ಕೊನೆಗೂ ಕನ್ನಡ ಟೀಚರ್ ಗೆ ಪ್ರೀತಿ ನಿವೇದನೆ ಮಾಡಲು ಭರ್ಜರಿ ತಯಾರಿ ಆರಂಭಿಸಿದ ಹರ್ಷ, ಆದರೆ ಈ ಬಾರಿ ವಿಲ್ಲನ್ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕನ್ನಡಿಗರ ಅಚ್ಚು ಮೆಚ್ಚಿನ ಧಾರಾವಾಹಿ ಎಂದ್ರೆ ಈಗಂತೂ ಅದು ಕನ್ನಡತಿ. ಬಹುಶಃ ಕನ್ನಡಿಗರಲ್ಲದವರು ಕೂಡ ಈ ಧಾರಾವಾಹಿ ಪ್ಯಾನ್ಸ್ ಬಳಗ ಸೇರಿಕೊಂಡಿದ್ದು ಸುಳ್ಳಲ್ಲ. ದಿನವೂ ಹೊಸತನವನ್ನು ಉಣಬಡಿಸುವ ಈ ಧಾರಾವಾಹಿಯ ಅಮ್ಮಮ ಎಂದ್ರೆ ಎಲ್ಲರಿಗೂ ಪ್ರೀತಿ. ಇನ್ನು ಹರ್ಷ ಹಾಗೂ ಭುವಿಗೆ ಅದೆಷ್ಟು ಅಭಿಮಾನಿಗಳು ಇದ್ದರೋ ಹೇಳೋಕೆ ಸಾಧ್ಯವಿಲ್ಲ ಬಿಡಿ.

ಭುವಿ ಹಾಗೂ ಹರ್ಷ ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸ್ತಾ ಇದ್ರೂ ಹೇಳಿಕೊಳ್ಳೋದಕ್ಕೆ ನೂರೆಂಟು ವಿಘ್ನ. ಆದರೆ ಈ ವಿಘ್ನಗಳನ್ನೆಲ್ಲ ವಿನಾಯಕನಿಗೆ ಬಿಟ್ಟು ಭುವಿಗೆ ತಮ್ಮ ಪ್ರೀತಿ ನಿವೇದನೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಹರ್ಷ. ಮುಂದಿನ ಎಪಿಸೋಡ್ ಗಳಲ್ಲಿ ಭುವಿಯ ಹುಟ್ಟುಹಬ್ಬದ ದಿನವೇ ಹರ್ಷ ಪ್ರಪೋಸ್ ಮಾಡೋ ಸೀನ್ ಪ್ರಸಾರವಾಗಬಹುದು.

ಇನ್ನು ಭುವಿ ಇದುವರೆಗೆ ಕಂಡಿರದ ರೀತಿಯಲ್ಲಿ ವಿಶೇಷವಾಗಿ ಅವರ ಹುಟ್ಟುಹಬ್ಬ ಆಚರಿಸಲು ಹೊರಟಿದ್ದಾರೆ ಹರ್ಷ. ಸ್ವಾಮಿ ಕಾರ್ಯ ಸ್ವಕಾರ್ಯ ಎಡರನ್ನೂ ಮಾಡುವುದಕ್ಕಾಗಿ ಈ ಆರೆಂಜ್ ಮೆಂಟ್ಸ್! ಅಮ್ಮಮ್ಮನ 3 ತಿಂಗಳ ಗಡುವು ಮುಗಿಯುವುದರ ಒಳಗೆ ಅಮ್ಮಮ್ಮನ ಸಾಮ್ರಾಜ್ಯದ ಒಡತಿಯನ್ನು ಮನೆಯವರಿಗೆ ಪರಿಚಯಿಸಲೇ ಬೇಕು. ಹಾಗಾಗಿ ಭುವಿಗೆ ನೀನೇ ನನ್ನ ಮನದರಸಿ ಅಂತ ಹರ್ಷ ಹೇಳಲೇ ಬೇಕು. ಇನ್ನು ತನ್ನ ಮನಸ್ಸಿನಲ್ಲಿ ಹರ್ಷನ ಬಗ್ಗೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುವ ಭುವಿ ಹರ್ಷನ ಕಣ್ಣಲ್ಲಿ ಪ್ರೀತಿ ನೋಡ್ತಾರಾ ಅಥವಾ ತಿರಸ್ಕರಿಸುತ್ತರಾ ಕಾದು ನೋಡಬೇಕು.

ಆದ್ರೆ ಈ ಇವೆಂಟ್ ಯಶಸ್ಸು ಕಾಣೋದು ಅಷ್ಟು ಸುಲಭವಲ್ಲ. ವಿಲನ್ ಗಳ ಕಾಟ ನೋಡಿ! ಹರ್ಷನನ್ನ ಹೀರೊ ಅಂತ ಪ್ರೀತಿ ಮಾಡ್ತಾ ಇದ್ದ ವರುಧಿನಿ ಹರ್ಷನ ಹಿಂದೆ ಬಿದ್ದು ಅವನ ಹುಡುಗಿ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಮಾಡಿದ್ದಾಳೆ. ಇದನ್ನು ಗುರುತಿಸಿದ ಸ್ಟೈಲ್ ಸ್ಟಾರ್ ಹರ್ಷ ಅವಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ವರೂ ಇನ್ನಷ್ಟು ಬೇಸರಗೊಂಡಿದ್ದಾಳೆ. ಇನ್ನು ಭುವಿಯೇ ತನ್ನ ಹೀರೊ ಗೆ ಹೀರೋಯಿನ್ ಆಗುವವಳು ತನ್ನ ಗೆಳತಿ ಭುವಿ ಎಂದು ಗೊತ್ತಾದ್ರೆ ಇನ್ಯಾವ ಅವಾಂತರ ಮಾಡುತ್ತಾಳೋ ಗೊತ್ತಿಲ್ಲ. ಹಾಗೆ ಸಾನಿಯಾಗೆ ಸ್ಪಲ್ವ ಹಿಂಟ್ ಸಿಕ್ಕಿದ್ರೂ ಎಲ್ಲವನ್ನೂ ಹಾಳು ಮಾಡೋದು ಪಕ್ಕಾ! ಈ ಎಲ್ಲ ಸಂಕಷ್ಟದ ನಡುವೆ ಹರ್ಷ ಭುವಿ ಲವ್ ಸಕ್ಸೆಸ್ ಅಗತ್ತಾ ಅನ್ನೋದೇ ಪ್ರಶ್ನೆ!

Post Author: Ravi Yadav