ಕನ್ನಡತಿಯಲ್ಲಿ ಮತ್ತೊಂದು ಮಹತ್ವದ ಟ್ವಿಸ್ಟ್, ಭುವಿ ನಡೆಗೆ ಶಾಕ್ ಆದ ಪ್ರೇಕ್ಷಕರು ಹಾಗೂ ವಿಲ್ಲನ್. ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ಮೂಡಿಬರುವ ಧಾರಾವಾಹಿಗಳಲಿ ಕೆಲವು ಒಂದೇ ರೀತಿಯಾದ ಕಥೆಯನ್ನು ಹೊಂದಿರುತ್ತವೆ. ಹಾಗಾಗಿ ಎಲ್ಲಾ ಜನರು ಈ ಧಾರಾವಾಹಿಗಳನ್ನು ವೀಕ್ಷಿಸಲು ಇಷ್ಟಪಡುವುದಿಲ್ಲ. ಆದರೆ ಟಿ ಎನ್. ಸೀತಾರಾಮ್ ಅವರ ನಿರ್ದೇಶನದ ಧಾರಾವಾಹಿಗೆ ಮಾತ್ರ ಪ್ರತ್ಯೇಕ ವೀಕ್ಷಕ ಬಳಗವೇ ಇತ್ತು. ಆದರೆ ಅವರ ನಿರ್ದೇಶನದ ಧಾರಾವಾಹಿಗಳು ಪ್ರಸಾರವಾಗುವುದೇ ಇಲ್ಲ. ಆದರೆ ಈ ಜಾಗವನ್ನು ತುಂಬುತ್ತಿರುವುದು ಸ್ಪಲ್ವ ಮಟ್ಟಿಗೆ ಕನ್ನಡತಿ ಧಾರಾವಾಹಿ.

ಹೌದು ಮೊದಲಿನಿಂದಲೂ ಕನ್ನಡತಿ ಧಾರಾವಾಹಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಬರುವ ಪ್ರತಿಯೊಂದು ಪಾತ್ರವೂ ಜನರಿಗೆ ಅಚ್ಚುಮೆಚ್ಚು. ಅದರಲ್ಲಿ ಭುವಿಯ ಕನ್ನಡವೇ ಈ ಧಾರಾವಾಹಿಯ ಹೈಲೈಟ್. ತಪ್ಪಿಯೂ ತಮ್ಮ ಮಾತಿನ ನಡುವೆ ಇಂಗ್ಲೀಷ್ ಪದ ಬಳಕೆ ಮಾಡದೆ ಕನ್ನಡವನ್ನು ಅತ್ಯಂತ ಸರಾಗವಾಗಿ ಮಾತನಾಡುವ ಭುವಿ ಇದೀಗ ಇನ್ನೊಂದು ವಿಷಯಕ್ಕೆ ಜನರ ಗಮನ ಸೆಳೆದಿದ್ದಾರೆ.

ಭುವಿ ತನ್ನ ಶಿಷ್ಯ ವೃತ್ತಿಯನ್ನು ಮುಂದುವರೆಸಬೇಕಾದರೆ ಒಂದು ದಿನದ ಎಂ.ಡಿ ಪೋಸ್ಟ್ ನ್ನು ನಿಭಾಯಿಸಬೇಕು ಎಂದು ಸಾನಿಯಾ ಷರತ್ತು. ಇದನ್ನು ಒಪ್ಪಿ ಅತ್ಯಂತ ಸುಂದರವಾಗಿ, ಜವಾಬ್ದಾರಿಯಿಂದ ತನ್ನ ಜವಾಬ್ದಾರಿಯನ್ನು ನಿಭಾಯಿಸಿದ ಭುವಿ. ಈ ಎಪಿಸೋಡ್ ಗಳು ಈ ವಾರವಷ್ಟೇ ಪ್ರಸಾರವಾಗಿ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ.

ಭುವಿ ಕೇವಲ ಕನ್ನಡ ಪಂಡಿತೆ ಎಂದೇ ಭಾವಿಸಿದ್ದ ಸಾನಿಯಾ, ಭುವಿಯನ್ನು ಅವ’ಮಾನ ಮಾಡಲು ಒಂದು ದಿನದ ಎಂ ದಿ ಪೋಸ್ಟ್ ಕೊಟ್ಟು ಬಂದಿರುವ ಡೆಲಿಗೇಡ್ಸ್ ಮುಂದೆ ಇಂಗ್ಲೀಷ್ ನಲ್ಲಿಯೇ ಮಾತನಾಡುವ ಜವಾಬ್ದಾರಿಯನ್ನು ಕೊಡುತ್ತಾರೆ. ಆದರೆ ನಮ್ಮ ಕನ್ನಡಾಂಬೆ ಭುವನೇಶ್ವರಿ ಯಾವುದರಲ್ಲಿ ಕಮ್ಮಿ ಹೇಳಿ? ತನ್ನ ಶುದ್ಧ ಇಂಗ್ಲೀಷ್ ನಿಂದ ಬಂದಿರುವ ಡೆಲಿಗೇಟ್ಸ್ ನ್ನು ಮೆಚ್ಚಿಸುತ್ತಾಳೆ. ಮಾಲಾ ಸಂಸ್ಥೆಯ ಬಗ್ಗೆ ಅತ್ಯಂತ ಉತ್ತಮ ಮಾಹಿತಿಗಳನ್ನುಇಂಗ್ಲೀಷಿನಲ್ಲಿಯೇ ಕೊಡುತ್ತಾಳೆ. ಇದನ್ನು ರತ್ನಮಾಲಾ ಹಾಗೂ ಹರ್ಷ ಇಬ್ಬರೂ ಕೇಳಿಸಿಕೊಂಡು ಫೂಲ್ ಖುಷ್ ಆಗಿದ್ದಾರೆ. ಹಾಗೆಯೇ ಭುವಿ ತಮ್ಮ ಆಯ್ಕೆ ಎಂಬ ಕಾರಣಕ್ಕೆ ಹೆಮ್ಮೆಯನ್ನೂ ಪಡುತ್ತಿದ್ದಾರೆ. ಇನ್ನು ಮುಂದಿನ ಸಂಚಿಕೆಗಳಲ್ಲಿ ಭುವಿ ಹಾಗೂ ಸಾನಿಯಾ ಫೈಟಿಂಗ್ ಶುರುವಾಗುವುದಂತೂ ಪಕ್ಕಾ.

Post Author: Ravi Yadav