ಸನ್ ರೈಸರ್ಸ್ ವಿರುದ್ಧ ಸೋಲು, ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ದೂರಿದ್ದು ಯಾರನ್ನು ಗೊತ್ತೇ??

ಸನ್ ರೈಸರ್ಸ್ ವಿರುದ್ಧ ಸೋಲು, ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ದೂರಿದ್ದು ಯಾರನ್ನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಸಲ ಕಪ್ ನಮ್ಮದೇ ಎಂದು ಭರವಸೆ ಮೂಡಿಸಿದ್ದ ಆರ್ಸಿಬಿ ತಂಡ ಗೆಲುವಿನ ಲಯದಲ್ಲಿತ್ತು. ಆದರೇ ಟೂರ್ನಿಯಲ್ಲೇ ಅತ್ಯಂತ ಕಳಪೆ ಪ್ರದರ್ಶನದಿಂದ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಗೆದ್ದಿದ್ದರೇ ಎರಡನೇ ಸ್ಥಾನದಲ್ಲಿ ಇರುತ್ತಿತ್ತು. ಆಗ ಒಂದು ವೇಳೆ ಮೊದಲ ಸೆಮಿಫೈನಲ್ ನಲ್ಲಿ ಸೋತರು ಆರ್ಸಿಬಿ ತಂಡಕ್ಕೆ ಮತ್ತೊಂದು ಅವಕಾಶ ಸಿಗುತ್ತಿತ್ತು. ಆದರೇ ಈಗ ಮೂರನೇ ಸ್ಥಾನದಲ್ಲಿ ಇರುವುದರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಅಥವಾ ಮುಂಬೈ ಇಂಡಿಯನ್ಸ್ ವಿರುದ್ದ ಏಲಿಮಿನೇಟರ್ ಪಂದ್ಯ ಆಡುವ ಸಾಧ್ಯತೆ ಇದೆ.

ಇನ್ನು ನಿನ್ನೆ ನಡೆದ ಸುಲಭದ ಪಂದ್ಯದಲ್ಲಿ ಆರ್ಸಿಬಿ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ ಗೆಲ್ಲುವ ಎಲ್ಲಾ ಸಾಧ್ಯತೆ ಇದ್ದರೂ, ಸೋತಿತು. ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದರೂ, ಆರ್ಸಿಬಿ ಬೌಲರ್ ಗಳು ಕಡಿಮೆ ಮೊತ್ತಕ್ಕೆ ಎಸ್.ಆರ್.ಹೆಚ್ ತಂಡವನ್ನು ಕಟ್ಟಿಹಾಕಿದ್ದರು. ಆದರೇ ಕಡಿಮೆ ಮೊತ್ತವನ್ನ ಚೇಸ್ ಮಾಡುವಲ್ಲಿ ಆರ್ಸಿಬಿ ತಂಡ ಸಂಪೂರ್ಣ ವಿಫಲವಾಯಿತು. ಈ ಬಗ್ಗೆ ಮಾತನಾಡಿದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಸೋಲಿಗೆ ಪ್ರಮುಖ ಕಾರಣಗಳನ್ನು ತಿಳಿಸಿದ್ದಾರೆ.

ನಮಗೆ ಟಾರ್ಗೇಟ್ ಚಿಕ್ಕದಾಗಿತ್ತು. ಇಂತಹ ಟಾರ್ಗೇಟ್ ಚೇಸ್ ಮಾಡುವಲ್ಲಿ ನಾವು ಉತ್ತಮ ಪಾರ್ಟನರ್ ಶಿಪ್ ಗಳನ್ನ ಬೆಳೆಸಬೇಕಿತ್ತು. ಚೆನ್ನಾಗಿ ಆಡುತ್ತಿದ್ದ ಗ್ಲೆನ್ ಮ್ಯಾಕ್ಸವೆಲ್ ಮತ್ತು ದೇವದತ್ ಪಡಿಕಲ್ ಉತ್ತಮ ಜೊತೆಯಾಟ ಆಡಿದ್ದರು. ಆದರೇ ಮ್ಯಾಕ್ಸವೆಲ್ ರನ್ ಔಟ್ ನಮ್ಮಿಂದ ಗೆಲುವು ಕಸಿಯಿತು. ಎಬಿ ಡಿ ವಿಲಿಯರ್ಸ್ ಚೆನ್ನಾಗಿ ಬ್ಯಾಟ್ ಬೀಸುವ ಆಟಗಾರರ ಬೆನ್ನು ತಟ್ಟುತ್ತಾರೆ. ಹಾಗಾಗಿ 19 ನೇ ಓವರ್ ನಲ್ಲಿ ಶಹಬಾಜ್ ಅಹ್ಮದ್ ಗೆ ಅವಕಾಶ ನೀಡಿದರು.

ಆ ಓವರ್ ನಲ್ಲಿ ಎಬಿಡಿ ಸ್ಟ್ರೈಕ್ ನಲ್ಲಿದ್ದರೇ ಖಂಡಿತವಾಗಿ ಗೆಲುವು ನಮ್ಮದಾಗುತ್ತಿತ್ತು. ಆದರೇ ಎಬಿಡಿಗೆ ಹೆಚ್ಚಿನ ಸ್ಟ್ರೈಕ್ ಸಿಗಲಿಲ್ಲ. ಸಿಕ್ಕಿದ್ದರೇ ಖಂಡಿತ ಗೆಲುವು ನಮ್ಮದಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಅತ್ಯುತ್ತಮ ವೇಗದ ಬೌಲಿಂಗ್ ಮಾಡಿದ್ದ ಕಾಶ್ಮೀರದ ಉಮ್ರಾನ್ ಮಲೀಕ್ ಬಗ್ಗೆ ಪ್ರಶಂಸೆಯ ಮಾತನಾಡಿದ ಕೊಹ್ಲಿ , ಈ ಥರದ ವೇಗದ ಬೌಲರ್ ಗಳು ಭಾರತೀಯ ತಾರೆಗಳಾಗಿರುವುದು ಅಧ್ಭುತ. ಅವರ ಬೌಲಿಂಗ್ ನಿಜಕ್ಕೂ ಆಶಾದಾಯಕವಾಗಿತ್ತು. ಮುಂದಿನ ಪಂದ್ಯಗಳಲ್ಲಿ ಆರ್ಸಿಬಿ ಉತ್ತಮವಾಗಿ ಕಮ್ ಬ್ಯಾಕ್ ಮಾಡಲಿದ್ದು, ಈ ಭಾರಿ ಖಂಡಿತ ಕಪ್ ಗೆಲ್ಲಲಿದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.