ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪ್ರತಿಯೊಬ್ಬರೂ ಕೂಡ ರಾಮಾಯಣ ಓದಲೇಬೇಕು, ಅದರಲ್ಲಿಯೂ ಪೋಷಕರು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ತಿಳಿಸಬೇಕು. ಯಾಕೆ ಗೊತ್ತೇ??

75

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಹಿಂದೂ ಸಂಸ್ಕೃತಿಯಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಮಹಾನ್ ಗ್ರಂಥಗಳು ಎಂದು ಕರೆಸಿಕೊಳ್ಳುತ್ತವೆ. ಈ ಗ್ರಂಥಗಳ, ರಾಮಾಯಣ ಮಹಾಭಾರತ ಕಥೆಗಳನ್ನು ಭೋದಿಸುತ್ತಾ ಅದರಲ್ಲಿರುವ ನೀತಿಗಳನ್ನು ಇತರರಿಗೆ ತಿಳಿಯಪಡಿಸಿದರೆ ತಮ್ಮ ಜ್ಞಾನ ವರ್ಧನೆಯ ಜೊತೆಗೆ ಇತರರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಬಹುದು.

ಇಂದು ರಾಮಾಯಣದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ. ರಾಮಾಯಣ ವನ್ನು ಒಂದು ರೀತಿಯಲ್ಲಿ, ಶಿಸ್ತು, ಸಂಯಮಗಳನ್ನು ತಿಳಿಸುವ ಗುರು ಎಂದೇ ಹೇಳಬಹುದು. ರಾಮಾಯಣದ ಪ್ರತಿ ಪಾತ್ರಗಳು, ಪ್ರತಿ ಕಥೆಗಳು ಒಂದೊಂದು ನೀತಿ ಪಾಠಗಳನ್ನು ಒಳಗೊಂಡಿದೆ. ಮಕ್ಕಳಿಗಂತೂ ಆರಂಭದಿಂದ ರಾಮಾಯಣವನ್ನು ಕಲಿಸುತ್ತಾ ಬಂದರೆ ಅವರು ಸನ್ಮಾರ್ಗದಲ್ಲಿ ನಡೆಯುವುದು, ಸನ್ನಡತೆಯನ್ನು ಕಲಿತುಕೊಳ್ಳುವುದರಲ್ಲಿ ಎರಡು ಮಾತಿಲ್ಲ!

ರಾಮಾಯಣ ತಾಳ್ಮೆಯನ್ನು ಕಲಿಸುತ್ತದೆ. ಹೌದು ಶ್ರೀಮನ್ ನಾರಾಯಣನ ಒಂದು ಅವತಾರ ಶ್ರೀ ರಾಮ. ರಾಮಾಣಯದಲ್ಲಿ ಉಲ್ಲೇಖಿತವಾಗಿರುವ ಶ್ರೀ ರಾಮನ ತಾಳ್ಮೆ ರಾಮಾಯಣ ಓದಿ ಮುಗಿಸುವಷ್ಟರಲ್ಲಿ ನಿಮಗೂ ಬರುವುದರಲ್ಲಿ ಆಶ್ಚರ್ಯವಿಲ್ಲ. ರಾಮಾಯಣದ ಪ್ರಕಾರ ನೀವು ತಾಳ್ಮೆಯಿಂದ ಇದ್ದರೆ ಎಂಥ ಸಮಸ್ಯೆಗಳನ್ನಾದರೂ ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಸಹನೆ, ಸಂಯಮಗಳು ನಿಮ್ಮ ಗೌರವವನ್ನು ಹೆಚ್ಚಿಸುತ್ತವೆ.

ರಾಮಾಯಣದ ಕಥೆಗಳು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತವೆ. ರಾಮಾಯಣದ ಪ್ರಕಾರ ಪ್ರತಿ ವ್ಯಕ್ತಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು, ಆ ಮೂಲಕ ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕು. ನಾವು ನಾವು ನಮ್ಮನ್ನು ಗೌರವಿಸಲು ಕಲಿತರೆ ಇನ್ನೊಬ್ಬರನ್ನೂ ಗೌರವಿಸ್ತೇವೆ. ಗಾಂಭೀರ್ಯತೆಯನ್ನು ಮೈಗೂಡಿಸಿಕೊಳ್ಳಬೇಕು. ಇದು ನಿಮಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಮಾಡುತ್ತದೆ. ರಾಮಾಯಣ ಹೇಳುವಂತೆ, ಭಯವು ನಮಗೆ ಯಶಸ್ಸನ್ನು ನೀಡಲು ಸಾಧ್ಯವೇ ಇಲ್ಲ. ನಿಮ್ಮಲ್ಲಿ ಭಯ ಮನೆಮಾಡಿದ್ದು ಯಾವುದೇ ಕೆಲಸ ಮಾಡಲು ಹಿಂದೇಟು ಹಾಕಿದರೆ ಯಾವ ಸಾಧನೆಯನ್ನೂ ಮಾಡಲು ಸಾಧ್ಯವೇ ಇಲ್ಲ. ರಾವಣನಿಗೆ ಹೆದರಿ ರಾಮ ಕುಳಿತಿದ್ದರೆ ಸೀತೆಯನ್ನು ಹಿಂತಿರುಗಿ ಕರೆತರಲು ಸಾಧ್ಯವಿತ್ತೇ?!

ತಂದೆ ತಾಯಿಯ ಮಾತನ್ನು ಮಕ್ಕಳು ಯಾವತ್ತೂ ಕೇಳಬೇಕು. ಅದನ್ನ ಆರಂಭದಿಂದಲೇ ಕಲಿಸಬೇಕು ಎನ್ನುತ್ತೇ ರಾಮಾಯಣ. ಶ್ರೀ ರಾಮ ತಂದೆ ತಾಯಿಯ ಮಾತನ್ನು ಗೌರವಿಸಿ ರಾಜ್ಯ ತ್ಯಾಗ ಮಾಡಿ ಕಾಡಿಗೆ ಹೋಗುತ್ತಾನೆ. ಆದರೂ ಕೊನೆಯಲ್ಲಿ ರಾಮನಿಗೆ ಯಶಸ್ಸು ಸಿಗುತ್ತದೆ. ಅಂದರೆ ಎಂಥದ್ದೇ ಸಂದರ್ಭವಿರಲಿ ಪಾಲಕರ ಆಶೀರ್ವಾದ ಮಕ್ಕಳ ಮೇಲಿದ್ದೇ ಇರುತ್ತದೆ. ಹಾಗಾಗಿ ತಂದೆ ತಾಯಿಯನ್ನ ಚಿಕ್ಕಂದ್ನಿಂದಲೇ ಗೌರವಿಸಿದ ಮಕ್ಕಳು ದೊಡ್ಡವರಾದ ಮೇಲೂ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹೀಗೆ ಹತ್ತು ಹಲವು ಪಾಠಗಳನ್ನು ಕಲಿಸುತ್ತೆ ರಾಮಾಯಣ. ಹಾಗಾಗಿ ಇದನ್ನು ಮಕ್ಕಳಿಗೆ ಪಾಲಕರು ಅಥವಾ ಅರಿಯದವರಿಗೆ ಅರಿತವರು ಭೋದಿಸಿದರೆ ಜೀವನದ ಮೌಲ್ಯಗಳನ್ನು ಕಂಡುಕೊಳ್ಳಲು ಸಾಧ್ಯ.

Get real time updates directly on you device, subscribe now.