ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನೀಡುವ ಅನ್ನಪ್ರಸಾದದ ವೈಶಿಷ್ಟತೆ ಎಷ್ಟಿದೆ ಗೊತ್ತಾ? ನಿಮಗೆ ತಿಳಿಯದ ಎಷ್ಟೋ ವಿಷಯಗಳು

ನಮಸ್ಕಾರ ಸ್ನೇಹಿತರೇ ಜಗತ್ತಿನ ಹಲವಾರು ಪುಣ್ಯಕ್ಷೇತ್ರಗಳಲ್ಲಿ ತಿರುಪತಿ ಕೂಡ ಒಂದು. ಹೌದು ತಿರುಪತಿ ಭಾರತದ ಅತ್ಯಂತ ಶ್ರೀಮಂತ ದೇವರು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಹೆಚ್ಚಿನ ಭಕ್ತರು ಕೂಡ ತಿರುಪತಿಗೆ ಭೇಟಿ ನೀಡಿ ತಮ್ಮ ಮುಡಿಯನ್ನು ನೀಡುತ್ತಾರೆ. ಇನ್ನು ತಿರುಪತಿ ತಿಮ್ಮಪ್ಪನಿಗೆ ಏಳುಕುಂಡಲವಾಡ, ಸಪ್ತಗಿರಿ ವಾಸ, ಭಕ್ತಜನ ರಕ್ಷಕ ಹೀಗೆ ನಾನಾ ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ.

ಇನ್ನು ಪ್ರತಿದಿನ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ದಿನಗಳಂತೆ ನಿಂತು ಆತನ ದರ್ಶನ ಪಡೆಯುತ್ತಾರೆ. ಇನ್ನು ಅಲ್ಲಿ ಹೋದವರು ತಮ್ಮ ಮುಡಿಯನ್ನು ನೀಡಲಾರದೆ ಮರಳಿ ಬರುವುದಿಲ್ಲ. ಅಷ್ಟೊಂದು ತಿರುಪತಿ ತಿಮ್ಮಪ್ಪನನ್ನು ಅನೇಕ ಭಕ್ತರು ನಂಬುತ್ತಾರೆ. ಇನ್ನು ನೀವು ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ ಲಾಡು ಪ್ರಸಾದ ತೆಗೆದುಕೊಳ್ಳಲಾರದು ಮನೆಗೆ ಹಿಂತಿರುಗುವುದಿಲ್ಲ. ಅಷ್ಟೇ ಅಲ್ಲದೆ ಆ ಲಾಡುವಿನ ರುಚಿಯನ್ನು ಕೂಡ ನೀವು ಸವಿದಿರಬಹುದು.

ಹೌದು ತಿರುಪತಿಯಲ್ಲಿ ತಿಮ್ಮಪ್ಪನ ಲಾಡು ಹೆಚ್ಚು ಪ್ರಖ್ಯಾತಿಯನ್ನು ಪಡೆದಿದೆ. ಇನ್ನು ಲಾಡು ಮಾತ್ರವಲ್ಲದೆ ಪ್ರತಿನಿತ್ಯ ಅನ್ನಪ್ರಸಾದ ಕೂಡ ನೀಡಲಾಗುತ್ತದೆ. ಅಲ್ಲಿಗೆ ಬರುವ ಸಾಕಷ್ಟು ಭಕ್ತರು ತಮ್ಮ ಕೈಲಾದ ದೇಣಿಗೆಯನ್ನು ನೀಡುತ್ತಾ ಆ ದೇವರಿಗೆ ಶರಣೆನ್ನುತ್ತಾರೆ. ಏನೋ ತಿರುಪತಿ ತಿಮ್ಮಪ್ಪನ ವಿಗ್ರಹವನ್ನು ಸಮಾಧಾನ ರೀತಿಯಲ್ಲಿ ನೋಡುವುದೇ ಒಂದು ದೊಡ್ಡ ಇತಿಹಾಸ ಸೃಷ್ಟಿಸಿದಂತೆ. ಏಕೆಂದರೆ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನೂಕು-ನುಗ್ಗಲು ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಶಾಂತರೀತಿಯಿಂದ ದರ್ಶನ ಪಡೆಯುವುದು ಒಂದು ಪವಾಡವೇ ಎಂದು ಹೇಳಬಹುದು. ಇನ್ನು ತಿರುಪತಿಯಲ್ಲಿ ಅಣ್ಣ ಪ್ರಸಾದಕ್ಕೆ ಬಂದಾಗ ಹಿಂದಿನ ಕಾಲದಿಂದಲ್ಲಿ ಪುಳಿಯೋಗರೆ, ಮೊಸರನ್ನ ಹಾಗೂ ಪೊಂಗಲ್ ನೀಡಲಾಗುತ್ತಿತ್ತಂತೆ ಎಂದು ಹೇಳಲಾಗಿದೆ.

ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಅನ್ನಪ್ರಸಾದವನ್ನು 1984ರಲ್ಲಿ ಪ್ರಾರಂಭಿಸಲಾಯಿತು. ಅಂದಿನ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಮಹತ್ತರವಾದ ಕಾರ್ಯಗಳಲ್ಲಿ ಇದು ಕೂಡ ಒಂದು. ಇನ್ನು ಕೆಲವು ಮೂಲಗಳ ಪ್ರಕಾರ ತಿಳಿದಿರುವಂತೆ ಪ್ರತಿನಿತ್ಯ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಸುಮಾರು 1,50,000 ಜನ ಅನ್ನಪ್ರಸಾದವನ್ನು ಪಡೆಯುತ್ತಾರಂತೆ. ಅಷ್ಟೇ ಅಲ್ಲದೆ ಬ್ರಹ್ಮೋತ್ಸವದ ದಿನಗಳಲ್ಲಿ ಸುಮಾರು 10 ಲಕ್ಷ ಜನ ಅಲ್ಲಿ ಭೋಜನವನ್ನು ಸವಿಯುತ್ತಾರೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಭಕ್ತರು ಖಾಲಿಹೊಟ್ಟೆಯಲ್ಲಿ ಹಿಂದಿರುವ ಬಾರದು ಎಂದು ಅನ್ನಪ್ರಸಾದವನ್ನು ನೀಡಲಾಗುತ್ತದೆ.

ಇನ್ನು ಅಲ್ಲಿ ಬೆಳಗ್ಗೆ 9ರಿಂದ 10.30ವರೆಗೆ ಉಪ್ಪಿಟ್ಟು, ಶಾವಿಗೆ ಉಪ್ಪಿಟ್ಟು, ಪೊಂಗಲ್ ಸೇರಿದಂತೆ ಕಾಯಿಚಟ್ನಿ ನೀಡಲಾಗುತ್ತದೆ. ಮಧ್ಯಾಹ್ನ 11 ರಿಂದ ಸಂಜೆ 4ರವರೆಗೆ ಸಕ್ಕರೆ ಪೊಂಗಲ್, ಒಂದು ಪಲ್ಯ, ಚಟ್ನಿ, ಅನ್ನ, ತಿಳಿಸಾರು, ಸಾಂಬಾರ್ ಹಾಗೂ ಮಜ್ಜಿಗೆ ಇದ್ದೇ ಇರುತ್ತದೆ. ಇನ್ನು ಸಂಜೆ 5 ರಿಂದ 10.30ವರೆಗೆ ಅನ್ನ, ಸಾಂಬಾರ್, ಪಲ್ಯ, ಪಾಯಸ ಇದ್ದೇ ಇರುತ್ತದೆ. ಹೀಗೆ ಪ್ರತಿನಿತ್ಯ ಮೂರು ಹೊತ್ತು ಕೂಡ ವಿವಿಧ ರೀತಿಯ ಅನ್ನಪ್ರಸಾದವನ್ನು ನೀಡಲಾಗುತ್ತದೆ. ಇನ್ನು ಊಟಕ್ಕೆ ಬಾಳೆ ಎಲೆ ಅಥವಾ ಮುತ್ತುಗದ ಎಲೆ ನೀಡಲಾಗುತ್ತದೆ. ಇನ್ನು ಅಣ್ಣ ಹಾಗೂ ತರಕಾರಿ ಬೇಯಿಸಲು 20 ಸ್ಟೀಂ ಬಾಯ್ಲರ್ ಗಳಿವೆಯಂತೆ. ಬೂದುಗುಂಬಳ, ಸಿಹಿಕುಂಬಳಕಾಯಿ, ಸೊಪ್ಪು, ಬೀನ್ಸ್ ಸೇರಿದಂತೆ ವಿವಿಧ ತರಕಾರಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಇನ್ನು ಪ್ರತಿನಿತ್ಯ ಅನ್ನ ಪ್ರಸಾದಕ್ಕಾಗಿ 7 ಟನ್ ತರಕಾರಿ, 13 ಟನ್ ಅಕ್ಕಿ, 3 ಟನ್ನು ತೊಗರಿಬೇಳೆ, 800 ಲೆಟರ್ ಎಣ್ಣೆ, ಅಡುಗೆ ಮಾಡಲು 600 ಸಿಬ್ಬಂದಿಗಳು, 8000 ಜನರಿಗೆ ಏಕಕಾಲದಲ್ಲಿ ಭೋಜನ ನೀಡಲಾಗುತ್ತದೆ. ಇನ್ನು ದಿನವೊಂದಕ್ಕೆ ಇಷ್ಟೆಲ್ಲ ಮಾಡಬೇಕಾದರೆ ಸುಮಾರು 30 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಲಾಗಿದೆ. ನೋಡಿದ್ರಲ್ಲ ಸ್ನೇಹಿತರೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೋದಾಗ ನಾವು ತೆಗೆದುಕೊಳ್ಳುವ ಅನ್ನ ಪ್ರಸಾದದ ವೈಶಿಷ್ಟತೆ ಎಷ್ಟಿದೆ ಎಂಬುದು. ಇನ್ನು ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Post Author: Ravi Yadav