ಫಾರ್ಮ್ ನಲ್ಲಿ ಇಲ್ಲದ ಇಶಾನ್, ಸೂರ್ಯ ಬದಲು ಟಿ 20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯಲಿರುವ ಮೂವರು ಆಟಗಾರರು ಯಾರ್ಯಾರು ಗೊತ್ತೇ??
ಫಾರ್ಮ್ ನಲ್ಲಿ ಇಲ್ಲದ ಇಶಾನ್, ಸೂರ್ಯ ಬದಲು ಟಿ 20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯಲಿರುವ ಮೂವರು ಆಟಗಾರರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಹು ನೀರಿಕ್ಷಿತ ಟಿ 20 ವಿಶ್ವಕಪ್ ಅಕ್ಟೋಬರ್ 24 ರಿಂದ ಆರಂಭವಾಗಲಿದೆ. ಭಾರತ ಈಗಾಗಲೇ ಹದಿನೈದು ಸದಸ್ಯರು ಹಾಗೂ ಮೂವರು ಮೀಸಲು ಆಟಗಾರರ ತಂಡವನ್ನ ಘೋಷಿಸಿತ್ತು. ಆದರೇ ಪ್ರಸಕ್ತ ಐಪಿಎಲ್ ನಡೆಯುತ್ತಿರುವ ಜಾಗದಲ್ಲೇ ಟಿ 20 ವಿಶ್ವಕಪ್ ಸಹ ನಡೆಯಲಿದೆ. ಆದರೇ ಐಪಿಎಲ್ ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾದ ಇಬ್ಬರು ಮುಂಬೈ ಆಟಗಾರರ ಸದ್ಯದ ಫಾರ್ಮ್ ಮಾತ್ರ ಭಾರತ ತಂಡಕ್ಕೆ ತೀವ್ರ ಕಳವಳವನ್ನು ಉಂಟು ಮಾಡಿದೆ.
ಇನ್ನೇನು ಹದಿನೈದು ದಿನ ಬಾಕಿ ಇರುವಾಗ ಭಾರತ ತಂಡಕ್ಕೆ ಆಯ್ಕೆಯಾಗಿರುವ ಬ್ಯಾಟ್ಸಮನ್ ಗಳಾದ ಸೂರ್ಯ ಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಮಾತ್ರ ಅತ್ಯಂತ ಕಳಪೆಯಾಗಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲಿ ಎರಡಂಕಿಯನ್ನು ಮುಟ್ಟಲು ಸಹ ತಿಣುಕಾಡುತ್ತಿದ್ದಾರೆ. ಸದ್ಯ ಎಲ್ಲಾ ತಂಡಗಳಿಗೆ ಆಯ್ಕೆಯಾದ ತಂಡದಲ್ಲಿ ಬದಲಾವಣೆ ಮಾಡಲು ಐಸಿಸಿ ಅಕ್ಟೋಬರ್ ಹತ್ತರವರೆಗೆ ಕಾಲಾವಕಾಶ ನೀಡಿದೆ. ಹಾಗಾಗಿ ತಂಡದಲ್ಲಿ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಯಿದೆ. ಬನ್ನಿ ತಂಡಕ್ಕೆ ಸೇರಿಕೊಳ್ಳುತ್ತಿರುವ ಹೊಸ ಆಟಗಾರರ ಬಗ್ಗೆ ತಿಳಿಯೋಣ.
1.ಶ್ರೇಯಸ್ ಅಯ್ಯರ್ – ಸದ್ಯ ಮೀಸಲು ಆಟಗಾರರ ಪಟ್ಟಿಯಲ್ಲಿರುವ ಶ್ರೇಯಸ್ ರನ್ನ ಮುಖ್ಯ ತಂಡಕ್ಕೆ ಆರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಸದ್ಯದ ಐಪಿಎಲ್ ನಲ್ಲಿಯೂ ಉತ್ತಮ ರನ್ ಗಳಿಸಿರುವ ಅಯ್ಯರ್ , ದುಬೈ ಪಿಚ್ ಗಳಿಗೆ ಹೇಳಿ ಮಾಡಿಸಿದ ಆಟಗಾರರಾಗಿದ್ದಾರೆ. ಇಶಾನ್ ಕಿಶನ್ ಮತ್ತು ಸೂರ್ಯ ಕುಮಾರ್ ಯಾದವ್ ಬದಲು ಅಯ್ಯರ್ ಉತ್ತಮ ಮಧ್ಯಮ ಕ್ರಮಾಂಕದ ಆಯ್ಕೆಯ ಬ್ಯಾಟ್ಸಮನ್ ಆಗಬಲ್ಲರು.
2.ಮಯಾಂಕ್ ಅಗರ್ವಾಲ್ – ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿರುವ ಮಯಾಂಕ್ ಉತ್ತಮ ಲಯದಲ್ಲಿದ್ದಾರೆ. ಭಾರತದ ಪರ ಟೆಸ್ಟ್,ಏಕದಿನ,ಟಿ20 ಆಡಿ ಅನುಭವವಿರುವ ಮಯಾಂಕ್ ರನ್ನ ಆರಂಭಿಕರನ್ನಾಗಿ ಆಡಿಸಿ, ಕೆ.ಎಲ್.ರಾಹುಲ್ ರನ್ನ ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಚಿಂತನೆಯನ್ನು ತಂಡದ ಮ್ಯಾನೇಜ್ ಮೆಂಟ್ ಮಾಡುತ್ತಿದೆ.
3.ಸಂಜು ಸ್ಯಾಮ್ಸನ್ – ರಾಜಸ್ತಾನ ರಾಯಲ್ಸ್ ನ ನಾಯಕ ವಿಕೇಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ರನ್ನ ಮೀರಿ ಇಶಾನ್ ಕಿಶನ್ ತಂಡದಲ್ಲಿ ಮೀಸಲು ವಿಕೇಟ್ ಕೀಪರ್ ಆಗಿ ಸ್ಥಾನ ಪಡೆದಿದ್ದರು. ಆದರೇ ಸದ್ಯ ಇಶಾನ್ ಕಿಶನ್ ಕಳಪೆ ಫಾರ್ಮ್ ನಲ್ಲಿರುವ ಕಾರಣ ಅವರ ಬದಲು ಸಂಜು ಸ್ಯಾಮ್ಸನ್ ರನ್ನ ಆಯ್ಕೆಗೆ ಪರಿಗಣಿಸಬಹುದು. ಸದ್ಯದ ಐಪಿಎಲ್ ನಲ್ಲಿಯೂ ಸಂಜು ಬ್ಯಾಟ್ ನಿಂದ ಉತ್ತಮ ರನ್ ಬಂದಿದೆ. ಒಟ್ಟಿನಲ್ಲಿ ಫಾರ್ಮ್ ನಲ್ಲಿ ಇಲ್ಲದ ಸೂರ್ಯ ಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಬದಲು ಬದಲಿ ಆಟಗಾರರನ್ನೇ ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.