರ್ ರವರ ಭವಿಷ್ಯವನ್ನು ಹಾಳು ಮಾಡಿದ ವ್ಯಕ್ತಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಸೀಸನ್ ನ ಐಪಿಎಲ್ ಹಲವಾರು ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಎಷ್ಟೋ ವರ್ಷಗಳ ನಂತರ ಸನ್ ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು. ಭಾರತದಲ್ಲಿ ನಡೆದ ಮೊದಲ ಚರಣದಲ್ಲಿ ಅಷ್ಟೇನೂ ಉತ್ತಮವಾಗಿ ಪ್ರದರ್ಶನ ನೀಡದ ಡೇವಿಡ್ ವಾರ್ನರ್ ಬದಲು ತಂಡಕ್ಕೆ ಬಂದಿದ್ದ ಕೇನ್ ವಿಲಿಯಮ್ಸನ್ ರವರನ್ನ ನಾಯಕನನ್ನಾಗಿ ಮಾಡಿತು. ಯು.ಎ.ಇ ಯಲ್ಲಿ ನಡೆದ ಎರಡನೇ ಚರಣದಲ್ಲಿ ಆಡಲು ಅವಕಾಶ ಪಡೆದ ಡೇವಿಡ್ ವಾರ್ನರ್ ಎರಡು ಪಂದ್ಯಗಳಲ್ಲಿಯೂ ಸಹ ಶೂನ್ಯಕ್ಕೆ ಔಟಾದರು. ಆದರೇ ಈ ಹಿಂದೆ 2017 ರಲ್ಲಿ ಎಸ್.ಆರ್‌.ಹೆಚ್ ತಂಡ ಚಾಂಪಿಯನ್ ಆಗಿದ್ದರೇ, ವಾರ್ನರ್ ನಾಯಕತ್ವದಲ್ಲಿ ಹಲವಾರು ಭಾರಿ ಪ್ಲೇ ಆಫ್ ಸಹ ಪ್ರವೇಶಿಸಿತ್ತು.

ಆ ನಂತರ ತಂಡದಿಂದಲೇ ಹೊರಬಿದ್ದ ವಾರ್ನರ್, ತಂಡದ ಡಗ್ ಔಟ್ ಗೆ ಬರದೇ ಪ್ರೇಕ್ಷಕರ ಜೊತೆ ಕೂತು ಪಂದ್ಯಗಳನ್ನು ವೀಕ್ಷಿಸುವಂತಾಯಿತು. ಡೇವಿಡ್ ವಾರ್ನರ್ ರನ್ನ ಬೆಂಬಲಿಸಿದ ಕಾರಣ ತಂಡದಲ್ಲಿದ್ದ ಮನೀಶ್ ಪಾಂಡೆ ಹಾಗೂ ಕೇದಾರ್ ಜಾಧವ್ ಬದಲಿಗೆ ಅನನುಭವಿಗಳಿಗೆ ಪದೇ ಪದೇ ಮಣೆ ಹಾಕಲಾಯಿತು. ತಂಡದ ಮ್ಯಾನೇಜ್ ಮೆಂಟ್ ಗೂ ಡೇವಿಡ್ ವಾರ್ನರ್ ಮುಖ ನೋಡಿ ಸಹ ಮಾತನಾಡದಂತೆ ವಾತಾವರಣ ಸೃಷ್ಠಿಯಾಯಿತು. ಈ ದೊಡ್ಡ ಕಂದಕದ ಹಿಂದಿನ ರಹಸ್ಯ ಈಗ ಬದಲಾಗಿದೆ.

ಡೇವಿಡ್ ವಾರ್ನರ್ ತಂಡದಿಂದ ಹೊರಬೀಳಲು ಪ್ರಮುಖ ಕಾರಣವೆಂದರೇ ಅದು ಎಸ್.ಆರ್‌.ಹೆಚ್ ತಂಡದ ಮುಖ್ಯ ಕೋಚ್ ಟಾಮ್ ಮೂಡಿಯಂತೆ. ಪ್ರತಿಭಾವಂತ ಭಾರತೀಯ ಆಟಗಾರರಿಗೆ ಹೆಚ್ಚು ಅವಕಾಶ ನೀಡುವಲ್ಲಿ ಉಂಟಾದ ಮನಸ್ತಾಪ ವಾರ್ನರ್ ಕುರ್ಚಿಗೆ ಕಂಟಕವಾಗಿದೆಯಂತೆ. ಈ ಬಗ್ಗೆ ವರದಿ ಮಾಡಿರುವ ಫಾಕ್ಸ್ ಸ್ಪೋರ್ಟ್ಸ್ ನ್ಯೂಸ್, ಟಾಮ್ ಮೂಡಿಯವರು, ಭಾರತ ತಂಡದ ಕೋಚ್ ಆಗುವ ಆಸೆ ಹೊಂದಿದ್ದಾರಂತೆ. ಹಾಗಾಗಿ ಭಾರತೀಯ ಯುವ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡುವ ಮೂಲಕ ತಮ್ಮ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ ರ ಮ್ಯಾನೇಜ್ ಮೆಂಟ್ ತಂಡವನ್ನು ಮನವೊಲಿಸುವ ಪ್ರಯತ್ನ ಮಾಡಿದರಂತೆ.

ಮೂಲಗಳ ಪ್ರಕಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ಓನರ್ ಹಾಗೂ ಬಿಸಿಸಿಐ ಜೊತೆ ಸಂಭಂದ ಉತ್ತಮವಾಗಿದೆಯಂತೆ. ಈ ಲಿಂಕ್ ಬಳಸಿ ರವಿಶಾಸ್ತ್ರಿ ನಂತರ ತೆರವಾಗಲಿರುವ ಭಾರತ ತಂಡದ ಕೋಚ್ ಆಗಲು ಟಾಮ್ ಮೂಡಿ ಯೋಜನೆ ರೂಪಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಆದರೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾಲತಾಣಿಗರು, ಐಪಿಎಲ್ ನ ಒಂದು ತಂಡವನ್ನೇ ಒಗ್ಗೂಡಿಸಿಕೊಂಡು ಮುನ್ನಡೆಸಲು ವಿಫಲವಾಗಿರುವ ಈ ಕೋಚ್ ಭಾರತ ತಂಡವನ್ನು ಇಬ್ಭಾಗ ಮಾಡುವುದಿಲ್ಲ ಅನ್ನುವುದಕ್ಕೆ ಏನು ಗ್ಯಾರೆಂಟಿ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಟಾಮ್ ಮೂಡಿ ತಮ್ಮ ಸ್ವಾರ್ಥ ಸಾಧನೆಗಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಹಾಗೂ ಡೇವಿಡ್ ವಾರ್ನರ್ ರವರ ಭವಿಷ್ಯ ಹಾಳು ಮಾಡಿದರಾ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav