ಮೈಸೂರನ್ನು ಮತ್ತೆ ವಶಪಡಿಸಿಕೊಳ್ಳಲು ಜೆಡಿಎಸ್ ಮಾಸ್ಟರ್ ಪ್ಲಾನ್, ಜೆಡಿಎಸ್ ಕುಟುಂಬದಿಂದ ಮತ್ತೊಂದು ಮಹಿಳಾ ಅಭ್ಯರ್ಥಿ. ಯಾರು ಗೊತ್ತಾ??

ಮೈಸೂರನ್ನು ಮತ್ತೆ ವಶಪಡಿಸಿಕೊಳ್ಳಲು ಜೆಡಿಎಸ್ ಮಾಸ್ಟರ್ ಪ್ಲಾನ್, ಜೆಡಿಎಸ್ ಕುಟುಂಬದಿಂದ ಮತ್ತೊಂದು ಮಹಿಳಾ ಅಭ್ಯರ್ಥಿ. ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮೈಸೂರು ನಗರದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಮತದಾರರನ್ನು ಹೊಂದಿದೆ. ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷವು ಭದ್ರವಾಗಿ ನೆಲೆಯೂರಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಇದೀಗ ನಡೆಯುತ್ತಿರುವ ವಿದ್ಯಮಾನಗಳು ಜೆಡಿಎಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ, ಈಗಾಗಲೇ ರಾಜ್ಯದ ಬಹುತೇಕ ಕಡೆ ಮುಳುಗಿ ಹೋಗಿರುವ ಜೆಡಿಎಸ್ ಪಕ್ಷ ಕೆಲವೇ ಕೆಲವು ಬೆರಳೆಣಿಕೆಯ ಜಿಲ್ಲೆಗಳಲ್ಲಿ ಮಾತ್ರ ಶಾಸಕರನ್ನು ಒಳಗೊಂಡಿದೆ.

ಇನ್ನು ಮುಂದಿನ ಚುನಾವಣೆಯ ಲೆಕ್ಕಾಚಾರಗಳನ್ನು ನೋಡುತ್ತಿದ್ದರೆ ಜೆಡಿಎಸ್ ಪಕ್ಷ ಈಗ ಇರುವ ಜಿಲ್ಲೆಗಳಲ್ಲೂ ಕೂಡ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ ಯಾಕೆಂದರೆ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಹಲವಾರು ಜನ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗುತ್ತಿದ್ದಾರೆ, ಒಕ್ಕಲಿಗರ ಆಧಾರದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದು ಕೊಂಡಿರುವ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಪಕ್ಷವನ್ನು ಮುಳುಗಿಸುವ ಪಣ ತೊಟ್ಟಂತೆ ಕಾಣುತ್ತಿದೆ, ಹೌದು ಈಗಾಗಲೇ ಹಲವಾರು ಪ್ರಮುಖ ನಾಯಕರಿಗೆ ಗಾಳ ಹಾಕಿರುವ ಡಿಕೆ ಶಿವಕುಮಾರ್ ಅವರು ಹಲವಾರು ನಾಯಕರನ್ನು ಪಕ್ಷಕ್ಕೆ ಕರೆದು ಕೊಂಡಿದ್ದಾರೆ ಹಾಗೂ ಇನ್ನೂ ಹಲವಾರು ನಾಯಕರ ಜೊತೆ ಈಗಾಗಲೇ ಮಾತುಕತೆ ನಡೆದಿದ್ದು ಇನ್ನು ಕೆಲವೇ ಕೆಲವು ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಖಚಿತವಾಗಿದೆ.

ಇನ್ನು ಮೈಸೂರು ವಿಭಾಗದಲ್ಲಿ ಸಿದ್ದರಾಮಯ್ಯರವರನ್ನು ಸೋಲಿಸಿದ ಖ್ಯಾತಿಯನ್ನು ಹೊಂದಿರುವ ಜಿಟಿ ದೇವೇಗೌಡ ರವರು ಕಾಂಗ್ರೆಸ್ ಪಕ್ಷ ಸೇರುವುದು ಖಚಿತ ವಾಗಿದೆ ಇದು ಕೂಡ ಡಿಕೆಶಿ ರವರ ತಂತ್ರವಾಗಿದೆ. ಇನ್ನು ಪಿರಿಯಾಪಟ್ಟಣದ ಶಾಸಕ ಮಹಾದೇವರ ಅವರು ಕೂಡ ಡಿಕೆಶಿ ರವರ ಜೊತೆ ಮಾತುಕತೆ ನಡೆಸಿ ಪಕ್ಷ ಬಿಡಲು ತಯಾರಿ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಜೆಡಿಎಸ್ ಪಕ್ಷ ಮುಂದಿನ ಬಾರಿ ಕಿಂಗ್ ಮೇಕರ್ ಆಗುವ ಯಾವುದೇ ಸಾಧ್ಯತೆ ಕಾಣುತ್ತಿಲ್ಲ, ಬದಲಾಗಿ ಜೆಡಿಎಸ್ ಗೆಲ್ಲುವ ಕ್ಷೇತ್ರಗಳ ಸಂಖ್ಯೆ ಎರಡಂಕಿ ಗಿಂತ ಕಡಿಮೆ ಅಂದರೆ ಹತ್ತು ಕ್ಷೇತ್ರಗಳು ಗೆಲ್ಲುವುದು ಕೂಡ ಕಷ್ಟವಾಗುವ ಲಕ್ಷಣಗಳು ಕಾಣಿಸುತ್ತಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ಇನ್ನು ಇಂತಹ ಸಮಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕೂಡ ಕಳೆದುಕೊಂಡಿರುವ ಜೆಡಿಎಸ್ ಮುಂದೆ ಸುಮಲತಾರವರ ಬೆಂಬಲಿಗರನ್ನು ಮತ್ತೊಮ್ಮೆ ವಿಧಾನಸಭಾ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ, ಈ ಕಡೆ ಮೈಸೂರು ಆಕಡೆ ಮಂಡ್ಯ ಎರಡು ವಿಭಾಗದಲ್ಲಿ ಭಾರೀ ಪೈಪೋಟಿ ಜೆಡಿಎಸ್ ಪಕ್ಷಕ್ಕೆ ಕಂಡು ಬರುತ್ತಿದೆ. ಇನ್ನುಳಿದಂತೆ ಹಾಸನ ಬಿಟ್ಟರೆ ಇನ್ಯಾವುದೇ ಜಿಲ್ಲೆಗಳಲ್ಲೂ ಹೇಳಿಕೊಳ್ಳುವಷ್ಟು ಅಸ್ತಿತ್ವವನ್ನು ಜೆಡಿಎಸ್ ಪಕ್ಷ ಉಳಿಸಿ ಕೊಳ್ಳುವುದರಲ್ಲಿ ವಿಫಲವಾಗಿದೆ. ಆದರೆ ಕುಮಾರಸ್ವಾಮಿ ರವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ಬಹುಮತ ಪಡೆದು ಅಧಿಕಾರ ಹಿಡಿಯುತ್ತೇವೆಂದು ರಾಜ್ಯದ ಎಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ ಹಾಗೂ ಅಭ್ಯರ್ಥಿಗಳಿಗೆ ಈಗಲೇ ಟಿಕೆಟ್ ಘೋಷಣೆ ಮಾಡಿ ಮುಂದಿನ ಚುನಾವಣೆಗೆ ತಯಾರಿ ವಾಗುವ ಮಾಸ್ಟರ್ ಪ್ಲಾನ್ ಕೂಡ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೆ ಎಂಬುದರ ಕುರಿತು ಕೂಡ ರಾಜಕೀಯ ಪಂಡಿತರು ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ ಆದರೆ ಈಗಿರುವ ಲೆಕ್ಕಾಚಾರಗಳು ಸುಳ್ಳು ಕೂಡ ಆಗಬಹುದು.

ಹೀಗೆ ಇಷ್ಟೆಲ್ಲಾ ಸವಾಲುಗಳನ್ನು ಎದುರಿಸುತ್ತಿರುವ ಜೆಡಿಎಸ್ ಪಕ್ಷ ಮೈಸೂರಿನ ವಿಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿ ಕೊಳ್ಳುವುದಕ್ಕಾಗಿ ಇದೀಗ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದು ದೇವೇಗೌಡ ರವರು ಮೈಸೂರಿನಲ್ಲಿ ಸಾರಾ ಮಹೇಶ್ ರವರ ಪ್ರಭಾವ ಹೆಚ್ಚುತ್ತಿರುವುದನ್ನು ಕಡಿವಾಣ ಹಾಕಲು ಹಾಗೂ ಪಕ್ಷ ಬಿಡಬೇಕು ಎಂದು ಕೊಳ್ಳುತ್ತಿರುವ ಪಿರಿಯಾಪಟ್ಟಣ ಶಾಸಕ ಮಹದೇವ್ ಅವರಿಗೂ ಕೂಡ ಒಕ್ಕಲಿಗ ಮತದ ವಿಭಜನೆ ಮಾಡಲು ಅಷ್ಟೇ ಅಲ್ಲದೆ ಪಕ್ಷ ಬಿಡುತ್ತಿರುವ ಜಿ ಟಿ ದೇವೇಗೌಡ ರವರಿಗೆ ಅಭ್ಯರ್ಥಿಯಾಗಿ ತಮ್ಮ ಕುಟುಂಬದ ಮತ್ತೊಬ್ಬರು ಮಹಿಳೆಯನ್ನು ಚುನಾವಣಾ ಅಖಾಡಕ್ಕೆ ಇಳಿಸಲಿದ್ದಾರೆ.

ಹೌದು ಸ್ನೇಹಿತರೇ ಜೆಡಿಎಸ್ ಪಕ್ಷದ ನಾಯಕ ರೇವಣ್ಣ ರವರ ಪತ್ನಿ ಭವಾನಿ ರೇವಣ್ಣ ರವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್ ನೀಡಲು ನಿರ್ಧಾರ ಮಾಡಲಾಗಿದ್ದು, ಈ ಮೂಲಕ ಮೈಸೂರಿನಲ್ಲಿ ಒಕ್ಕಲಿಗ ಮತಗಳನ್ನು ಒಗ್ಗೂಡಿಸಲು ಪ್ಲಾನ್ ಮಾಡಲಾಗಿದ್ದು, ಇದೇ ಸಮಯದಲ್ಲಿ ಸಾ.ರ ಮಹೇಶ್ ರವರು ಇದನ್ನು ವಿರೋಧ ಕೂಡ ಮಾಡಲು ಸಾಧ್ಯವಿಲ್ಲ ಯಾಕೆಂದರೆ ಕೆಆರ್ ನಗರದಲ್ಲಿ ಒಕ್ಕಲಿಗ ಮತಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ಯಾವುದೇ ನಾಯಕರು ಇದಕ್ಕೆ ವಿರೋಧ ಮಾಡುವ ಯಾವುದೇ ಸಾಧ್ಯತೆಗಳು ಕೂಡ ಇಲ್ಲ. ಹೀಗೆ ಜಿ ಟಿ ದೇವೇಗೌಡ ರವರಿಗೆ, ಸಾರಾ ಮಹೇಶ್ ರವರಿಗೆ ಹಾಗೂ ಮಹದೇವ ರವರಿಗೆ ಮೂರು ಜನಕ್ಕೆ ಒಮ್ಮೆಲೆ ದೇವೇಗೌಡ ರವರು ಕಡಿವಾಣ ಹಾಕಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಗೆ ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಭಾರ್ಜರಿ ಚುನಾವಣಾ ತಯಾರಿ ಆರಂಭವಾಗಿದೆ.