ಕೊನೆಗೂ ಸಿಕ್ತು ಸಮಂತಾ- ನಾಗ ಚೈತನ್ಯ ಕುರಿತಾದ ರೂಮರ್ಸ್ ಗೆ ಉತ್ತರ; ಸಂದರ್ಶನದಲ್ಲಿ ಮಾತನಾಡಿದ ಸಮಂತಾ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಚಿತ್ರರಂಗ ಎಂದಮೇಲೆ ಅಲ್ಲಿ ರೂಮರ್ಸ್, ಗಾಸಿಪ್ ಗಳು, ನಟ ನಟಿಯರ ವಯಕ್ತಿಕ ಜೀವನದ ಬಗ್ಗೆ ಮಾತುಗಳು ಕೇಳಿಬರುವುದು ಸರ್ವೇ ಸಾಮಾನ್ಯ. ಕನ್ನಡ ಚಿತ್ರರಂಗ ಮಾತರ್ವಲ್ಲದೇ ತಮಿಳು ತೆಲುಗು ಮಲಯಾಳಂ ಎಲ್ಲಾ ಸಿನಿ ರಸಿಕರಿಗೆ ಸಿನಿಮಾ ಜೊತೆ ಇಂಥ ವಿಷಯಗಳೂ ಆಗಾಗ ಕಿವಿಗೆ ಬೀಳ್ತಾನೆ ಇರತ್ತೆ. ಇತ್ತೀಚಿಗೆ ಸಮಂತಾ ಹಾಗೂ ನಾಗ ಚೈತನ್ಯ ಅವರ ವಯಕ್ತಿಕ ವಿಚಾರವೊಂದರ ಬಗ್ಗೆ ತೆಲಗು ಸಿನಿಮಾ ಜಗತ್ತಿನಲ್ಲಿ ಹರಿದಾಡುತ್ತಿರುವ ಸುದ್ದಿ ಅಷ್ಟಿಷ್ಟಲ್ಲ.

ಹೌದು ಸ್ನೇಹಿತರೆ, ತೆಲಗು ತಮಿಳು ಹಿಂದಿ ಮೊದಲಾದ ಭಾಷೆಗಳಲ್ಲಿ ಅಭಿನಯಿಸುತ್ತಿರುವ ನಟಿ ಸಮಂತಾ ತೆಲುಗು ಸೂಪರ್ ಸ್ಟಾರ್, ಅಕ್ಕಿನೇನಿ ಕುಟುಂಬದ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದು 2017, ಅಕ್ಟೋಬರ್ 7ರಂದು ಗೋವಾದಲ್ಲಿ. ಇನ್ನು ಇವರಿಬ್ಬರ ನಡುವೆ ಈಗಾಗಲೇ ವೈಮನಸ್ಸು ಶುರುವಾಗಿದ್ದು, ಇವರಿಬ್ಬರ ವಿಚ್ಛೇಧನ ಗ್ಯಾರಂಟಿ ಎಂಬ ಮಾತು ಸಾಕಷ್ಟು ಸುದ್ಧಿ ಮಾಡಿದೆ. ಅದರಲ್ಲೂ ಅಕ್ಟೋಬರ್ 7ರಂದು ಸಮಂತಾ ಹಾಗೂ ನಾಗ ಚೈತನ್ಯ ಅವರ ವಿವಾಹ ವಾರ್ಷಿಕೋತ್ಸವದ ದಿನವೇ ವಿಚ್ಛೇಧನವಾಗುತ್ತಾ ಎನ್ನುವುದೇ ಎಲ್ಲರ ಡೌಟ್!

ಇನ್ನು ಸಂದರ್ಶನವೊಂದರಲ್ಲಿ ಸಮಂತಾ ಅವರನ್ನು ನೀವು ಮುಂಬೈಗೆ ಹೋಗಿ ಸೆಟಲ್ ಆಗಿದ್ದೀರಂತೆ ಹೌದಾ ಎಂದು ಹೇಳಿದ್ದಕ್ಕೆ, ಈ ಮಾತನ್ನು ತಳ್ಳಿ ಹಾಕಿದ್ದಾರೆ ಸಮಂತಾ, ಹೈದ್ರಾಬಾದ್ ನನ್ನ ಮನೆ, ಇಲ್ಲಿ ನನಗೆಲ್ಲವು ಸಿಕ್ಕಿದೆ, ನಾನು ಹೈದ್ರಾಬಾದ್ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ನಾಗ ಚೈತನ್ಯ ಬಗ್ಗೆ ಚಕಾರವನ್ನೂ ಎತ್ತದ ಸಮಂತಾ ಅವರಿಬ್ಬರ ಬಗೆಗಿನ ವಿಷಯವನ್ನು ಹಾಗೆಯೇ ಉಳಿಸಿದ್ದಾರೆ!

Post Author: Ravi Yadav