ರೋಹಿತ್ ಗೆ ಮತ್ತೊಂದು ಶಾಕ್, ವಿರಾಟ್ ನಂತರ ನಾಯಕನಾಗಲಿರುವವರು ಯಾರು ಗೊತ್ತೇ?? ಬಿಸಿಸಿಐ ನಿಂದ ಮಹತ್ವದ ಹೆಜ್ಜೆ.

ರೋಹಿತ್ ಗೆ ಮತ್ತೊಂದು ಶಾಕ್, ವಿರಾಟ್ ನಂತರ ನಾಯಕನಾಗಲಿರುವವರು ಯಾರು ಗೊತ್ತೇ?? ಬಿಸಿಸಿಐ ನಿಂದ ಮಹತ್ವದ ಹೆಜ್ಜೆ.

ನಮಸ್ಕಾರ ಸ್ನೇಹಿತರೇ ಮುಂದಿನ ತಿಂಗಳು ನವೆಂಬರ್ 14 ರ ವೇಳೆಗೆ ಟಿ 20 ವಿಶ್ವಕಪ್ ಮುಗಿದಿರುತ್ತದೆ. ಅಲ್ಲಿಗೆ ವಿರಾಟ್ ಕೊಹ್ಲಿ ಸಹ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಹಿಂದೆಯೇ ಈ ಬಗ್ಗೆ ಸ್ಪಷ್ಠನೆ ನೀಡಿದ್ದ ವಿರಾಟ್ ಟಿ 20 ವಿಶ್ವಕಪ್ ಬಳಿಕ ತಂಡದಲ್ಲಿ ಕೇವಲ ಆಟಗಾರನಾಗಿ ಮುಂದುವರೆಯುತ್ತೇನೆ ಹೊರತು ನಾಯಕನಾಗಿ ಮುಂದುವರೆಯುವುದಿಲ್ಲ ಎಂದು ಹೇಳಿದ್ದರು. ವಿರಾಟ್ ನಂತರ ಮುಂದಿನ ಭಾರತ ಟಿ 20 ತಂಡದ ನಾಯಕ ರೋಹಿತ್ ಶರ್ಮಾ ಆಗುತ್ತಾರೆ ಎಂದೇ ಹೇಳಲಾಗಿತ್ತು. ಈ ಬಗ್ಗೆ ಜಾಲತಾಣಗಳಲ್ಲಿಯೂ ಕೆಲವು ಅಭಿಯಾನಗಳು ಜೋರಾಗಿ ನಡೆದಿದ್ದವು.

ಆದರೇ ಮೂಲಗಳ ಪ್ರಕಾರ ಬಿಸಿಸಿಐ ರೋಹಿತ್ ಶರ್ಮಾ ಬದಲು ಭವಿಷ್ಯದ ದೃಷ್ಠಿಯಿಂದ ಯುವಕರಿಗೆ ನಾಯಕತ್ವದ ಮಣೆ ಹಾಕಲು ಚಿಂತನೆ ನಡೆಸಿದೆ ಎಂಬ ಅಂಶ ಬಹಿರಂಗವಾಗಿದೆ. ಸದ್ಯ 34 ವರ್ಷದ ರೋಹಿತ್ ಶರ್ಮಾ ಫಿಟ್ನೆಸ್ ಆಧರಿಸಿ ಎರಡು ವರ್ಷ ಕ್ರಿಕೇಟ್ ಆಡಬಹುದು. ಅದಲ್ಲದೇ 2022ರಲ್ಲಿಯೂ ಒಂದು ಟಿ 20 ವಿಶ್ವಕಪ್ ಟೂರ್ನಿ ಬರಲಿದೆ. ಜೊತೆಗೆ 2023 ರಲ್ಲಿ ಏಕದಿನ ವಿಶ್ವಕಪ್ ಸಹ ನಡೆಯಲಿದೆ. 2023 ರ ಏಕದಿನ ವಿಶ್ವಕಪ್ ಟೂರ್ನಿ ನಡೆದ ನಂತರ ನಾಯಕ ವಿರಾಟ್ ಕೊಹ್ಲಿ ಏಕದಿನ ಹಾಗೂ ಟೆಸ್ಟ್ ಮಾದರಿ ಕ್ರಿಕೇಟ್ ನ ನಾಯಕತ್ವಕ್ಕೂ ಗುಡ್ ಬೈ ಹೇಳುವ ಸಾಧ್ಯತೆ ಅಧಿಕವಾಗಿದೆ.

ಹಾಗಾಗಿ ರೋಹಿತ್ ಬದಲು ಯುವಕನೊಬ್ಬನಿಗೆ ನಾಯಕತ್ವದ ಜವಾಬ್ದಾರಿ ನೀಡುವತ್ತ ಗಂಭೀರ ಚಿಂತನೆ ನಡೆಸುತ್ತಿದೆ. ರೋಹಿತ್ ಶರ್ಮಾ ಹೆಚ್ಚೆಂದರೇ ಒಂದು ವರ್ಷ ಟಿ 20 ತಂಡದ ನಾಯಕನಾಗಿರಬಹುದು. ಆದರೇ ಈ ಅವಧಿಯಲ್ಲಿ ಭಾರತ ಹೆಚ್ಚು ಟಿ 20 ಪಂದ್ಯಗಳನ್ನು ಸಹ ಆಡುತ್ತಿಲ್ಲ. ಹೀಗಾಗಿ ರೋಹಿತ್ ಶರ್ಮಾ ಬದಲು ಯುವಕರಿಗೆ ಮಣೆ ಹಾಕುವ ಸಾಧ್ಯತೆಯಿದೆ. ಬನ್ನಿ ಆ ಯುವ ಕ್ರಿಕೇಟಿಗರು ಯಾರು ಎಂದು ತಿಳಿಯೋಣ.

ಮೊದಲನೆಯದಾಗಿ ಕೆ.ಎಲ್.ರಾಹುಲ್ – ಬಿಸಿಸಿಐ ಈಗಾಗಲೇ ಕೆ.ಎಲ್ ರಾಹುಲ್ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ತಂಡವನ್ನ ನಡೆಸುತ್ತಿರುವುದನ್ನು ಗಮನಿಸಿದೆ. ಇತರ ಆಟಗಾರರಿಂದ ಸೂಕ್ತ ಸಾಥ್ ಸಿಗದಿದ್ದರೂ, ಏಕಾಂಗಿಯಾಗಿ ರಾಹುಲ್ ತಂಡವನ್ನ ಗೆಲ್ಲಿಸಿದ್ದಾರೆ. ಅರ್ಶದೀಪ್, ಬ್ರಾರ್,ಬಿಷ್ಣೋಯಿಯಂತಹ ಆಟಗಾರರನ್ನ ಉಪಯೋಗಿಸಿಕೊಂಡಿದ್ದು ಸಹ ಗಮನಿಸಿದೆ. ರಾಹುಲ್ ರಲ್ಲಿರುವ ನಾಯಕತ್ವದ ಗುಣ ಗಮನಿಸಿರುವ ಬಿಸಿಸಿಐ ರಾಹುಲ್ ಗೆ ನಾಯಕ ಪಟ್ಟ ನೀಡುವ ಸಾಧ್ಯತೆ ಇದೆ.

ಎರಡನೇಯದಾಗಿ ರಿಷಭ್ ಪಂತ್ – ದೆಹಲಿಯ ಈ ಯುವ ವಿಕೇಟ್ ಕೀಪರ್ ಬ್ಯಾಟ್ಸಮನ್ ಸದ್ಯ ಭಾರತ ತಂಡದ ಖಾಯಂ ಸದಸ್ಯ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಾಯಕತ್ವವಹಿಸಿಕೊಂಡ ಪಂತ್ ದೆಹಲಿ ತಂಡವನ್ನ ಸಮರ್ಥವಾಗಿ ಮುನ್ನಡೆಸಿದ್ದಾರೆ. ಭವಿಷ್ಯದ ದೃಷ್ಠಿಯಿಂದ ಇನ್ನು 23 ರ ಹರೆಯದ ಪಂತ್ ಮೇಲೆ ಕಣ್ಣಿಟ್ಟಿದೆ.

ಮೂರನೆಯದಾಗಿ ಜಸಪ್ರೀತ್ ಬುಮ್ರಾ – ಬೂಮ್ ಬೂಮ್ ಖ್ಯಾತಿಯ ಬುಮ್ರಾ ಸಹ ಸದ್ಯ ಎಲ್ಲಾ ಮಾದರಿಯ ಕ್ರಿಕೇಟ್ ನಲ್ಲಿಯೂ ಭಾರತ ತಂಡದ ಖಾಯಂ ಸದಸ್ಯ. 26 ಹರೆಯದ ಬುಮ್ರಾ ಮೇಲೂ ಬಿಸಿಸಿಐ ನಾಯಕತ್ವದ ಜವಾಬ್ದಾರಿ ಹೊರಿಸುವ ಚಿಂತನೆ ನಡೆಸುತ್ತಿದೆ. ವಿರಾಟ್ ನಂತರ ಮುಂದಿನ ಟಿ 20 ತಂಡದ ನಾಯಕ ಯಾರಾಗಬೇಕು ಎಂಬ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.