ಅತಿ ಹೆಚ್ಚು ಸಂಭಾವನೆ ಪಡೆಯಲಿರುವ ಟಾಪ್ -8 ಕ್ರಿಕೇಟ್ ಕೋಚ್ ಗಳು ಯಾರು ಗೊತ್ತೇ?? ರವಿ ಶಾಸ್ತ್ರಿರವರಿಗೆ ಎಷ್ಟನೇ ಸ್ಥಾನ ಗೊತ್ತಾ??
ನಮಸ್ಕಾರ ಸ್ನೇಹಿತರೇ ಗುರು ಎಂದರೇ ಸಮಾಜದಲ್ಲಿ ಅದಕ್ಕೊಂದು ಗೌರವ ಜಾಸ್ತಿ. ಎಲ್ಲಾ ರಂಗದಲ್ಲಿಯೂ ಗುರುಗಳಿಗೆ ವಿಶೇಷವಾದ ಸ್ಥಾನಮಾನ ಇದ್ದೇ ಇರುತ್ತದೆ.ಅಂತಹದರಲ್ಲಿ ಕ್ರಿಕೇಟ್ ನಲ್ಲಿಯೂ ಸಹ ಕೋಚ್ ಹುದ್ದೆಗಳಿಗೆ ವಿಶೇಷವಾದ ಗೌರವ ಇರುತ್ತದೆ. ಕೇವಲ ಗೌರವ ಮಾತ್ರವಲ್ಲದೇ ಉತ್ತಮ ಸಂಭಾವನೆ ಸಹ ಸಿಗುತ್ತದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ -8 ಕೋಚ್ ಗಳು ಯಾರು ಎಂಬುದನ್ನ ತಿಳಿಯೋಣ ಬನ್ನಿ.
ಟಾಪ್ 8 – ಫಿಲ್ ಸಿಮನ್ಸ್ – ವೆಸ್ಟ್ ಇಂಡೀಸ್ ತಂಡದ ಕೋಚ್ ಸಿಮನ್ಸ್ 8 ನೇ ಸ್ಥಾನದಲ್ಲಿದ್ದಾರೆ. ಇವರು ವಾರ್ಷಿಕವಾಗಿ 64.ಲಕ್ಷ ರೂಪಾಯಿಯನ್ನ ಸಂಭಾವನೆಯಾಗಿ ಪಡೆಯುತ್ತಾರೆ.
ಟಾಪ್ 7 – ಮಾರ್ಕ್ ಬೌಷರ್ – ದಕ್ಷಿಣ ಆಫ್ರಿಕಾದ ಮಾಜಿ ವಿಕೇಟ್ ಕೀಪರ್ ಮಾರ್ಕ್ ಬೌಷರ್ ಸದ್ಯ ದಕ್ಷಿಣ ಆಫ್ರಿಕಾ ತಂಡದ ಕೋಚ್ ಆಗಿದ್ದಾರೆ. ಇವರು ವಾರ್ಷಿಕವಾಗಿ 1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
ಟಾಪ್ 6 – ರಸೆಲ್ ಡೋಮಿಂಗೋ – ಸದ್ಯ ವಿಶ್ವದ ಡಾರ್ಕ್ ಹಾರ್ಸ್ ತಂಡ ಎಂದು ಕರೆಸಿಕೊಳ್ಳುತ್ತಿರುವ ತಂಡವೆಂದರೆ ಬಾಂಗ್ಲಾ ದೇಶ. ಅದರ ಕೋಚ್ ಆಗಿರುವ ರಸೆಲ್ ಡೋಮಿಂಗೋ ಈಗ ಬಾಂಗ್ಲಾದೇಶದ ಕೋಚ್ ಆಗಿದ್ದಾರೆ. ಇವರು ವಾರ್ಷಿಕವಾಗಿ 1.29 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.
ಟಾಪ್ 5 – ಗ್ಯಾರಿ ಸ್ವೀಡ್ : ಸದ್ಯ ವಿಶ್ವ ಚಾಂಪಿಯನ್ ತಂಡ ಆಗಿರುವ ನ್ಯೂಜಿಲೆಂಡ್ ನ ಕೋಚ್ ಆಗಿರುವವರು ಗ್ಯಾರಿ ಸ್ವೀಡ್. ಇವರು ವಾರ್ಷಿಕ 1.73 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ.
ಟಾಪ್ 4 : ಮಿಕಿ ಅರ್ಥರ್ – ಹೊಸ ಹಾದಿಯಲ್ಲಿ ಪಳಗುತ್ತಿರುವ ಶ್ರೀಲಂಕಾ ತಂಡಕ್ಕೆ ಅದ್ಭುತ ಕೋಚಿಂಗ್ ನೀಡುತ್ತಿರುವ ವ್ಯಕ್ತಿಯ ಹೆಸರು ಮಿಕಿ ಅರ್ಥರ್. ಈ ಹಿಂದೆ ಇವರು ಪಾಕಿಸ್ತಾನ ತಂಡದ ಕೋಚ್ ಆಗಿದ್ದರು. ಇವರು ವಾರ್ಷಿಕವಾಗಿ 3.4.ಕೋಟಿ ಸಂಭಾವನೆ ಪಡೆಯಲಿದ್ದಾರೆ.
ಟಾಪ್ 3 : ಕ್ರಿಸ್ ಸಿಲ್ವರ್ ವುಡ್ – ಸದ್ಯ ಜಗತ್ತಿನ ಅತ್ಯುತ್ತಮ ತಂಡ ಎಂದು ಕರೆಸಿಕೊಂಡಿರುವ ಇಂಗ್ಲೆಂಡ್ ತಂಡದ ಕೋಚ್ ಆಗಿರುವ ಸಿಲ್ವರ್ ವುಡ್, ಇಂಗ್ಲೆಂಡ್ ತಂಡ ಚಾಂಪಿಯನ್ ಆಗಲು ಕಾರಣರಾಗಿದ್ದರು. ಇವರು ವಾರ್ಷಿಕ 4.65 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ.
ಟಾಪ್ 2 : ಜಸ್ಟೀನ್ ಲ್ಯಾಂಗರ್ – ವಿಶ್ವ ಶ್ರೇಷ್ಠ ಬ್ಯಾಟ್ಸಮನ್ ಆಗಿದ್ದ ಜಸ್ಟೀನ್ ಲ್ಯಾಂಗರ್ ಸದ್ಯ ಆಸ್ಟ್ರೇಲಿಯಾ ತಂಡದ ಕೋಚ್ ಆಗಿದ್ದಾರೆ. ಇವರು ವಾರ್ಷಿಕವಾಗಿ 4.67 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಟಾಪ್ 1 : ರವಿ ಶಾಸ್ತ್ರಿ – ಟೀಮ್ ಇಂಡಿಯಾದ ಕೋಚ್ ಆಗಿರುವವರು ಭಾರತ ತಂಡದ ಮಾಜಿ ಆಟಗಾರ. ವಿಶ್ವದ ಹೆಚ್ಚು ಸಂಭಾವನೆ ಪಡೆಯಲಿರುವವರ ಪೈಕಿ ಇವರು ಮೊದಲಿಗರಾಗಿರುತ್ತಾರೆ. ಇವರು ವಾರ್ಷಿಕವಾಗಿ ಹತ್ತು ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ.