ಮತ್ತೆ ಬರುತ್ತಿದೆ ವೀಕೆಂಡ್ ವಿಥ್ ರಮೇಶ್, ಆದರೆ ಬಿಡುಗಡೆಗೂ ಮುನ್ನವೇ ಅಭಿಮಾನಿಗಳಿಗೆ ಕಹಿ ಸುದ್ದಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡದಲ್ಲಿ ಪ್ರಸಾರವಾಗುವ ಎಲ್ಲಾ ರಿಯಾಲಿಟಿ ಶೋಗಳೂ ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸಿಕೊಂಡಿದೆ. ಕೆಲವು ಶೋಗಳು ಆ ಶೋ ನಡೆಸುವ ನಿರೂಪಕರಿಂದಾಗಿ ಹಿಟ್ ಅದರೆ ಇನ್ನೂ ಕೆಲವು ಶೋ ನ ಥೀಮ್ ನಿಂದಾಗಿ ಹಿಟ್ ಆಗುತ್ತವೆ. ಪ್ರತಿ ಶೋಗಳೂ ಚಿಕ್ಕದಾಗಿ ಚೊಕ್ಕದಾಗಿ ಕಡಿಮೆ ಅವಧಿಯಲ್ಲಿ ಮುಗಿದು ಹೋಗುವುದರಿಂದ ಅದರ ಮೌಲ್ಯಗಳೂ ಕೂಡ ಉತ್ತಮವಾಗಿಯೇ ಇರುತ್ತವೆ.

ಇಂಥ ಒಂದು ಮೌಲ್ಯಯುತವಾದ ಕಾರ್ಯಕ್ರಮ ಎಂದರೆ ಅದು ವೀಕೆಂಡ್ ವಿಥ್ ರಮೇಶ್. ನಟ ರಮೇಶ್ ಅರವಿಂದ್ ನಡೆಸಿಕೊಡುವ ಈ ಶೋ ಸಾಧಕರಿಗಾಗಿಯೇ ಇರುವ ಒಂದು ವೇದಿಕೆ. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದು, ಗುರುತಿಸಿಕೊಂಡ ಮಹಾನ್ ವ್ಯಕ್ತಿಗಳನ್ನು ಕರೆದು ಇಲ್ಲಿ ಅವರ ಜೀವನಯಶೋಗಾಥೆಯ ಅನಾವರಣ ಮಾಡಲಾಗುತ್ತದೆ. ಈವರೆಗೆ ಸುಮಾರು ಆವೃತ್ತಿಗಳು ಪ್ರಸಾರವಾಗಿದ್ದು ಸಾಕಷ್ಟು ಮೆಚ್ಚುಗೆಯನ್ನು ಗಳಿಸಿವೆ. ತೆರೆಯ ಮೇಲೆ, ರಾಜಕೀಯದಲ್ಲಿ ನಾವು ಕಂಡ ಆದರೆ ಅವರ ಬಗ್ಗೆ ಹೆಚ್ಚೆನೂ ಗೊತ್ತಿಲ್ಲದವರನ್ನು ಕರೆದು ಇಲ್ಲಿ ಅವರ ಬಗ್ಗೆ ಸಂಪೂರ್ಣ ವಿವರ ನೀಡಲಾಗುತ್ತದೆ.

ಹೌದು ನಮ್ಮ ಇಷ್ಟೇಲ್ಲಾ ಪೀಠಿಕೆ ನಿಮಗೆ ಸಿಹಿ ಸುದ್ದಿಯೊಂದನ್ನು ಹೇಳುವುದಕ್ಕೆ. ಜೀವಾಹಿನಿಯ ಪ್ರಖ್ಯಾತ ವಾಹಿನಿಯ ವೀಕೆಂಡ್ ವಿಥ್ ರಮೇಶ್ ಮತ್ತೆ ಹೊಸ ರೂಪದೊಂದಿಗೆ, ರಮೇಶ್ ಅರವಿಂದ್ ಅವರ ಪ್ರಭುದ್ಧ ಹೋಸ್ಟಿಂಗ್ ನೊಂದಿಗೆ ಮತ್ತೆ ಪ್ರಸಾರವಾಗುತ್ತಿದೆ. ಆದರೆ ಇಲ್ಲಿ ಒಂದು ಸಣ್ಣ ಬದಲಾವಣೆಯಿದೆ. ವಿಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಟಿವಿಯ ಪರದೆಯ ಮೇಲೆ ಪ್ರಸಾರವಾಗುವುದಿಲ್ಲ. ಜೀ ಫೈವ್ ಆಪ್ ನಲ್ಲಿ ಮಾತ್ರ ಪ್ರಸಾರವಾಗಲಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಈಗಾಗಲೇ ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್ ಗಳಲ್ಲಿನ ಒರಿಜಿನಲ್ ಶೋಗಳಮ್ತೆ ಜೀ ಫೈವ್ ನಲ್ಲಿಯೂ ಕೂಡ ಅದರದ್ದೇ ಆದ ಕಾರ್ಯಕ್ರಮಗಳನ್ನು ಪ್ರಸಾರಮಾಡಲು ನಾವು ಮುಂದಾಗಿದ್ದೇವೆ ಎಂದು ಝೀ ಕನ್ನಡದ ಬ್ಯುಸಿನೆಸ್ ಹೆಡ್ ಆಗಿರುವ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ. ಜೊತೆಗೆ ಈ ಆಪ್ ನಲ್ಲಿ ವಿಕೆಂಡ್ ವಿಥ್ ರಮೇಶ್ ವಿನೂತನ ಶೈಲಿಯಲ್ಲಿ ಮೂಡಿಬರುತ್ತಿರುವುದಾಗಿಯೂ ಕೂಡ ಮಾಹಿತಿ ನೀಡಿದ್ದಾರೆ.

Post Author: Ravi Yadav