ಬಲಿಷ್ಠ ಆರ್ಸಿಬಿ ವಿರುದ್ಧ ಗೆಲ್ಲುವ ಕನಸಿನಲ್ಲಿದ್ದ ಕೆಕೆಆರ್ ತಂಡಕ್ಕೆ ಬಿಗ್ ಶಾಕ್, ಪಂದ್ಯಕ್ಕೂ ಮುನ್ನವೇ ಕಹಿ ಸುದ್ದಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಗಿದಿದ್ದು,ಪ್ಲೇ ಆಫ್ ಪಂದ್ಯಗಳು ಭಾನುವಾರದಿಂದ ಆರಂಭವಾಗಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಏಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ , ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಮವಾರ ಎದುರಿಸಲಿದೆ. ಈ ಮಧ್ಯೆ ಏಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡವನ್ನ ಮಣಿಸುವ ವಿಶ್ವಾಸ ಹೊಂದಿದ್ದ ಕೆಕೆಆರ್ ತಂಡಕ್ಕೆ ಈಗ ದೊಡ್ಡ ಶಾಕ್ ಎದುರಾಗಿದೆ.

ಹಾಗೇ ನೋಡಿದರೇ ಕೋಲ್ಕತ್ತಾ ತಂಡ ಭಾರತದಲ್ಲಿ ನಡೆದ ಐಪಿಎಲ್ ವೇಳೆ ಹೀನಾಯ ಸ್ಥಿತಿಯಲ್ಲಿತ್ತು. ಆದರೇ ಯು.ಎ.ಇ ಯಲ್ಲಿ ಆರಂಭವಾದ ಚರಣದಲ್ಲಿ ವೆಂಕಟೇಶ್ ಅಯ್ಯರ್ ತಂಡಕ್ಕೆ ಸೇರ್ಪಡೆಯಾದ ನಂತರ ಕೋಲ್ಕತ್ತಾ ತಂಡ ಗೆಲುವಿನ ಹಳಿಗೆ ಮರಳಿತು. ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಶುಭಮಾನ್ ಗಿಲ್, ನಿತೀಶ್ ರಾಣಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಈ ಮಧ್ಯೆ ಆ ತಂಡದ ಪ್ರಮುಖ ಆಲ್ ರೌಂಡರ್ ಆಂಡ್ರೆ ರಸೆಲ್ ಇಂಜುರಿ ಸಮಸ್ಯೆಯಿಂದ ಅಲಭ್ಯರಾಗಿದ್ದರೂ ತಂಡದ ಗೆಲುವಿನ ಹಳಿ ಹಾದಿ ತಪ್ಪಿರಲಿಲ್ಲ. ಆದರೇ ಈಗ ತಂಡದ ಮತ್ತೊಬ್ಬ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಸಹ ಅಲಭ್ಯರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ಸಮನ್ ಹಾಗೂ ಪ್ರಮುಖ ಏಡಗೈ ಸ್ಪಿನ್ನರ್ ಆಗಿರುವ ಶಕೀಬ್ ಅಲ್ ಹಸನ್ ಕೆಕೆಆರ್ ತಂಡದಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಹೊರಬಂದಿದೆ.

ವಿಶ್ವ ಟಿ 20 ಕಪ್ ಆಡಲು ಬಾಂಗ್ಲಾದೇಶ ತಂಡ ಭಾನುವಾರವೇ ಯು.ಎ.ಇಗೆ ಬಂದಿಳಿಯಲಿದೆಯಂತೆ. ಆಗಲೇ ತಂಡದ ಜೊತೆ ಸೇರಲು ಶಕೀಬ್ ಅಲ್ ಹಸನ್ ನಿರ್ಧರಿಸಿರುವ ಕಾರಣ ಪ್ಲೇ ಆಫ್ ಪಂದ್ಯದಿಂದ ಹೊರಗುಳಿಯಬೇಕಾಗಿದೆ. ರಾಜಸ್ತಾನ ತಂಡದಲ್ಲಿದ್ದ ಮುಸ್ತಾಜಫೀರ್ ರೆಹಮಾನ್ ಸಹ ಐಪಿಎಲ್ ಬಯೋಬಬಲ್ ನಿಂದ ನೇರವಾಗಿ ತಮ್ಮ ರಾಷ್ಟ್ರೀಯ ತಂಡವನ್ನ ಸೇರಲಿದ್ದಾರಂತೆ. ಬಾಂಗ್ಲಾದೇಶ ತಂಡ ಟಿ 20 ವಿಶ್ವಕಪ್ ಗೂ ಮುನ್ನ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಶಕೀಬ್ ಅಲ್ ಹಸನ್ ತಂಡವನ್ನು ಈಗಲೇ ಸೇರಲು ನಿರ್ಧರಿಸಿದ ಕಾರಣ, ಸೋಮವಾರ ನಡೆಯಲಿರುವ ಪ್ಲೇ ಆಫ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಆರ್ಸಿಬಿ ಬ್ಯಾಟ್ಸಮನ್ ಗಳು ಏಡಗೈ ಸ್ಪಿನ್ನರ್ ಎದುರು ಕೊಂಚ ತಿಣುಕಾಡುತ್ತಿದ್ದರು. ಆದರೇ ಶಕೀಬ್ ಇಲ್ಲದ ಕಾರಣ ಈಗ ನಿಟ್ಟುಸಿರು ಬಿಡಬಹುದು. ಶಕೀಬ್ ಬದಲು ಟೀಮ್ ಸೌಥಿ ಕೆಕೆಆರ್ ತಂಡದಲ್ಲಿ ಆಡುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav