ಐಪಿಎಲ್ ನಲ್ಲಿ ವಿಫಲರಾದ ಆಟಗಾರರಿಗೆ ವಿಶ್ವಕಪ್ ನಲ್ಲಿ ಸ್ಥಾನ ಇದೆಯೇ?? ಕೊನೆಗೂ ಮಹತ್ವದ ನಿರ್ಧಾರ ಘೋಷಣೆ ಮಾಡಿದ ಬಿಸಿಸಿಐ, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಹತ್ವದ ಐಸಿಸಿ ಟೂರ್ನಿ ಟಿ 20 ವಿಶ್ವಕಪ್ ಗೆ ಭಾರತ ತಂಡವನ್ನ ಈ ಹಿಂದೆ ಬಿಸಿಸಿಐ ಪ್ರಕಟಿಸಿತ್ತು. ಆದರೇ ಅದರಲ್ಲಿ ಪ್ರಕಟಿಸಿದ ಕೆಲವು ಆಟಗಾರರು ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದರು. ಅದರಲ್ಲೂ ಯು.ಎ.ಇ ಯಲ್ಲಿ ನಡೆದ ಐಪಿಎಲ್ ಚರಣದಲ್ಲಿ ನೀರಿಕ್ಷೀತ ಪ್ರದರ್ಶನ ತಮ್ಮ ತಂಡದಿಂದ ಆಡುವ ಹನ್ನೊಂದರ ಬಳಗದಿಂದಲೇ ಹೊರಬಿದ್ದಿದ್ದರು. ಐಪಿಎಲ್ ಮುಗಿದ ಒಂದು ವಾರದ ನಂತರವೇ ಅದೇ ಪಿಚ್ ಗಳಲ್ಲಿ ವಿಶ್ವಕಪ್ ಟಿ 20 ಸಹ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಫಾರ್ಮ್ ನಲ್ಲಿ ಇಲ್ಲದ ಆಟಗಾರರು ಹೇಗೆ ತಾನೇ ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿ ಕಪ್ ಗೆಲ್ಲಿಸುತ್ತಾರೆ ಎಂಬ ಯೋಚನೆ ಸಹಜವಾಗಿ ಅಭಿಮಾನಿಗಳಿಗೆ ಹಾಗೂ ತಂಡದ ಮ್ಯಾನೇಜ್ ಮೆಂಟ್ ಯೋಚನೆ ಕಾಡುತ್ತಿತ್ತು.

ಸದ್ಯ ಆಯ್ಕೆಯಾಗಿರುವ ಹದಿನೈದು ಆಟಗಾರರು ಹಾಗೂ ಮೂವರು ಮೀಸಲು ಆಟಗಾರರಲ್ಲಿ ಬ್ಯಾಟ್ಸಮನ್ ಗಳಾದ ಸೂರ್ಯ ಕುಮಾರ ಯಾದವ್ ಮತ್ತು ಇಶಾನ್ ಕಿಶನ್ ಫಾರ್ಮ್ ಕಳೆದುಕೊಂಡಿದ್ದರೇ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೆಚ್ಚು ಪಂದ್ಯಗಳನ್ನೇ ಆಡಿರಲಿಲ್ಲ. ಇನ್ನು ಬೌಲರ್ ಗಳಾದ ಆರ್.ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ಇಬ್ಬರೂ ನಿಸ್ತೇಜ ಫಾರ್ಮ್ ನಿಂದ ಬಳಲುತ್ತಿದ್ದರೇ, ಪ್ರಮುಖ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಕಳಪೆ ಆಟದಿಂದ ಆಡುವ ಹನ್ನೊಂದರ ಬಳಗದಿಂದ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದಿದ್ದರು.

ಹಾಗಾಗಿ ಸದ್ಯ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್, ಪರ್ಪಲ್ ಕ್ಯಾಪ್ ಪಡೆದಿರುವ ಹರ್ಷಲ್ ಪಟೇಲ್, ಆರೇಂಜ್ ಕ್ಯಾಪ್ ರೇಸ್ ನಲ್ಲಿರುವ ಶಿಖರ್ ಧವನ್ ರನ್ನ ತಂಡಕ್ಕೆ ಸೇರಿಸಿಕೊಂಡು ಕಳಪೆ ಫಾರ್ಮ್ ನ ಆಟಗಾರರನ್ನ ಕೈ ಬಿಡುವ ಸಾಧ್ಯತೆ ದಟ್ಟವಾಗಿತ್ತು. ಈ ಬಗ್ಗೆ ಐಸಿಸಿ ಸಹ ಹೇಳಿಕೆ ಪ್ರಕಟಿಸಿ, ಅಕ್ಟೋಬರ್ 10 ಕೊನೆಯ ದಿನಾಂಕವಾಗಿದೆ ನಿಮ್ಮ ತಂಡದಲ್ಲಿ ಮಾರ್ಪಾಡು ಮಾಡಲು ಎಂದು ಹೇಳಿತ್ತು. ಈ ಕಾರಣಕ್ಕಾಗಿ ನಿನ್ನೆ ಸಭೆ ನಡೆಸಿದ ಬಿಸಿಸಿಐ ಆಯ್ಕೆ ಮಂಡಳಿ ತಂಡಕ್ಕೆ ಕಮ್ ಬ್ಯಾಕ್ ಮಾಡುವ ನೀರಿಕ್ಷೆಯಲ್ಲಿದ್ದ ಆಟಗಾರರಿಗೆ ಸದ್ಯ ನಿರಾಸೆ ಮೂಡಿಸಿದೆ.

ಈ ಬಗ್ಗೆ ಅಧೀಕೃತ ಹೇಳಿಕೆ ಪ್ರಕಟಿಸಿರುವ ಬಿಸಿಸಿಐ ನಾವು ಯಾವುದೇ ಆಟಗಾರರನ್ನ ಬದಲಾಯಿಸುತ್ತಿಲ್ಲ. ಒಂದು ವೇಳೆ ಆಯ್ಕೆಯಾಗಿರುವ ಆಟಗಾರರು ಫಿಟ್ನೇಸ್ ಸಮಸ್ಯೆ ಅಥವಾ ಇಂಜುರಿ ದ ಬಳಲುತ್ತಿದ್ದರೇ ಮಾತ್ರ ಅಂತಹ ಆಟಗಾರರ ಬದಲಿ ಬೇರೆ ಆಟಗಾರರನ್ನು ಸೇರ್ಪಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಇರುವ ಆಟಗಾರರೇ ಟಿ 20 ವಿಶ್ವಕಪ್ ನಲ್ಲಿ ಆಡುವ ಸಾಧ್ಯತೆ ದಟ್ಟವಾಗಿದೆ. ಟಿ 20 ವಿಶ್ವಕಪ್ ನಲ್ಲಿ ಆಡುವ ಭಾರತ ತಂಡ ಇಂತಿದೆ. -ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್,ಮಹಮದ್ ಶಮಿ, ಜಸಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ,

Post Author: Ravi Yadav