ವಿಚ್ಚೇದನದ ನಂತರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡ ಸಮಂತಾ, ಭೇಷ್ ಎಂದ ನೆಟ್ಟಿಗರು. ಏನು ಗೊತ್ತೇ??

ವಿಚ್ಚೇದನದ ನಂತರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡ ಸಮಂತಾ, ಭೇಷ್ ಎಂದ ನೆಟ್ಟಿಗರು. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೇಮ ವಿವಾಹ, ನಂತರ ವಿಚ್ಛೇಧನ, ಮತ್ತೆ ಇನ್ನೊಂದು ಮದುವೆ ಇಂಥ ವಿಷಯಗಳು ಸರ್ವೇ ಸಾಮಾನ್ಯ. ಆದರೆ ಯಾವುದೇ ಸ್ಟಾರ್ ನಟ ನಟಿಯರ ವಿವಾಹವಾಗಲಿ ಅಥವಾ ವಿಚ್ಚೇಧನವಾಗಲಿ ಒಟ್ಟಿನಲ್ಲಿ ಅವರ ವಯಕ್ತಿಕ ಬದುಕಿನ ವಿಷಯಗಳು ತುಂಬಾನೇ ಸದ್ದು ಮಾಡುತ್ತೆ. ಇದೀಗ ಹೀಗೆ ಟಾಲಿವುಡ್ ಸಿನಿಅಂಗಳದಲ್ಲಿ ಕೇಳಿಬರುತ್ತಿರುವ ಸುದ್ದಿ ನಾಗ ಚೈತನ್ಯ ಹಾಗೂ ಸಮಂತಾ ವಿವಾಹ ವಿಚ್ಛೇಧನ.

ಹೌದು ಸ್ನೇಹಿತರೆ ಕಳೆದ ಕೆಲವು ದಿನಗಳಿಂದ ಅಕ್ಕಿನೇನಿ ಕುಟುಂಬದಲ್ಲಿ ನಡೆಯುತ್ತಿದ್ದ ನಾಗ ಚೈತನ್ಯ ಹಾಗೂ ಸಮಂತಾ ಅವರ ವಿಚ್ಛೇಧನದ ಬಗ್ಗೆ ಸಾಕಷ್ಟು ಮಾತುಗಳು ಹರಿದಾಟುತ್ತಿದ್ದವು. ಕೊನೆಗೂ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಅಧಿಕೃತವಾಗಿ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸ್ಟಾರ್ ನಟರ ವಿಚ್ಚೇಧನ ಪ್ರಕರಣದಲ್ಲಿ ಪರಿಹಾರ ಧನ ಬಾರಿ ಸುದ್ಧಿ ಮಾಡುತ್ತದೆ ಎನ್ನಬಹುದು. ನೀವು ಬಾಲಿವುಡ್ ನಲ್ಲೇ ನೋಡಿ, ಸೈಫ್ ಅಲಿ ಖಾನ್, ಅಮೀರ್ ಖಾನ್ ನಂತಹ ನಟರು ವಿಚ್ಛೇಧನ ಪಡೆದು ಬಹಳ ದುಡ್ಡ ಮೊತ್ತದ ಪರಿಹಾರವನ್ನೇ ಸಂಗಾತಿಗೆ ನೀಡಿದ್ದರು. ಉದಾಹರಣೆಗೆ ಸೈಫ್ ಅಲಿ ಖಾನ್ ತಮ್ಮ ಮೊದಲ ಪತ್ನಿ ಅಮೃತಾ ಸಿಂಗ್‌ಗೆ ವಿಚ್ಚೇದನೆ ಕೊಟ್ಟು ಹೆಚ್ಚು ಕಡಿಮೆ ತಮ ಸೇವಿಂಗ್ಸ್ ನ ಎಲ್ಲಾ ಹಣವನ್ನೂ ಕಳೆದುಕೊಂಡಿದ್ದರಂತೆ.

ಸಮಂತಾ ಕೊನೆಗೂ ತಾನೂ ಹಾಗೂ ಚೈಯ್ ಬೇರೆಯಾಗುತ್ತಿರುವುದನ್ನು ಹೇಳಿ, ನಮ್ಮ ಖಾಸಗೀ ಜೀವನ ಮುದುವರೆಸಲು ಎಲ್ಲರೂ ಸಹಾಯ ಮಾಡಬೇಕು, ನಾವು ಸಮಾಲೋಚನೆ ನಡೆಸಿಯೇ ನಮ್ಮ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ. ಇನ್ನು ಸಮಂತಾ ನಾಗ ಚೈತನ್ಯ ಅವರಿಂದ ವಿಚ್ಚೇಧನವನ್ನು ಪಡೆದರೆ 50 ಕೋಟಿ ಹಣವನ್ನು ತೆಗೆದುಕೊಳ್ಳಬಹುದು ಎಬ ಮಾತಿತ್ತು. ಇನ್ನು ಅವರ ಮದುವೆ ಮಾತುಕತೆಗೆ ಸಂಬಂಧಿಸಿದಂತೆ 200 ಕೋಟಿ ಪರಿಹಾರ ಪಡೆಯಬಹುದಾಗಿತ್ತಂತೆ. ಆದರೆ ನಾಗ ಚೈತನ್ಯ ಅವರಿಂದ ಪ್ರೀತಿಯನ್ನು ಮಾತ್ರ ಬಯಸಿ ಸಮಂತಾ ಬಂದಿದ್ದರು ಎನ್ನುವುದಕ್ಕೆ, ಅವರು ಒಂದೇ ಒಂದು ರೂಪಾಯಿಯನ್ನೂ ಕೂಡ ಪರಿಹಾರವಾಗಿ ತೆಗೆದುಕೊಳ್ಳದಿರುವುದೇ ಸಾಕ್ಷಿ.