ಪ್ರತಿ ಲಿಫ್ಟ್ ನಲ್ಲಿಯೂ ಕೂಡ ಕನ್ನಡಿಯನ್ನು ಯಾಕೆ ಹಾಕಿರುತ್ತಾರೆ ಗೊತ್ತೇ?? ಜನರ ಮನಸ್ಸಿನ ಜೊತೆ ಏನು ಸಂಬಂಧ ಗೊತ್ತಾ??

ಪ್ರತಿ ಲಿಫ್ಟ್ ನಲ್ಲಿಯೂ ಕೂಡ ಕನ್ನಡಿಯನ್ನು ಯಾಕೆ ಹಾಕಿರುತ್ತಾರೆ ಗೊತ್ತೇ?? ಜನರ ಮನಸ್ಸಿನ ಜೊತೆ ಏನು ಸಂಬಂಧ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಕೆಲವು ವಸ್ತುಗಳಲ್ಲಿ ಅದು ಏನಕ್ಕೆ ಇರುತ್ತದೆ ಇದು ಏನು ಯಾವುದಕ್ಕಾಗಿ ಇರುತ್ತದೆ ಎಂಬ ಗೊಂದಲಗಳು ಹಾಗೂ ಪ್ರಶ್ನೆಗಳು ಸಾಕಷ್ಟು ಜನರಲ್ಲಿ ಇಂದಿಗೂ ಕೂಡ ಇರಬಹುದು. ಇಂದಿನ ಮಾತನಾಡಲು ಹೊರಟಿರುವುದು ಒಂದು ವಿಶೇಷ ವಸ್ತುವಿನ ಕುರಿತಂತೆ. ಹೌದು ಸ್ನೇಹಿತರೆ ಮೊದಲು ಕೇವಲ ನಗರ ಪ್ರದೇಶದಲ್ಲಿ ಕಟ್ಟಡಗಳಲ್ಲಿ ಲಿಫ್ಟ್ ಇದ್ದವು. ಆದರೆ ಈಗ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಲಿಫ್ಟ್ ಗಳು ಕಟ್ಟಡಗಳಲ್ಲಿ ಬರಲು ಆರಂಭವಾಗಿದೆ. ಹೌದು ಸ್ನೇಹಿತರೆ ಮೊದಲು ಮೇಲೆ ಹೋಗಲು ಅಥವಾ ಕೆಳಗೆ ಹೋಗಲು ಮೆಟ್ಟಿಲುಗಳನ್ನು ಉಪಯೋಗಿಸುತ್ತಿದ್ದರು.

ಆದರೆ ಈಗ ಎಲ್ಲರೂ ಕೂಡ ಆಧುನಿಕತೆಗೆ ಹೋಗುತ್ತಿದ್ದು ಎಲ್ಲಾ ಕಟ್ಟಡಗಳಲ್ಲಿ ಲಿಫ್ಟ್ ಗಳಲ್ಲಿ ಚಲಿಸಲು ಪ್ರಾರಂಭಿಸಿದ್ದಾರೆ. ಹೌದು ಸ್ನೇಹಿತರೇ ಲಿಫ್ಟ್ ಗಳಲ್ಲಿ ಚಲಿಸುವುದು ಇತ್ತೀಚಿನ ದಿನಗಳಲ್ಲಿ ಎಲ್ಲಾ ವರ್ಗದ ಜನರಿಗೂ ಕೂಡ ರೂಢಿಯಾಗಿಬಿಟ್ಟಿದೆ. ಇನ್ನೂ ಹಲವಾರು ಜನರು ನೀವು ಲಿಫ್ಟಿನಲ್ಲಿ ಕನ್ನಡಿಗಳನ್ನು ಇಟ್ಟಿರುತ್ತಾರೆ ಇದು ಯಾಕೆ ಎಂಬುದಾಗಿ ನೀವು ಎಂದಾದರೂ ಯೋಚಿಸಿದ್ದೀರಾ. ಹೌದು ಸ್ನೇಹಿತರೆ ಬನ್ನಿ ಇದನ್ನು ಯಾಕಾಗಿ ಇಟ್ಟಿದ್ದಾರೆ ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ.

ಹೌದು ಸ್ನೇಹಿತರೆ ಮೆಟ್ಟಿಲು ಗಳಿಗಿಂತ ಲಿಫ್ಟಿನಲ್ಲಿ ಹೋಗುವುದೇ ಸಾಕಷ್ಟು ಸಮಯವನ್ನು ಉಳಿಸುತ್ತದೆ ಆದರೂ ಕೂಡ ನಿಟ್ಟಿನಲ್ಲಿ ಹೆಚ್ಚಿನ ಮಹಡಿ ಗಳಿಗೆ ಹೋಗಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಮಧ್ಯದಲ್ಲಿ ಹಲವಾರು ಬಾರಿ ನಿಲ್ಲುವುದು ಕೂಡ ಆಗುತ್ತದೆ. ಇನ್ನು ಕೆಲವರಿಗೆ ಲಿಫ್ಟಿನಲ್ಲಿ ಹೋಗೋದಕ್ಕೆ ತುಂಬಾನೇ ಹಿಂಜರಿಕೆ. ಹೀಗಾಗಿ ಲಿಫ್ಟ್ ಎಂಜಿನಿಯರ್ಗಳು ಹೆಚ್ಚಿನ ಬಾರಿ ಲಿಫ್ಟಿನಲ್ಲಿ ಕನ್ನಡಿಯನ್ನು ಹಾಕುತ್ತಾರೆ. ಇದರಿಂದಾಗಿ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುತ್ತಾ, ಸರಿ ಮಾಡಿಕೊಳ್ಳುತ್ತ, ಮೇಕಪ್ ನೋಡಿಕೊಳ್ಳುತ್ತಾ ಅಥವಾ ತನ್ನನ್ನು ತಾನು ಮನೋರಂಜನೆ ಮಾಡಿಕೊಳ್ಳಲಿ ಹಾಗೂ ಇದರಿಂದಾಗಿ ಅವರ ಇತರ ಆಲೋಚನೆ ಹಾಗೂ ಸಮಯ ಹೋಗಿದ್ದು ತಿಳಿಯದೆ ಇರಲಿ ಎಂಬ ಕಾರಣ ಇಟ್ಟುಕೊಂಡು ಮಾಡಿದ್ದಾರೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.