ಮೊದಲ ಬಾರಿಗೆ ಆರ್ಸಿಬಿ ಸೋಲಿಗೆ ಯಾರು ಕಾರಣ ಎಂದು ನೇರವಾಗಿ ತಿಳಿಸಿದ ಕೊಹ್ಲಿ, ಯಾರಂತೆ ಗೊತ್ತೇ??
ಮೊದಲ ಬಾರಿಗೆ ಆರ್ಸಿಬಿ ಸೋಲಿಗೆ ಯಾರು ಕಾರಣ ಎಂದು ನೇರವಾಗಿ ತಿಳಿಸಿದ ಕೊಹ್ಲಿ, ಯಾರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಎರಡನೇ ಚರಣ ಆರಂಭದ ನಂತರ ಆರ್ಸಿಬಿ ಹಾರ್ಸಿಬಿ ಆಗಿದೆ. ಪದೇ ಪದೇ ಸೋಲುಗಳು, ಬ್ಯಾಟಿಂಗ್,ಬೌಲಿಂಗ್,ಫೀಲ್ಡಿಂಗ್ ನಲ್ಲಿ ದಯನೀಯ ವೈಫಲ್ಯವನ್ನು ಕಂಡಿದೆ. ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಉತ್ತಮ ಆರಂಭ ಸಿಕ್ಕರೂ ಅದನ್ನ ದೊಡ್ಡ ಮೊತ್ತವಾಗಿಸಲು ವಿಫಲವಾಯಿತು. ಪಿಚ್ ಬೌಲರ್ ಗಳಿಗೆ ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದರೂ ಬೌಲಿಂಗ್ ಹೇಳಿಕೊಳ್ಳುವಂತಹ ರೀತಿಯಲ್ಲಿ ಮಾಡಲಿಲ್ಲ. ಈ ಬಗ್ಗೆ ಪಂದ್ಯ ಮುಗಿದ ನಂತರ ಮಾತನಾಡಿದ ವಿರಾಟ್ ಕೊಹ್ಲಿ ಸೋಲಿಗೆ ಕಾರಣ ಇವರೇ ಎಂದು ಹೇಳಿದರು.
ಹೌದು ಒಂದು ಹಂತದಲ್ಲಿ ವಿಕೇಟ್ ನಷ್ಟವಿಲ್ಲದೇ 108 ರನ್ ಗಳಿಸಿದ್ದ ಆರ್ಸಿಬಿ ಕೊನೆಯಲ್ಲಿ 156 ರನ್ ಗಳಿಸಿತು. ಇನ್ನು 15 ರಿಂದ 20 ರನ್ ಹೆಚ್ಚು ಗಳಿಸುವ ಸಾಧ್ಯತೆಯನ್ನು ಹಾಳು ಮಾಡಿಕೊಂಡಿತು. ಇನ್ನು ಪಿಚ್ ನಿಧಾನಗತಿಯಾಗಿ ಬದಲಾಗಿದ್ದರಿಂದ ನಾವು ಬೌಲರ್ ಗಳಿಗೆ ಉತ್ತಮ ಜಾಗದಲ್ಲಿ ಚೆಂಡೆಸೆದರೇ ಖಂಡಿತ ನಾವು ಈ ಪಂದ್ಯ ಗೆಲುತ್ತೇವೆ ಎಂದು ಹೇಳಿದ್ದೆವು. ಆದರೇ ಬೌಲರ್ ಗಳು ಉತ್ತಮ ಜಾಗದಲ್ಲಿ ಚೆಂಡು ಎಸೆಯದ ಕಾರಣ ಪಂದ್ಯದಲ್ಲಿ ಸೋಲಬೇಕಾಯಿತು. ಅದಲ್ಲದೇ ಸುಲಭವಾಗಿ ನಿಯಂತ್ರಿಸಬೇಕಾಗಿದ್ದ ಕೆಲವು ಬೌಂಡರಿಗಳನ್ನ ನಾವು ಅನಾವಶ್ಯಕವಾಗಿ ಬಿಟ್ಟುಕೊಟ್ಟೆವು.
ಇದು ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಕೊಹ್ಲಿ ಹೇಳಿದರು. ಅದಲ್ಲದೇ ನಾವು ಮತ್ತೇ ಗೆಲುವಿನ ಲಯಕ್ಕೆ ವಾಪಸ್ ಬರುತ್ತೇವೆ ಎಂದು ಸಹ ಹೇಳಿದರು. ಆರ್ಸಿಬಿ ಸದ್ಯ ಒಂಬತ್ತು ಪಂದ್ಯ ಆಡಿ ಐದರಲ್ಲಿ ಗೆದ್ದು ಹತ್ತು ಪಾಯಿಂಟ್ ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನುಳಿದ ಐದು ಪಂದ್ಯಗಳಲ್ಲಿ ಕನಿಷ್ಠ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡ ಸೃಷ್ಠಿ ಮಾಡಿಕೊಂಡಿದೆ. ಆರ್ಸಿಬಿ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ದ ಆಡಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.