ಕೇವಲ ಬ್ಯಾಟ್ಸಮನ್ ಗಳಿಗಷ್ಟೇ ಅಲ್ಲ, ಇನ್ನು ಮುಂದೆ ಬೌಲರ್ ಗಳಿಗೂ ಸಿಗಲಿದೆಯಂತೆ ಫ್ರೀ ಹಿಟ್, ಹೇಗೆ ಗೊತ್ತೇ??

ಕೇವಲ ಬ್ಯಾಟ್ಸಮನ್ ಗಳಿಗಷ್ಟೇ ಅಲ್ಲ, ಇನ್ನು ಮುಂದೆ ಬೌಲರ್ ಗಳಿಗೂ ಸಿಗಲಿದೆಯಂತೆ ಫ್ರೀ ಹಿಟ್, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕ್ರಿಕೇಟ್ ಜಗತ್ತಿನಲ್ಲಿ ಹೊಸ ನಿಯಮಗಳು ಆಗಾಗ ಬರುತ್ತಿರುತ್ತವೆ. ಅಂತಹದರಲ್ಲಿ ಬಂದಿರುವ ನಿಯಮವೆಂದರೇ ಫ್ರೀ ಹಿಟ್. ಬೌಲರ್ ಯಾವುದಾದರೊಂದು ನೋ ಬಾಲ್ ಎಸೆದರೇ ಅದಕ್ಕೆ ಮುಂದಿನ ಎಸೆತವನ್ನು ಫ್ರೀ ಹಿಟ್ ಎಂದು ಕರೆಯಲಾಗುತ್ತಿತ್ತು. ಮೊದಲು ಟಿ 20 ಕ್ರಿಕೇಟ್ ಗೆ ಮಾತ್ರ ಅನ್ವಯವಿದ್ದ ಈ ನಿಯಮ ನಂತರದ ದಿನಗಳಲ್ಲಿ ಏಕದಿನ ಕ್ರಿಕೇಟ್ ಗೂ ಅನ್ವಯವಾಯಿತು.

ಈಗ ಟಿ 20 ಕ್ರಿಕೇಟ್ ನ್ನು ಮತ್ತಷ್ಟು ರೋಚಕಗೊಳಿಸಲು ಹೊಸದೊಂದು ನಿಯಮವನ್ನ ತರಲು ಯೋಚಿಸುತ್ತಿದೆಯಂತೆ. ಅದೇ ಬ್ಯಾಟ್ಸಮನ್ ಗಳಿಗಿರುವ ಫ್ರೀ ಹಿಟ್ ನಂತೆ, ಬೌಲರ್ ಗಳಿಗೂ ಫ್ರೀ ಹಿಟ್ ನೀಡಲು ಒಂದು ಹೊಸ ನಿಯಮವನ್ನು ರೂಪಿಸಿದ್ದಾರಂತೆ. ನಿಯಮಗಳ ಪ್ರಕಾರ ಒಬ್ಬ ಬ್ಯಾಟ್ಸಮನ್ ಔಟ್ ಆದ ನಂತರ ಮತ್ತೊಬ್ಬ ಬ್ಯಾಟ್ಸಮನ್ ಕ್ರೀಸ್ ಗೆ ಬರಲು ಐಸಿಸಿ ನಿಯಮಗಳ ಪ್ರಕಾರ 70 ಸೆಕೆಂಡ್ ಗಳ ಕಾಲಾವಕಾಶವನ್ನು ರೂಪಿಸಲಾಗಿದೆಯಂತೆ. ಆದರೇ ಈಗಿನ ಬ್ಯಾಟ್ಸಮನ್ ಗಳು ಕ್ರೀಸ್ ಗೆ ಬರಲು 2 ನಿಮಿಷಕ್ಕಿಂತಲೂ ಹೆಚ್ಚು ತೆಗೆದುಕೊಳ್ಳುತ್ತಿದ್ದಾರಂತೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಕೆ.ಎಫ್.ಸಿ ಬಿಗ್ ಬ್ಯಾಶ್ ಲೀಗ್ ನಲ್ಲಿ ಹಲವಾರು ಪಂದ್ಯಗಳು ಪಂದ್ಯಗಳು ನಿಗದಿತ ಸಮಯಕ್ಕಿಂತ ಹೆಚ್ಚಿನ ಅವಧಿಗೆ ಮುಗಿಯುತ್ತಿದ್ದವಂತೆ. ಮೊದಮೊದಲು ನಿಧಾನಗತಿಯ ಬೌಲಿಂಗ್ ಎಂದು ಪಂದ್ಯದ ನಂತರ ನಾಯಕರಿಗೆ ದಂಡ ವಿಧಿಸಲಾಗುತ್ತಿತ್ತಂತೆ. ಸರಣಿ ಮುಗಿದ ನಂತರ ಈ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿದಾಗ, ಸಮಯವನ್ನ ತಿಂದದ್ದು ನಿಧಾನಗತಿಯ ಬೌಲಿಂಗ್ ನಿಂದಲ್ಲ.

ಬದಲಿಗೆ ಬ್ಯಾಟ್ಸಮನ್ ಗಳಿಂದ. ಹೌದು ಒಬ್ಬ ಬ್ಯಾಟ್ಸಮನ್ ಔಟಾದ ನಂತರ ಮತ್ತೊಬ್ಬ ಬ್ಯಾಟ್ಸಮನ್ ಕ್ರೀಸ್ ಗೆ ಬರಲು ಎರಡು ನಿಮಿಷಕ್ಕಿಂತ ಜಾಸ್ತಿ ಸಮಯ ತೆಗೆದುಕೊಳ್ಳುತ್ತಿರುವುದು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಹಾಗಾಗಿ ಬ್ಯಾಟ್ಸಮನ್ ಗಳು ವಿನಾಕಾರಣ ಸಮಯವನ್ನು ಹಾಳು ಮಾಡುವುದನ್ನ ತಡೆಯಲು ಈಗ ಬೌಲರ್ ಗಳಿಗೂ ಫ್ರೀ ಹಿಟ್ ಎಂಬ ಹೊಸ ನಿಯಮವನ್ನ ಜಾರಿಗೆ ತರಲು ಯೋಚಿಸುತ್ತಿದ್ದಾರಂತೆ.

ಬೌಲರ್ ಗಳಿಗೆ ಹೇಗೆ ಫ್ರೀ ಹಿಟ್ ಎಂದರೇ, ಒಬ್ಬ ಬ್ಯಾಟ್ಸಮನ್ ಔಟ್ ಆದ ನಂತರ ಮತ್ತೊಬ್ಬ ಬ್ಯಾಟ್ಸಮನ್ ಕ್ರೀಸ್ ಗೆ ಬರಲು 70 ಸೆಕೆಂಡ್ ಸಮಯ ಇರುತ್ತದೆ. ಒಂದು ವೇಳೆ ಆತ 70 ಸೆಕೆಂಡ್ ನೊಳಗೆ ಕ್ರೀಸ್ ಗೆ ಬರದಿದ್ದರೇ ಆಗ ಬೌಲರ್ ಗೆ ಫ್ರೀ ಹಿಟ್ ನೀಡಲಾಗುತ್ತದೆ. ಆಗ ಹೊಸದಾಗಿ ಕ್ರೀಸ್ ಗೆ ಬಂದ ಬ್ಯಾಟ್ಸಮನ್ ವಿಕೇಟ್ ಬಿಟ್ಟು ನಿಲ್ಲಬೇಕು. ಆ ವೇಳೆ ಬೌಲರ್ ವಿಕೇಟ್ ಗೆ ಗುರಿಯಿಟ್ಟು ಬೌಲ್ ಮಾಡಬೇಕು. ಒಂದು ವೇಳೆ ಬೌಲರ್ ವಿಕೇಟ್ ಗೆ ಗುರಿಯಿಟ್ಟು ಬೌಲ್ಡ್ ಮಾಡಿದರೇ ಆತ ಔಟ್ ಆದಂತೆ.

ಇಲ್ಲವಾದಲ್ಲಿ ಬೌಲರ್ ನ ಫ್ರೀ ಹಿಟ್ ವ್ಯರ್ಥವಾದಂತೆ. ಈ ರೀತಿಯ ಹೊಸ ನಿಯಮವನ್ನ ಮುಂದಿನ ಸೀಸನ್ ನ ಕೆ.ಎಫ್.ಸಿ ಬಿಗ್ ಬ್ಯಾಶ್ ಲೀಗ್ ನಲ್ಲಿ ಅಳವಡಿಸಲು ಚಿಂತನೆ ನಡೆಸುತ್ತಿದ್ದಾರಂತೆ. ಅಲ್ಲಿ ಅಳವಡಿಸಿದ ನಂತರದ ಸಾಧಕ ಭಾಧಕಗಳನ್ನ ಚರ್ಚಿಸಿ ಐಸಿಸಿ ಸಹ ತನ್ನ ಮುಂದಿನ ಟೂರ್ನಿಗಳಲ್ಲಿ ಅಳವಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಇಷ್ಟು ದಿನ ಬ್ಯಾಟ್ಸಮನ್ ಗಳಿಗೆ ನೆರವಾಗುತ್ತಿದ್ದ ಫ್ರೀ ಹಿಟ್ ಗಳು ಇನ್ಮುಂದೆ ಬೌಲರ್ ಗಳಿಗೂ ಇರುತ್ತವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.