ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಫಾರ್ಮ್ ಕಳೆದುಕೊಂಡಿರುವ ಭುವಿ ಬದಲು ಭಾರತದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲಿರುವ ವೇಗದ ಬೌಲರ್ ಯಾರು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತ ತಂಡ ಟಿ 20 ವಿಶ್ವ ಕಪ್ ಗೆ ಈ ಮೊದಲೇ ತಂಡವನ್ನು ಪ್ರಕಟಿಸಿದ್ದರೂ ಆ ಹದಿನೈದು ಜನ ಆಟಗಾರರಲ್ಲಿ ಹಲವಾರು ಜನ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಯು.ಎ.ಇ ಯಲ್ಲಿ ನಡೆಯುತ್ತಿರುವ ಐಪಿಎಲ್ ನ ಮುಂದುವರಿದ ಚರಣದಲ್ಲಿ ಎಲ್ಲರೂ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದಾರೆ. ಬ್ಯಾಟ್ಸಮನ್ ಗಳಾದ ಸೂರ್ಯ ಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಫಾರ್ಮ್ ಕಳೆದುಕೊಂಡಿದ್ದರೇ, ಇನ್ನು ಬೌಲರ್ ಗಳಾದ ಭುವನೇಶ್ವರ್ ಕುಮಾರ್ ಸಹ ಈಗ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಿಮ ತಂಡವನ್ನು ಪ್ರಕಟಿಸಲು ಅಕ್ಟೋಬರ್ 10 ರ ತನಕ ಕಾಲಾವಕಾಶ ಇರುವುದರಿಂದ ತಂಡದಲ್ಲಿ ಬದಲಾವಣೆ ಕಾಣಿಸಬಹುದು. ಸದ್ಯ ಭುವನೇಶ್ವರ್ ಕುಮಾರ್ ಬದಲು ಸ್ಥಾನ ಪಡೆಯುವ ಭಾರತ ತಂಡದ ಮೂವರು ಆಟಗಾರರ ಯಾರು ಎಂಬುದನ್ನ ತಿಳಿಯೋಣ ಬನ್ನಿ.

1.ಹರ್ಷಲ್ ಪಟೇಲ್ – ಸದ್ಯ ಐಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿರುವ ಹರ್ಷಲ್ ಪಟೇಲ್ ಗೆ ತಂಡದಲ್ಲಿ ಈ ಮೊದಲೇ ಸ್ಥಾನ ದೊರೆಯಬೇಕಿತ್ತು. ಆದರೇ ಸ್ಥಾನ ದೊರೆತಿರಲಿಲ್ಲ. ಈಗ ಯು.ಎ.ಇ ಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಹರ್ಷಲ್ ವಿಕೇಟ್ ಟೇಕಿಂಗ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇವರು ಭುವನೇಶ್ವರ್ ಬದಲು ಸ್ಥಾನ ಪಡೆಯುವ ಸಾಧ್ಯತೆ ಇದೆ.

2.ಆವೇಶ್ ಖಾನ್ – ಸದ್ಯ ಪರ್ಪಲ್ ಕ್ಯಾಪ್ ಲೀಸ್ಟ್ ನಲ್ಲಿ ಏರಡನೇ ಸ್ಥಾನ ಪಡೆದಿರುವ ಆವೇಶ್ ಖಾನ್ , ಯು.ಎ.ಇ,ದುಬೈ,ಅಬುಧಾಬಿ ಪಿಚ್ ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಹಾಗಾಗಿ ಭುವಿ ಬದಲು ಸ್ಥಾನ ಪಡೆಯುವ ರೇಸ್ ನಲ್ಲಿ ಇವರು ಸಹ ಇದ್ದಾರೆ.

3.ಮಹಮದ್ ಸಿರಾಜ್ – ಆರ್ಸಿಬಿ ತಂಡದ ವೇಗದ ಬೌಲರ್ ಸಿರಾಜ್ ರೆಡ್ ಬಾಲ್ ಕ್ರಿಕೇಟ್ ಮಾತ್ರವಲ್ಲದೇ , ವೈಟ್ ಬಾಲ್ ನಲ್ಲಿಯೂ ತಾವೊಬ್ಬ ಉತ್ತಮ ಬೌಲರ್ ಎಂದು ಸಾಬೀತುಪಡಿಸಿದ್ದಾರೆ. ಹೆಚ್ಚು ವಿಕೇಟ್ ಪಡೆಯದಿದ್ದರೂ, ತಮ್ಮ ಲೈನ್ ಮತ್ತು ಲೆಂಗ್ತ್ ಗಳಿಂದ ಬ್ಯಾಟ್ಸಮನ್ ಗಳನ್ನು ಕಾಡಿದ್ದಾರೆ. ಹೀಗಾಗಿ ಅನುಭವಿ ಬೌಲರ್ ಆಗಿರುವ ಮಹಮದ್ ಸಿರಾಜ್ ರವರಿಗೆ ಭುವನೇಶ್ವರ್ ಕುಮಾರ್ ರವರ ಬದಲು ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.