ವಿಚ್ಚೇದನದ ಬಳಿಕ ಸಮಂತ ಹಾಗೂ ನಾಗಚೈತನ್ಯ ವಿಚಾರದಲ್ಲಿ ಮತ್ತೊಂದು ಟ್ವಿಸ್ಟ್, ಕುಟುಂಬ ಹಾಗೂ ಫ್ಯಾನ್ಸ್ ಗೆ ಮತ್ತೊಂದು ಸಿಹಿ ಸುದ್ದಿ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಎಲ್ಲರ ನಿದ್ದೆಗೆಡಿಸಿರುವ ಹಾಗೂ ಎಲ್ಲರನ್ನೂ ಬೇಸರಕ್ಕೆ ತಳ್ಳಿ ಇರುವಂತಹ ಸುದ್ದಿಯೆಂದರೆ ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನ ಸುದ್ದಿ. ಹೌದು ಸ್ನೇಹಿತರೆ ಸಿನಿಮಾ ಪ್ರೇಮಿಗಳ ಮೆಚ್ಚಿನ ನಿಜಜೀವನದ ಜೋಡಿಯಾಗಿದ್ದ ನಾಗಚೈತನ್ಯ ಹಾಗೂ ಸಮಂತ ಈಗ ಬೇರೆ ಯಾಗುತ್ತಿರುವುದು ಅಭಿಮಾನಿಗಳ ಮನಸ್ಸಿಗೆ ಸಾಕಷ್ಟು ಬೇಸರವನ್ನುಂಟು ಮಾಡಿದೆ.

ಹೌದು ಸ್ನೇಹಿತರೇ ಮೊದಲಿಗೆ ನಾಗಚೈತನ್ಯ ಹಾಗೂ ಸಮಂತ ಇಬ್ಬರೂ ಕೂಡ ಮಗುವನ್ನು ಹೊಂದಲಿದ್ದಾರೆ ಇದಕ್ಕಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವುದನ್ನು ನಿಲ್ಲಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಹೌದು ಸ್ನೇಹಿತರೆ ಇಬ್ಬರು ಕೂಡ ಹತ್ತು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ನಾಲ್ಕು ವರ್ಷಗಳ ಹಿಂದಷ್ಟೇ ಕ್ರೈಸ್ತ ಹಾಗೂ ಹಿಂದೂ ಧರ್ಮದ ಪ್ರಕಾರವಾಗಿ ಅದ್ದೂರಿಯಾಗಿ ಮದುವೆಯಾಗಿದ್ದರು. ಇವರ ಮದುವೆಯನ್ನು ಇಡೀ ಬಾರತೀಯ ಚಿತ್ರರಂಗವೇ ಕಣ್ತುಂಬಿಕೊಂಡು ಮೆಚ್ಚಿತ್ತು ಎಂದು ಹೇಳಲಾಗುತ್ತದೆ.

ಇನ್ನು ಹಲವಾರು ಸಮಯಗಳಿಂದ ಇವರಿಬ್ಬರ ವಿವಾಹ ವಿಚ್ಛೇದನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ ಇಬ್ಬರು ಕೂಡ ಇವರಿಬ್ಬರೂ ಬೇರೆ ಆಗುತ್ತಿರುವುದನ್ನು ಎಲ್ಲಿಯೂ ಕೂಡ ಒಪ್ಪಿಕೊಂಡಿರಲಿಲ್ಲ. ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ನಾವಿಬ್ಬರೂ ಬೇರೆ ಆಗುತ್ತಿದ್ದೇವೆ ಎಂಬುದಾಗಿ ಒಪ್ಪಿಕೊಂಡಿದ್ದರು. ಇನ್ನು ಅಭಿಮಾನಿಗಳ ಪ್ರತಿಕ್ರಿಯೆ ನೋಡಿ ಇದೀಗ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಬಂದಿರುವ ಲೇಖನಿಯ ಪ್ರಕಾರ ನಾಗಚೈತನ್ಯ ಹಾಗೂ ಸಮಂತ ತಮ್ಮ ಸಂಬಂಧಕ್ಕೆ ಇನ್ನೊಂದು ಚಾನ್ಸ್ ನೀಡುವ ಸಾಧ್ಯತೆ ಇದೆ ಎಂಬುದಾಗಿ ಬರೆದಿತ್ತು. ಈ ಕುರಿತು ಮರು ಆಲೋಚನೆ ಮಾಡಲು ಮತ್ತೊಮ್ಮೆ ಜೋಡಿ ನಿರ್ಧಾರ ಮಾಡಿದೆ ಎಂಬುದು ತಿಳಿದು ಬಂದಿದೆ. ಇನ್ನು ಇದು ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

Post Author: Ravi Yadav