ಈ ಹೊಸ ಪ್ರತಿಭೆ ಮುಂದಿನ ವರ್ಷ ಹರಾಜಿನಲ್ಲಿ 14 ಕೋಟಿಗೆ ಮಾರಾಟವಾಗುತ್ತಾನೆ ಎಂದ ಸಂಜಯ್, ಆ ಯುವ ಪ್ರತಿಭೆ ಯಾರು ಗೊತ್ತೇ??
ಈ ಹೊಸ ಪ್ರತಿಭೆ ಮುಂದಿನ ವರ್ಷ ಹರಾಜಿನಲ್ಲಿ 14 ಕೋಟಿಗೆ ಮಾರಾಟವಾಗುತ್ತಾನೆ ಎಂದ ಸಂಜಯ್, ಆ ಯುವ ಪ್ರತಿಭೆ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇಂಡಿಯನ್ ಪ್ರೀಮಿಯರ್ ಲೀಗ್ ಯಾನೆ ಐಪಿಎಲ್ ಭಾರತೀಯ ಕ್ರಿಕೇಟ್ ನ ಹಬ್ಬ. ಈ ಐಪಿಎಲ್ ಒಂದಿರದೇ ಇದ್ದರೇ ಅದೆಷ್ಟೋ ಕ್ರಿಕೇಟರ್ ಗಳ ಜೀವನ ಇನ್ನು ಸಹ ಅವಕಾಶ ವಂಚಿತವಾಗಿರುತ್ತಿತ್ತು. ಹಾರ್ದಿಕ್ ಪಾಂಡ್ಯ, ಜಸಪ್ರಿತ್ ಬುಮ್ರಾ, ಮನಪ್ರೀತ್ ಗೋನಿ, ಸುದೀಪ್ ತ್ಯಾಗಿ, ಹೀಗೆ ಹಲವಾರು ಜನ ರಣಜಿ ಕ್ರಿಕೇಟ್ ನಲ್ಲಿ ಉತ್ತಮ ಸಾಧನೆ ಮಾಡದಿದ್ದರೂ, ಐಪಿಎಲ್ ಮೂಲಕ ದಿನ ಬೆಳಗಾಗುವುದರಲ್ಲಿ ಹೀರೋಗಳಾಗಿ ರಾಷ್ಟ್ರೀಯ ತಂಡದಲ್ಲಿಯೂ ಸಹ ಜಾಗ ಪಡೆದಿದ್ದಾರೆ. ಇದು ಕೇವಲ ದೇಶಿಯ ಕ್ರಿಕೇಟಿಗರಿಗೆ ಮಾತ್ರ ಸೀಮಿತವಾಗಿಲ್ಲ. ವಿದೇಶಿ ಕ್ರಿಕೇಟಿಗರಿಗೂ ಸಹ ಇದು ಭರಪೂರ ಲಾಭ ನೀಡಿದೆ. ಮೇಲಾಗಿ ಎಲ್ಲಾ ಕ್ರಿಕೇಟರ್ ಗಳಿಗೂ ಸೂಕ್ತ ಆರ್ಥಿಕ ಭದ್ರತೆಯನ್ನು ಸಹ ನೀಡುತ್ತಿದೆ.
ಇನ್ನು ಪ್ರಸಕ್ತ ಯು.ಎ.ಇ ಯಲ್ಲಿ ನಡೆಯುತ್ತಿರುವ ಐಪಿಎಲ್ ಕೊನೆಗೊಳ್ಳುವುದಕ್ಕೆ ಇನ್ನೊಂದು ವಾರವಷ್ಟೆ ಬಾಕಿ ಇದೆ. ಮುಂದಿನ ಐಪಿಎಲ್ ಸಮಯಕ್ಕೆ ಎಲ್ಲಾ ಫ್ರಾಂಚೈಸಿಗಳು ಕೇವಲ ಮೂರು ಆಟಗಾರರನ್ನಷ್ಟೇ ತಂಡದಲ್ಲಿ ಉಳಿಸಿಕೊಂಡು, ಉಳಿದ ಆಟಗಾರರನ್ನು ಸಾರ್ವತ್ರಿಕ ಹರಾಜಿಗೆ ಬಿಡಬೇಕಾಗಿದೆ. ಕಳಪೆ ಪ್ರದರ್ಶನ ನೀಡಿದ ಆಟಗಾರರು, ಅನಸೋಲ್ಡ್ ಆಗುವ ಸಾಧ್ಯತೆಯಿದ್ದರೇ, ಉತ್ತಮ ಪ್ರದರ್ಶನ ನೀಡಿರುವ ಆಟಗಾರರು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. ಈ ಬಗ್ಗೆ ಮಾತನಾಡಿರುವ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್, ಈ ಭಾರತೀಯ ಆಟಗಾರ ಮುಂದಿನ ಹರಾಜಿನಲ್ಲಿ 14 ಕೋಟಿ ರೂಪಾಯಿಗೆ ಬಿಕರಿಯಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ. ಬನ್ನಿ ಆ ಆಟಗಾರ ಯಾರು ಎಂದು ತಿಳಿಯೋಣ.
ಆ ಆಟಗಾರ ಬೇರೆ ಯಾರೂ ಅಲ್ಲ, ಸದ್ಯ ಕಳಾಹೀನವಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಜೀವಕಳೆ ತುಂಬುತ್ತಿರುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್. ಉತ್ತಮ ಆರಂಭಿಕ ಬ್ಯಾಟ್ಸಮನ್ ಹಾಗೂ ಉತ್ತಮ ಮಧ್ಯಮ ವೇಗದ ಬೌಲರ್ ಆಗಿರುವ ವೆಂಕಟೇಶ್ ಅಯ್ಯರ್ ಪೈಸಾ ವಸೂಲ್ ಕ್ರಿಕೇಟರ್ ಆಗಿದ್ದಾರೆ. ಆರಂಭಿಕ ಬ್ಯಾಟ್ಸಮನ್ ಆಗಿ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಅಯ್ಯರ್ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಬೌಲಿಂಗ್ ನಲ್ಲಿಯೂ ಸಹ ಉತ್ತಮ ಲೈನ್ ಮತ್ತು ಲೆಂಗ್ತ್ ನಲ್ಲಿ ನಿಧಾನಗತಿ ಎಸೆತವನ್ನು ಸಹ ಎಸೆಯುವ ವೆಂಕಟೇಶ್ ವಿಕೇಟ್ ಟೇಕಿಂಗ್ ಬೌಲರ್ ಆಗಿದ್ದಾರೆ. ಜೊತೆಗೆ ಫೀಲ್ಡಿಂಗ್ ನಲ್ಲಿಯೂ ಸಹ ಉತ್ತಮ ಪ್ರದರ್ಶನ ನೀಡಿರುವ ವೆಂಕಟೇಶ್ ಅಯ್ಯರ್ ಮುಂದಿನ ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳ ನೆಚ್ಚಿನ ಕ್ರಿಕೇಟರ್ ಆಗುವುದರಲ್ಲಿ ಸಂಶಯವೇ ಇಲ್ಲ. ಇವರನ್ನ ಕೊಂಡುಕೊಳ್ಳಲು ಎಲ್ಲಾ ಫ್ರಾಂಚೈಸಿಗಳು ಮುಗಿಬೀಳಲಿದ್ದು, ವೆಂಕಟೇಶ್ ಅಯ್ಯರ್ ಕನಿಷ್ಠ ಪಕ್ಷ ಹದಿನಾಲ್ಕು ಕೋಟಿ ರೂಪಾಯಿಗೆ ಬಿಕರಿಯಾಗುವ ಸಾಧ್ಯತೆಯಿದೆ ಎಂದು ಸಂಜಯ್ ಮಾಂಜ್ರೇಕರ್ ಭವಿಷ್ಯ ನುಡಿದಿದ್ದಾರೆ.
ಒಂದು ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಐಪಿಎಲ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರೇ, ವೆಂಕಟೇಶ್ ಅಯ್ಯರ್, ಸುನೀಲ್ ನರೈನ್ ಮತ್ತು ವರುಣ್ ಚಕ್ರವರ್ತಿಯವರನ್ನ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಅಭಿಪ್ರಾಯ ಸಹ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.