ಬಾಲಿವುಡ್ ಸ್ಟಾರ್ ಗಳಿಗೆ ಸೇರಿದಂತೆ ಸೆಲೆಬ್ರೆಟಿ ಗಳಿಗೆ ವಿಲ್ಲನ್ ಆಗಿರುವ ನಿಜ ಜೀವನದ ಹೀರೋ ಈ ಅಧಿಕಾರಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಿನಿ ಜಗತ್ತು ಹೇಗೆ ಬಣ್ಣ ಬಣ್ಣದ ಚಿತ್ರಗಳನ್ನು ನಮ್ಮ ಮುಂದೆ ತರುತ್ತೋ ಹಾಗೆ ಸಿನಿ ಜಗತ್ತಿನಲ್ಲಿಯೂ ಸಿನಿಮಾ ರೀತಿಯಲ್ಲಿಯೇ ಕೆಲವು ಚಟುವಟಿಕೆಗಳು ನಡೆಯುತ್ತೆ! ಸ್ಟಾರ್ ನಟ ನಟಿಯರ ಮಕ್ಕಳು ಕೂಡ ಇತ್ತೀಚಿಗೆ ಹಲವು ಪ್ರಕರಣಗಳಲ್ಲಿ ತಳುಕು ಹಾಕಿಕೊಳ್ಳುತ್ತಿದ್ದಾರೆ. ಯಾವಾಗ ಯಾರ ಮೇಲೇ ಪೋಲಿಸ್ ತನಿಖೆ ನಡೆಯುವುದೋ ಎಂದು ಕಾಯುವಂತಾಗಿದೆ.

ಇತ್ತೀಚಿಗೆ ಸುಶಾಂತ್ ರಜಪೂತ್ ಅವರ ಪ್ರಕರಣ ಸಾಕಷ್ಟು ಸುದ್ಧಿಮಾಡಿತ್ತು. ಈ ಕೇಸ್ ನ್ನೂ ಸೇರಿದಂತೆ ಇನ್ನೂ ಹಲವು ಪ್ರಕರಣಗಳನ್ನು ಕೈಗೆತ್ತಿಕೊಂಡು ಸಾಕಷ್ಟು ಹೆಸರು ಮಾಡಿದವರು ಭಾರತೀಯ ಕಂದಾಯ ಸೇವೆಯ (IRS) ಅಧಿಕಾರಿ ಸಮೀರ್‌ ವಾಂಖೇಡೆ. ಕಳೆದ 13 ವರ್ಷಗಳಲ್ಲಿ ನಾನಾ ಹುದ್ದೆಯನ್ನು ನಿರ್ವಹಿಸಿರುವ ಸಮೀರ್ ವಾಖಂಡೆ ಯಾವುದೇ ಆಮಿಷಕ್ಕೂ ಒಳಗಾದವರಲ್ಲ, ಯಾವುದೇ ಮುಲಾಜಿಗೆ ತಪ್ಪ ಮಾಡಿದವರನ್ನೂ ಸುಮ್ಮನೆ ಬಿಟ್ಟವರೂ ಅಲ್ಲ. ಸೋ ಕಾಲ್ಡ್ ಸೆಲೆಬ್ರಿಟಿ ಮಟ್ಟದ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಶಿಲಿಸುವುದರಲ್ಲಿ ಹಿಂದೇಟು ಹಾಕುವುದಿಲ್ಲ ಸಮೀರ್ ವಾಂಖೆಡೆ!

2011ರಲ್ಲಿ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದು ಸಂಭ್ರಮಿಸಿದ್ದೆವು ನಾವೆಲ್ಲಾ, ಆದರೆ ಚಿನ್ನದ ಟ್ರೋಪಿಗೆ ವಿದೇಶಿ ಸುಂಕ ಕಟ್ತದ ಕಾರಣ, ಆ ಸುಂಕವನ್ನು ಕಟ್ಟಿಸಿಕೊಂಡೇ ಏರ್ ಪೋರ್ಟ್ ನಿಂದ ಬಿಡಲಾಗಿತ್ತು. ಇನ್ನು ಬಾಲಿವುಡ್‌ನ ಹೆಸರಾಂತ ಗಾಯಕ ಮಿಖಾ ಸಿಂಗ್‌ವಿದೇಶಿ ಹಣದೊಂದಿಗೆ ಬಂದು ದೇಶದೊಳಗೆ ಪ್ರವೇಶಿಸುವುದರ ಒಳಗೆ ಕಂಬಿ ಹಿಂದೆ ಹೋಗಿದ್ದರು. ಬಾಲಿವುಡ್ ನ ಸೆಲಿಬ್ರೆಟಿ ಗಳಾದ ಅನುರಾಗ್‌ ಕಶ್ಯಪ್‌, ನಟ ವಿವೇಕ್‌ ಒಬೆರಾಯ್‌, ರಾಮ್‌ ಗೋಪಾಲ್‌ ವರ್ಮ ಅವರಿಗೆ ಸೇರಿದ ಆಸ್ತಿಗಳ ಮೇಲೆಯೂ ಸರ್ಚ್ ಮಾಡಲಾಗಿತ್ತು. ಇದ್ಯಾವ ಪ್ರಕರಣ ಕೈಗೆತ್ತಿಕೊಂಡಾಗಲೂ ಯಾರನ್ನೂ ಕ್ಯಾರೇ ಅಂದವರಲ್ಲ ಈ ಪ್ರಾಮಾಣಿಕ ಅಧಿಕಾರಿ!

ಇನ್ನು ಸಮೀರ್ ವಾಂಖೆಡೆ ನೇತೃತ್ವದ ತಂಡ ಕಳೆದ 2 ವರ್ಷಗಳಲ್ಲಿ ಸುಮಾರು ಅಂದಾಜು 17,000 ಕೋಟಿ ರು. ಮೌಲ್ಯದ ಅಕ್ರಮ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದೆ. ಕಸ್ಟಮ್‌ ಅಧಿಕಾರಿಯಾಗಿದ್ದಾಗ ಸಮೀರ್ ಅವರು ಬಾಲಿವುಡ್‌ ನಟ ನಟಿಯರು ವಿದೇಶದಿಂದ ತರುತ್ತಿದ್ದ ವಸ್ತುಗಳಿಗೆ ತೆರಿಗೆ ಕಟ್ಟುವಂತೆ ನೋಡಿಕೊಳ್ಳುತ್ತಿದ್ದರು. ಇನ್ನು ನಟ ಸುಶಾಂತ್‌ ಸಿಂಗ್‌ ರಜಪೂತ್ ಅವರ ವಿಷಯದಲ್ಲಿ ನಟಿ ರಿಯಾ ಚಕ್ರವರ್ತಿ ಬಗ್ಗೆ ತನಿಖೆ ನಡೆಸಿದ್ದು ಕೂಡ ಅಧಿಕಾರಿ ಸಮೀರ್ ವಾಂಖೆಡೆ! ಇಂಥ ಒಬ್ಬ ಅಧಿಕಾರಿ ಇದ್ದರೂ ಸಾಕು ದೇಶದಲ್ಲಿ ನಡೆಯುವ ಅದೆಷ್ಟೋ ತಪ್ಪುಗಳಿಗೆ ಕತ್ತರಿ ಬೀಳೋದು ಗ್ಯಾರಂಟಿ!

Post Author: Ravi Yadav