ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದವನು, ಇಂದು ಸಾವಿರಾರು ಕೋಟಿಯ ಕಂಪನಿ ಕಟ್ಟಿದ್ದು ಹೇಗೆ ಗೊತ್ತೇ??
ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದವನು, ಇಂದು ಸಾವಿರಾರು ಕೋಟಿಯ ಕಂಪನಿ ಕಟ್ಟಿದ್ದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನೀವು ಜಾಹೀರಾತು ಪ್ರೀಯರು ಅಂದರೇ ಈ ಜಾಹೀರಾತುಗಳನ್ನು ನೋಡಿ ಆನಂದಿಸಿಯೇ ಇರುತ್ತಿರಿ. ಹೌದು ಅದೇ ಫೆವಿಕಾಲ್ ಕಂಪನಿಯ ಜಾಹೀರಾತುಗಳು. ಒಂದಕ್ಕಿಂತ ಒಂದು ವಿಭಿನ್ನ ವಿನೂತನ ಶೈಲಿಯ ಜಾಹೀರಾತುಗಳು ಅವು. ಆದರೇ ಆ ವಿನೋದ ಸ್ವಭಾವದ ಜಾಹೀರಾತಿನ ಹಿಂದೆಯೂ ಒಂದು ದೊಡ್ಡ ನೋವಿನ ಹಾಗೂ ಸಾಹಸೀಮಯ ಯಶಸ್ಸಿನ ಕತೆಯಿದೆ. ಬನ್ನಿ ಆ ಕತೆಯನ್ನ ತಿಳಿಯೋಣ.
ಫೆವಿಕಾಲ್ ಗಮ್ ಪಿಡಿಲೈಟ್ ಕಂಪನಿಯ ಉತ್ಪನ್ನ. ಇದರ ಸಂಸ್ಥಾಪಕರು ಬಲವಂತ ಪಾರೇಖ್. ಇವರು ಹುಟ್ಟಿದ್ದು 1925 ರಲ್ಲಿ ಗುಜರಾತ್ ನ ಭಾವನಗರದಲ್ಲಿ. ಒಳ್ಳೆಯ ಕುಟುಂಬದಲ್ಲಿ ಜನಿಸಿದ್ದ ಬಲವಂತ್ ಗೆ ಓದಿನಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ತಾನು ಏನಾದರೂ ಬಿಸಿನೆಸ್ ಮಾಡಬೇಕೆಂದೇ ಅವರ ಆಸೆಯಾಗಿರುತ್ತದೆ. ಆದರೇ ಮನೆಯವರು ಅವರನ್ನ ಲಾ ಕಾಲೇಜಿಗೆ ಸೇರಿಸುತ್ತಾರೆ. ಆದರೇ ಕಾನೂನು ಪದವಿಯನ್ನು ಅರ್ಧಕ್ಕೆ ಬಿಟ್ಟು ಪ್ರೆಸ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆದರೇ ಆ ಕೆಲಸ ಸಹ ಕೈ ತಪ್ಪುತ್ತದೆ.
ಇದಾದ ನಂತರ ಮರಗೆಲಸದ ಅಂಗಡಿಯಲ್ಲಿ ಕುಟುಂಬ ನಿರ್ವಹಣೆಗೆಂದು ಪ್ಯೂನ್ ಆಗಿ ಸೇರಿಕೊಳ್ಳುತ್ತಾರೆ. ಅಲ್ಲಿ ಮಾಲೀಕನ ಸಂಪರ್ಕಕ್ಕೆ ಬರುವ ಬಹಳಷ್ಟು ಜನರ ಜೊತೆ ಉತ್ತಮ ಸಂವಹನ ನಡೆಸಿ, ಅವರೊಂದಿಗೆ ಒಮ್ಮೆ ಜರ್ಮನಿಗೆ ಸಹ ಪ್ರಯಾಣ ಬೆಳೆಸುತ್ತಾರೆ. ಅಲ್ಲಿಂದ ವಾಪಸ್ ಬಂದ ಮೇಲೆ ತಾನೂ ಏನಾದರೂ ಒಂದು ಉದ್ಯಮವನ್ನ ಸ್ಥಾಪಿಸಲೇಬೆಕೇಂಬ ಹಠ ಬಲವಂತ್ ಪಾರೇಖ್ ಗೆ ಬಂದು ಬಿಡುತ್ತದೆ. ಅದೇ ಸಮಯದಲ್ಲಿ ಹಳೇ ನೆನಪುಗಳು ಆಗುತ್ತಿದ್ದಾಗ, ತಾವು ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದಾಗ ಮರಗೆಲಸದ ಕಂಪನಿಯಲ್ಲಿ ಮಾಲೀಕ ಮರಗಳನ್ನ ಜೋಡಿಸಲು ಬಳಸುವ ಅಂಟು ನೆನಪಾಗುತ್ತದೆ. ಅದು ಅತ್ಯಂತ ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಕಾರಣ ಅದನ್ನ ಪ್ರಾಣಿಗಳ ತ್ಯಾಜ್ಯದಿಂದ ತಯಾರಿಸಲಾಗುತ್ತಿತ್ತು.
ಆಗ ಬಲವಂತ್ ಗೆ ಬಂದ ಐಡಿಯಾ ಅಂದರೇ, ನಾವೇಕೆ ಒಂದು ಸುವಾಸನೆಯುಕ್ತ ಅಂಟು, ಗಮ್ ನ್ನು ತಯಾರಿಸಬಾರದೆಂದು. ತಕ್ಷಣವೇ ಪಿಡಿಲೈಟ್ ಎಂಬ ಕಂಪನಿ ಸ್ಥಾಪಿಸಿ, ಅದರಲ್ಲಿ ಸುವಾಸನೆಯುಕ್ತ ಗಮ್ ಅಂದರೇ ಫೆವಿಕಾಲ್ ಎಂಬ ಉತ್ಪನ್ನ ತಯಾರಿಸುತ್ತಾರೆ. ಮುಂದೆ ಅದು ಜಾಹೀರಾತುಗಳಿಂದ ಬಹಳಷ್ಟು ಜನಪ್ರಿಯವಾಗಿಬಿಡುತ್ತದೆ. ದೇಶಾದ್ಯಂತ ಜನ ಫೆವಿಕಾಲ್ ಹಿಂದೆ ಬೀಳುತ್ತಾರೆ. ನಂತರ ಎಂ.ಸೀಲ್, ಫೆವಿಕ್ವಿಕ್ ಎಂಬ ಉತ್ಪನ್ನ ಸಹ ಮಾಡುತ್ತಾರೆ. ಸದ್ಯ ಪಿಡಿಲೈಟ್ ಕಂಪನಿಯ ವಾರ್ಷಿಕ ವ್ಯವಹಾರ ಇಂದು ಬರೋಬ್ಬರಿ ಒಂದು ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು. ನೋಡಿ ಸ್ನೇಹಿತರೇ ಮನಸ್ಸಿದ್ದರೇ ಮಾರ್ಗ ಎಂಬಂತೆ, ಒಬ್ಬ ಪ್ಯೂನ್ ಆಗಿದ್ದ ನೌಕರ ಇಂದು ಸಾವಿರಾರು ಜನರಿಗೆ ಉದ್ಯೋಗದಾತನಾಗಿದ್ದಾನೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.