ಸೌರವ್ ಬಯೋಪಿಕ್ ಸಿನಿಮಾಗೆ ಪೈಪೋಟಿ, ಆಯ್ಕೆಯಲ್ಲಿ ಮುಂದಿರುವ ಇಬ್ಬರು ನಟರು ಯಾರ್ಯಾರು ಗೊತ್ತೇ?? ಇವರಿಬ್ಬರಲ್ಲಿ ಯಾರು ಆಯ್ಕೆಯಾಗಬೇಕು??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ನಲ್ಲಿ ಈಗ ಬಯೋಪಿಕ್ ಗಳದ್ದೇ ಸುಗ್ಗಿ. ಧೋನಿಯವರ ಬಯೋಪಿಕ್ ನಿಂದ ಶುರುವಾದ ಬಯೋಪಿಕ್ ಸಿನಿಮಾಗಳು ಮೇರಿಕೋಮ್, ಸೈನಾ ನೆಹ್ವಾಲ್ , ನರೇಂದ್ರ ಮೋದಿ, ಜಯಲಲಿತಾ ಹೀಗೆ ಎಲ್ಲರ ಬಯೋಪಿಕ್ ಸಿನಿಮಾಗಳು ಬಂದಿವೆ. ಇನ್ನು ಪಿ.ವಿ.ಸಿಂಧು, ನೀರಜ್ ಚೋಪ್ರಾ ಸಿನಿಮಾಗಳು ಸರದಿಯಲ್ಲಿವೆ. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಸಿನಿಮಾಗಳು ಈಗಾಗಲೇ ತಯಾರಿಯಲ್ಲಿವೆ. ಈಗ ಅದಕ್ಕೆ ಮತ್ತೊಂದು ಬಯೋಪಿಕ್ ಸಿನಿಮಾ ಸೇರಿದೆ. ಹೌದು ಅದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯವರ ಬಯೋಪಿಕ್ ಸಿನಿಮಾ ಬರಲಿದೆಯಂತೆ.

ಮೊದಲಿನ ಮೂಲಗಳ ಪ್ರಕಾರ ಸೌರವ್ ಗಂಗೂಲಿಯವರ ಬಯೋಪಿಕ್ ಸಿನಿಮಾವನ್ನು ಕರಣ್ ಜೋಹರ್ ರವರು ನಿರ್ದೇಶಿಸಬೇಕಿತ್ತಂತೆ. ಅವರು ನಿರ್ದೇಶಿಸಿದರೇ ಸೌರವ್ ಗಂಗೂಲಿಯವರ ಪಾತ್ರವನ್ನು ರಣಬೀರ್ ಕಪೂರ್ ರವರು ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೇ ಈಗ ಸೌರವ್ ಗಂಗೂಲಿ ಬಯೋಪಿಕ್ ಸಿನಿಮಾದ ನಿರ್ಮಾಣವನ್ನ ಲವ್ ರಂಜನ್ ಹೊರಲಿದ್ದಾರಂತೆ. ‌ಹಾಗಾಗಿ ಈಗ ಸೌರವ್ ಗಂಗೂಲಿ ಪಾತ್ರವನ್ನ ನಿರ್ವಹಿಸಲು ಬೇರೆಯ ನಟರನ್ನ ಲವ್ ರಂಜನ್ ಹುಡುಕಾಡುತ್ತಿದ್ದಾರಂತೆ.

ಈಗಾಗಲೇ ಕತೆ-ಚಿತ್ರಕತೆ ಸಿದ್ಧವಾಗಿದ್ದು, ಸೌರವ್ ಗಂಗೂಲಿ ಜನನದಿಂದ ಹಿಡಿದು, ಹಾಲಿ ಬಿಸಿಸಿಐ ಅಧ್ಯಕ್ಷರಾಗುವ ತನಕ ಎಲ್ಲಾ ಪ್ರಮುಖ ಘಟನೆಗಳನ್ನ ಸೇರಿಸಲಾಗಿದೆಯಂತೆ. ಗಂಗೂಲಿ ಪಾತ್ರ ನಿರ್ವಹಿಸಲು ನಿರ್ಮಾಪಕ ಲವ್ ರಂಜನ್ ಉರಿ ಸಿನಿಮಾ ಖ್ಯಾತಿಯ ಲವ್ ವಿಕ್ಕಿ ಕೌಶಲ್ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ರವರಿಗೆ ಸ್ಕ್ರಿಪ್ಟ್ ಓದಲು ನೀಡಿದ್ದಾರಂತೆ. ಇನ್ನು ಕೆಲವೇ ದಿನಗಳಲ್ಲಿ ಸೌರವ್ ಗಂಗೂಲಿ ಬಯೋಪಿಕ್ ಸಿನಿಮಾ ಸೆಟ್ಟೇರಲಿದ್ದು, ಸೌರವ್ ಗಂಗೂಲಿ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.

ಭಾರತ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿ ತಂಡ ಸೇರಿದ ಸೌರವ್ ಗಂಗೂಲಿ ನಂತರದ ದಿನಗಳಲ್ಲಿ ಭಾರತ ತಂಡದ ಯಶಸ್ವಿ ನಾಯಕರಾದವರು. ಇವರ ನೇತೃತ್ವದಲ್ಲಿ 2003 ರ ವಿಶ್ವಕಪ್ ನಲ್ಲಿ ಫೈನಲ್ ಪ್ರವೇಶಿಸಿತ್ತು. ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು. ಅದಲ್ಲದೇ ಕೋಚ್ ಗ್ರೆಗ್ ಚಾಪೆಲ್ ಜೊತೆ ವಿವಾದ ಮಾಡಿಕೊಂಡು ನಾಯಕತ್ವದ ವಿಚಾರದಲ್ಲಿಯೂ ದೊಡ್ಡ ಮಟ್ಟದ ಸುದ್ದಿಯಾಗಿ ನಾಯಕತ್ವ ಕಳೆದುಕೊಂಡಿದ್ದರು. ಸೌರವ್ ಗಂಗೂಲಿ ಪಾತ್ರವನ್ನು ಯಾವ ನಟ ನಿರ್ವಹಿಸಬೇಕು ಎಂಬ ನಿಮ್ಮ ಆಯ್ಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav