ದಾಂಪತ್ಯ ಜೀವನದಲ್ಲಿ ದಂಪತಿಗಳು ಈ ನಾಲ್ಕು ತಪ್ಪುಗಳನ್ನು ಮಾಡಬಾರದು ಎನ್ನುತ್ತದೆ ಗರುಡ ಪುರಾಣ, ಯಾವ್ಯಾವು ಗೊತ್ತೆ??
ದಾಂಪತ್ಯ ಜೀವನದಲ್ಲಿ ದಂಪತಿಗಳು ಈ ನಾಲ್ಕು ತಪ್ಪುಗಳನ್ನು ಮಾಡಬಾರದು ಎನ್ನುತ್ತದೆ ಗರುಡ ಪುರಾಣ, ಯಾವ್ಯಾವು ಗೊತ್ತೆ??
ನಮಸ್ಕಾರ ಸ್ನೇಹಿತರೇ ನಮ್ಮ ಜೀವನದಲ್ಲಿ ನಾವು ಹೇಗಿರಬೇಕು ಎನ್ನುವುದಕ್ಕೆ ನಮ್ಮ ಹಿರಿಯರೇ ನಿದರ್ಶನ. ಅದರಲ್ಲೂ ದಾಂಪತ್ಯದಲ್ಲಿ ಗಂಡು ಹೆಣ್ಣು ಹೇಗೆ ಅನುಸರಿಸಿಕೊಂಡು ಹೋಗಬೇಕು ಎನ್ನುವುದನ್ನು ಅತ್ಯಂತ ಸೂಕ್ಷ್ಮವಾಗಿ ನಮಗೆ ಕಲಿಸಿದ್ದಾರೆ. ಇನ್ನು ಪುರಾಣಗಳೂ ಕೂಡ ನಮ್ಮ ಜೀವನದ ಯಶಸ್ಸಿನ ಬಗ್ಗೆ ನೆಮ್ಮದಿಗೆ ನಾವೇನೇನು ಮಾಡಬೇಕು, ನಾವು ಹೇಗಿರಬೇಕು ಎಂಬಿತ್ಯಾದಿ ಅಂಶಗಳನ್ನು ಅತ್ಯಂತ ಸುಂದರವಾಗಿ ಬಿಂಬಿಸಿವೆ.
ಹೌದು ಸ್ನೇಹಿತರೆ, ಗರುಡ ಪುರಾಣದ ಬಗ್ಗೆ ನೀವು ಕೇಳಿರಬಹುದು. ಮಹಾವಿಷ್ಣುವಿನ ವಾಹನ ಗರುಡ ನ ಜೀವನ ಹಾಗೂ ಮೃತ್ಯು ಬಗೆಗಿನ ಜಿಜ್ಞಾಸೆಗಳನ್ನು ಒಳಗೊಂಡ ಈ ಮಹಾಪುರಾಣ ನಮ್ಮ ಜೀವನಕ್ಕೆ ಅಕ್ಷರಶಃ ಹೊಂದಾಣಿಕೆಯಾಗುವಂಥದ್ದು. ಗರುಡ ಪುರಾಣ ಗಂಡು ಹೆಣ್ಣು ಹೇಗಿರಬೇಕು ಎಂಬ ವಿಷಯದ ಬಗ್ಗೆಯೂ ಕೂಡ ಹಲವು ವಿಚಾರಗಳನ್ನು ಪ್ರಸ್ತುತ ಪಡಿಸಿದೆ ಈ ಎಲ್ಲಾ ವಿಷಯಗಳು ಸಾರ್ವಕಾಲಿಕ ಸತ್ಯವೂ ಕೂಡ ಹೌದು. ಹಾಗಾದರೆ ದಾಂಪತ್ಯದ ಬಗ್ಗೆ ಏನನ್ನುತ್ತೆ ಗರುಡ ಪುರಾಣ ನೋಡೋಣ ಬನ್ನಿ.
ಗಂಡ ಹೆಂಡತಿ ಮದುವೆಯಾಗಿ ತುಂಬಾ ದಿನ ದೂರ ಇರುವುದು ಒಳ್ಳೆಯದಲ್ಲ. ಇದರಿಂದ ವೈವಾಹಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ ಹತ್ತಿರವೇ ಇದ್ದು ಸಮಸ್ಯೆಗಳಿದ್ದಊ ಬಗೆಹರಿಸಿಕೊಳ್ಳಬೇಕು. ಇನ್ನು ಜೀವನದಲ್ಲಿ ಚಾರಿತ್ರ್ಯ ಎನ್ನುವುದು ತುಂಬಾನೇ ಮುಖ್ಯ, ಯಾವುದೇ ಕಾರಣಕ್ಕೂ ಚಾರಿತ್ರ್ಯವನ್ನು ಕಳೆದುಕೊಳ್ಳುವುದು ಅಥವಾ ಅಂಥವರ ಸಂಘ ಮಾಡುವುದು ಎರಡೂ ಕ್ಷೇಮವಲ್ಲ.
ಗರುಡ ಪುರಾಣದ ಪ್ರಕಾರ ಗಂಡು ಹೆಣ್ನನ್ನು ಹೆಣ್ಣು ಗಂಡನ್ನು ಗೌರವಪೂರ್ವಕವಾಗಿ ಕಾಣಬೇಕು. ಯಾವುದೇ ಕಾರಣಕ್ಕೂ ಅನುಚಿತ ವರ್ತನೆಯನ್ನು ತೋರಿಸಬಾರದು. ಇನ್ನು ದಾಂಪತ್ಯದಲಿ ಮರ್ಯಾದೆ ಕೂಡ ಮುಖ್ಯವೆ ಅದಕ್ಖಾಗಿ ಹೆಣ್ಣು ಹೆತ್ತವರ ಮನೆಯವರಲ್ಲಿ ಹೆಚ್ಚು ಸಮಯ ಉಳಿದುಕೊಳ್ಳುವುದು ಸರಿಯಲ್ಲ. ಇದರಿಂದ ಎರಡೂ ಕುಟುಂಬಗಳಲ್ಲಿಯೂ ಸಮಸ್ಯೆ ಉದ್ಭವಿಸಬಹುದು. ಜೊತೆಗೆ ಮರ್ಯಾದಿಗೆ ಧಕ್ಕೆ ಉಂಟಾಗಬಹುದು. ಈ ಮೇಲಿನ ತಪ್ಪುಗಳನ್ನು ನೀವು ಜೀವನದಲ್ಲಿ ಮಾಡದೇ ಇದ್ದಲ್ಲಿ ದಾಂಪತ್ಯ ಅತ್ಯಂತ ಸುಗಮವಾಗಿ ಸಾಗುವುದರಲ್ಲಿ ಸಂಶಯವಿಲ್ಲ.