ಪ್ಲೇ ಆಫ್ ಪಂದ್ಯಗಳಿಗೆ ಮಹತ್ವದ ಬದಲಾವಣೆ ಮಾಡಲು ಮುಂದಾದ ಆರ್ಸಿಬಿ. ಯಾರ್ಯಾರು ಹೊರಗೆ ಹೋಗಲಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವಂತೆ ಇದೀಗ ಆರ್ಸಿಬಿ ತಂಡವ ಆಟವಾಡಿದ 14 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಗೆಲುವು ಕಾಣುವ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡು ಮುಂದಿನ ಹಂತಕ್ಕೆ ಆಯ್ಕೆಯಾಗಿದೆ. ಎರಡನೆಯ ಸ್ಥಾನವನ್ನು ಪಡೆದು ಕೊಳ್ಳುವ ಎಲ್ಲಾ ಸಾಧ್ಯತೆಗಳು ಇರುವಾಗ ಆರ್ಸಿಬಿ ತಂಡ ಸನ್ರೈಸರ್ಸ್ ವಿರುದ್ಧ ಸೋಲನ್ನು ಕಂಡಿತ್ತು ಹಾಗೂ ನೆಟ್ ರನ್ ರೇಟ್ ನಲ್ಲಿ ಕಡಿಮೆ ಇರುವ ಕಾರಣ ಆರ್ಸಿಬಿ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಗಿದೆ. ಇನ್ನು ಇದೇ ಸಮಯದಲ್ಲಿ ಆರ್ಸಿಬಿ ತಂಡ ಈಗ ಇನ್ನು ಸತತ ಮೂರು ಪಂದ್ಯಗಳನ್ನು ಗೆದ್ದರೆ ಆರ್ಸಿಬಿ ತಂಡ ಮೊದಲ ಬಾರಿಗೆ ಕಿರೀಟವನ್ನು ಮುಡಿಗೇರಿಸಿ ಕೊಳ್ಳಬಹುದಾಗಿದೆ.

ಆದರೆ ಹೀಗೆ ಚಾಂಪಿಯನ್ ಆಗಿ ಹೊರಹೊಮ್ಮಬೇಕು ಎಂದರೆ ಖಂಡಿತವಾಗಲೂ ಆರ್ಸಿಬಿ ತಂಡ ಪ್ರತಿಯೊಂದು ವಿಭಾಗಗಳಲ್ಲೂ ಕೂಡ ಉತ್ತಮ ಪ್ರದರ್ಶನವನ್ನು ನೀಡಲೇ ಬೇಕಾಗಿದೆ. ಒಬ್ಬರಲ್ಲ ಒಬ್ಬರು ಆಟಗಾರರು ರನ್ ಗಳಿಸಬೇಕು, ಇನ್ನು ಉಳಿದಂತೆ ಬೌಲಿಂಗ್ ವಿಭಾಗ ಕೂಡ ಅಷ್ಟೇ ಬಲಿಷ್ಠವಾಗಿರಬೇಕು ಹಾಗೂ ಇವರ ಜೊತೆ ಫಿಲ್ಡಿಂಗ್ ವಿಭಾಗ ಕೂಡ ಉತ್ತಮವಾಗಿ ಪ್ರದರ್ಶನ ನೀಡಿದರೆ ಖಂಡಿತ ಆರ್ಸಿಬಿ ತಂಡ ಕಪ್ ಗೆಲ್ಲುವುದರಲ್ಲಿ ಯಾವುದೇ ಎರಡು ಮಾತಿಲ್ಲ. ಇಲ್ಲಿಯವರೆಗೂ ಎಲ್ಲವೂ ಮೇಲ್ನೋಟಕ್ಕೆ ಚೆನ್ನಾಗಿ ಕಾಣುತ್ತಿದ್ದರೂ ಕೂಡ ಆರ್ಸಿಬಿ ಕೆಲವೊಂದು ವಿಭಾಗಗಳಲ್ಲಿ ಕೆಲವೊಮ್ಮೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.

ಆದಕಾರಣ ಈ ವಿಭಾಗಗಳಲ್ಲಿ ತನ್ನನ್ನು ತಾನು ಸರಿಪಡಿಸಿಕೊಂಡು ಮುಂದಿನ ಮೂರು ಪಂದ್ಯಗಳಲ್ಲಿ ಕಣಕ್ಕಿಳಿಯುವ ಆಲೋಚನೆ ಆರ್ಸಿಬಿ ತಂಡದ್ದು. ಹಾಗಿದ್ದರೆ ಆರ್ಸಿಬಿ ತಂಡ ಯಾವ ವಿಭಾಗಗಳಲ್ಲಿ ತನ್ನನ್ನು ತಾನು ಸರಿಪ ಡಿಸಿಕೊಳ್ಳುವ ಅಲೋಚನೆ ಮಾಡುತ್ತಿದೆ ಹಾಗೂ ಯಾವ್ಯಾವ ಆಟಗಾರರನ್ನು ಹೊರಕ್ಕೆ ಕಳುಹಿಸಿ ಯಾರನ್ನು ಆಯ್ಕೆ ಮಾಡಿದರೆ ಆರ್ಸಿಬಿ ತಂಡ ಮತ್ತಷ್ಟು ಬಲಿಷ್ಠವಾಗಿ ಕಾಣಲಿದೆ ಹಾಗೂ ಗೆಲ್ಲುವುದು ಸುಲಭವಾಗಲಿದೆ ಎಂಬುದರ ಕುರಿತು ಈಗಾಗಲೇ ಚರ್ಚೆಗಳು ಆರಂಭವಾಗಿವೆ..

ಹೌದು ಸ್ನೇಹಿತರೇ ಈಗಾಗಲೇ ಆರ್ಸಿಬಿ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲು ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ತರಬೇತುದಾರರು ಚರ್ಚೆ ಮಾಡುತ್ತಿದ್ದು, ಯಾವ ಆಟಗಾರನನ್ನು ಕೈಬಿಟ್ಟು ಯಾವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡರೆ ತಂಡ ಮತ್ತಷ್ಟು ಬಲಿಷ್ಠವಾಗಲಿದೆ, ಎಂದು ಅದರ ಕುರಿತು ಚರ್ಚೆ ಮಾಡುತ್ತಿದ್ದು ಎರಡು ಆಟಗಾರರನ್ನು ಬದಲಾಯಿಸುವ ಮೂಲಕ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ನಿರ್ಧಾರ ಮಾಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಮೊದಲನೆಯದಾಗಿ ಐಪಿಎಲ್ ಟೂರ್ನಿಯ ಲಕ್ಕಿ ಮ್ಯಾನ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಡ್ಯಾನಿ ಕ್ರಿಸ್ಟಿಯನ್ ಅವರನ್ನು ತಂಡದಿಂದ ಕೈ ಬಿಡುವ ಕುರಿತು ಚರ್ಚೆ ನಡೆಯುತ್ತಿದೆ ಎಂಬುದು ತಿಳಿದು ಬಂದಿದೆ, ಬ್ಯಾಟಿಂಗ್ನಲ್ಲಿ ಸತತ ವೈಫಲ್ಯಗಳನ್ನು ಎದುರಿಸುತ್ತಿರುವ ಡ್ಯಾನಿ ಕ್ರಿಸ್ಟಿಯನ್ ರವರು. ಬೌಲಿಂಗ್ ನಲ್ಲಿ ಒಂದೆರಡು ಪಂದ್ಯಗಳಲ್ಲಿ ಮಾತ್ರ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಉಳಿದ ಯಾವುದೇ ರೀತಿಯಲ್ಲಿ ಇವರ ಪ್ರದರ್ಶನ ಹೆಚ್ಚಾಗಿ ಕಂಡು ಬರುತ್ತಿಲ್ಲ. ಅದೇ ಕಾರಣಕ್ಕಾಗಿ ಅವರನ್ನು ತಂಡದಿಂದ ಕೈ ಬಿಟ್ಟು ಟಿಮ್ ಡೇವಿಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ ಎಂಬುದು ತಿಳಿದು ಬಂದಿದೆ.

ಇನ್ನು ಇನ್ನು ಇದೇ ಸಮಯದಲ್ಲಿ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಲು ಆಲೋಚನೆ ನಡೆಸಿರುವ ಆರ್ಸಿಬಿ ತಂಡವು ಅಷ್ಟೇನೂ ಉತ್ತಮ ಪ್ರದರ್ಶನ ನೀಡದೆ ಇರುವ ಜಾರ್ಜ್ ಗಾರ್ಟನ್ ರವರನ್ನು ತಂಡದಿಂದ ಕೈಬಿಟ್ಟು ನ್ಯೂಜಿಲೆಂಡ್ ತಂಡದ ಕೈಲ್ ಜೇಮಿಸನ್ ಅವರನ್ನು ತಂಡಕ್ಕೆ ವಾಪಸ್ಸು ಕರೆಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಕೈಲ್ ಜೇಮಿಸನ್ ರವರು ಇಂಜುರಿ ಸಮಸ್ಯೆಯಿಂದ ಇಷ್ಟು ದಿವಸ ಹೊರಗೆ ಉಳಿದಿದ್ದ ಕಾರಣ ಜಾರ್ಜ್ ಗಾರ್ಟನ್ ರವರಿಗೆ ಸ್ಥಾನ ಸಿಕ್ಕಿತ್ತು. ಆದರೆ ಇದೀಗ ಜೆಮಿಸನ್ ರವರು ಗುಣಮುಖರಾಗಿದ್ದು ಮತ್ತೆ ತಂಡಕ್ಕೆ ವಾಪಸ್ಸಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಎರಡು ಬದಲಾವಣೆಗಳನ್ನು ಹೊರತು ಪಡಿಸಿದರೆ ಉಳಿದ ಆಟಗಾರರು ತಂಡದಲ್ಲಿ ಮುಂದುವರಿಯಲಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ

Post Author: Ravi Yadav