ಸೀರೆ ಉಟ್ಟ ನಾರಿಯನ್ನು ಒಳಗಡೆ ಬಿಡದೆ ಹೊರಗಡೆ ಕಳುಹಿಸಿದ್ದ ದೆಹಲಿಯ ರೆಸ್ಟೋರೆಂಟ್ ಕಥೆ ಇದೀಗ ಏನಾಗಿದೆ ಗೊತ್ತಾ??

ಸೀರೆ ಉಟ್ಟ ನಾರಿಯನ್ನು ಒಳಗಡೆ ಬಿಡದೆ ಹೊರಗಡೆ ಕಳುಹಿಸಿದ್ದ ದೆಹಲಿಯ ರೆಸ್ಟೋರೆಂಟ್ ಕಥೆ ಇದೀಗ ಏನಾಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಗೌರವವೇ ಸೀರೆ. ಸೀರೆಯುಟ್ಟು ಮಹಿಳೆ ಯಾವ ಸ್ಥಳಕ್ಕೂ ಪ್ರವೇಶ ಮಾಡಬಹುದು. ನಮ್ಮ ದೇಶದ ಸಂಸ್ಕೃತಿಯನ್ನು ಭಿತ್ತರಿಸುವಂಥ ಸೀರೆಯನ್ನು ಉಟ್ಟು ಬಂದರೆ ನಮ್ಮ ರೆಸ್ಟೋರೆಂಟ್ ಗೆ ಪ್ರವೇಶವಿಲ್ಲ ಎಂದ ರೆಸ್ಟೋರೆಂಟ್ ಇಂದು ಸಂಪೂರ್ಣವಾಗಿ ಮುಚ್ಚಿದೆ. ಏನಿದು ಸುದ್ದಿ ? ಇಲ್ಲಿದೆ ಸಂಪೂರ್ಣ ಮಾಹಿತಿ.

ದೆಹಲಿಯ ಅಕ್ವಿಲಾ ರೆಸ್ಟೋರೆಂಟ್ ನಲ್ಲಿ ಸೀರೆಯುತ್ತು ಮಹಿಳೆಯೊಬ್ಬಳು ಪ್ರವೇಶಕ್ಕೆ ಅನುವಾದಾಗ ಅಲ್ಲಿನ ಸಿಬ್ಬಂದಿ ಆಕೆಯನ್ನು ಒಳಗೆ ಪ್ರವೇಶಿಸಲು ಬಿಟ್ಟಿಲ್ಲ. ಕಾರಣ ಕೇಳಿದ್ರೆ ಸೀರೆ ಉಟ್ಟು ಬಂದಿದ್ದು ಎಂದು ಹೇಳಿದ್ದಾರೆ. ಅಕ್ವಿಲಾ ರೆಸ್ಟೋರೆಂಟ್ ಸಿಬ್ಬಂದಿಗೂ ಮಹಿಳೆಗೂ ಮಧ್ಯೆ ನಡೆದ ಮಾತುಕತೆಯ ವಿಡಿಯೋ ತುಂಬಾನೆ ವೈರಲ್ ಆಗಿದೆ. ಈ ಕಾರಣಕ್ಕೆ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಕ್ರಮ ತೆಗೆದುಕೊಂಡಿದೆ. ಅನ್ಸಲ್ ಪ್ಲಾಜಾದಲ್ಲಿರುವ ಅಕ್ವಿಲಾ ರೆಸ್ಟೋರೆಂಟ್ ಅನ್ನು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಮುಚ್ಚುವ ಸೂಚನೆ ನೀಡಿದ್ದು 48 ಗಂಟೆಗಳ ಕಾಲಾವಕಾಶ ನೀಡಿತ್ತು.

ಇನ್ನು ಈ ರೆಸ್ಟೋರೆಂಟ್ ಮುಚ್ಚಲು ನೋಟಿಸ್ ನೀಡಿದ್ದು ಈ ನೋಟಿಸ್ ನಲ್ಲಿ ಇತ್ತೀಚಿನ ಘಟನೆಯನ್ನು ಉಲ್ಲೇಖಿಸಿಲ್ಲ. ಅದರ ಬದಲು ಪೌರ ಸಂಸ್ಥೆ, ಅಕ್ವಿಲಾ ರೆಸ್ಟೋರೆಂಟ್ ಆರೋಗ್ಯ ವ್ಯಾಪಾರದ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದೆ ಈ ಸಂಬಂಧ ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ನೀಡಿ ರೆಸ್ಟೋರೆಂಟ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕ ಆರೋಗ್ಯ ತಪಾಸಣಾ ಅಧಿಕಾರಿಗಳು ಈ ರೆಸ್ಟೋರೆಂಟ್ ಆರೋಗ್ಯ ಪರವಾನಿಗೆ ಪಡೆದಿಲ್ಲ ಹಾಗೂ ನೈರ್ಮಲೀಕರಣದ ಕೊರತೆಯನ್ನು ಕಂಡುಹಿಡಿದಿದ್ದು ರೆಸ್ಟೋರೆಂಟ್ ಮುಚ್ಚಿಸಲು ಮುಖ್ಯ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯ ನಿರೀಕ್ಷಕರು ಸೆಪ್ಟೆಂಬರ್ 24 ರಂದು ಮತ್ತೊಮ್ಮೆ ಸ್ಥಳವನ್ನು ಪರಿಶೀಲಿಸಿ ಅದೇ ಸ್ಥಿತಿಯಲ್ಲಿ ವ್ಯಾಪಾರ ನಡೆಯುತ್ತಿರುವುದನ್ನು ಕಂಡು, ರೆಸ್ಟೋರೆಂಟ್ ಮುಚ್ಚಲು 48 ಗಂಟೆಗಳ ಗಡುವು ನೀಡಿದ್ದರು.