ಮುಂದಿನ ಸಿ.ಎಸ್.ಕೆ ವಿರುದ್ದ ಪಂದ್ಯದಲ್ಲಿ ಗೆಲ್ಲಬೇಕು ಎಂದರೇ ಆರ್ಸಿಬಿ ಈ 3 ಬದಲಾವಣೆ ಮಾಡಲೇ ಬೇಕು ಯಾವ್ಯಾವು ಗೊತ್ತೇ??

ಮುಂದಿನ ಸಿ.ಎಸ್.ಕೆ ವಿರುದ್ದ ಪಂದ್ಯದಲ್ಲಿ ಗೆಲ್ಲಬೇಕು ಎಂದರೇ ಆರ್ಸಿಬಿ ಈ 3 ಬದಲಾವಣೆ ಮಾಡಲೇ ಬೇಕು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ದುಬೈ ಚರಣದ ಮೊದಲ ಪಂದ್ಯದಲ್ಲಿ ಆರ್ಸಿಬಿ, ಕೆಕೆಆರ್ ತಂಡದ ವಿರುದ್ದ ಹೀನಾಯವಾಗಿ ಸೋತಿತು. ಇದು ಆರ್ಸಿಬಿ ತಂಡದ ಅಭಿಮಾನಿಗಳಿಗೆ ತೀವ್ರ ನಿರಾಸೆ ತರಿಸಿತು. ಆದರೇ ಪುಟಿದೇಳುವ ವಿಶ್ವಾಸ ಹೊಂದಿರುವ ಆರ್ಸಿಬಿ ಮೂರು ಬದಲಾವಣೆಗಳನ್ನ ಮಾಡಿಕೊಳ್ಳಬೇಕೆಂಬ ಕೂಗು ಜೋರಾಗಿದೆ. ಬನ್ನಿ ಆ ಮೂರು ಬದಲಾವಣೆಗಳು ಯಾವುವು ಎಂದು ತಿಳಿಯೋಣ.

ಮೊದಲನೆಯದಾಗಿ ವನಿಂದು ಹಸರಂಗ ಬದಲು ಟೀಮ್ ಡೇವಿಡ್ ಆಡಬೇಕು – ವಿದೇಶಿ ಆಟಗಾರರ ಕೋಟಾದಲ್ಲಿ ಕಳೆದ ಪಂದ್ಯದಲ್ಲಿ ವನಿಂದು ಹಸರಂಗ ಆಡಿದ್ದರು. ಅವರು ಬ್ಯಾಟಿಂಗ್ ನಲ್ಲಿ ಶೂನ್ಯ ಸಂಪಾದಿಸಿ, ಬೌಲಿಂಗ್ ನಲ್ಲಿಯೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಅದಲ್ಲದೇ ಬ್ಯಾಟಿಂಗ್ ನಲ್ಲಿ ಆರ್ಸಿಬಿ ತಂಡ ಸ್ವಲ್ಪ ಹಿನ್ನಡೆ ಕಂಡ ಕಾರಣ ಟೀಮ್ ಡೇವಿಡ್ ರನ್ನ ಆಡಿಸಬೇಕು. ಬ್ಯಾಟಿಂಗ್ ನಲ್ಲಿ ಬಿಗ್ ಶಾಟ್ ಗಳಿಸುವ ಸಾಮರ್ಥ್ಯ ಇರುವ ಟಿಮ್ ಡೇವಿಡ್ ಆಡಿಸಿದರೇ, ಆರ್ಸಿಬಿ ಉತ್ತಮ ಮೊತ್ತಗಳಿಸುವ ಸಾಧ್ಯತೆ.

ಎರಡನೆಯದಾಗಿ ನಾಯಕ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಬೇಕು – ಆರಂಭಿಕ ಸ್ಥಾನಕ್ಕೆ ಮಹಮದ್ ಅಜರುದ್ದೀನ್ ಇಲ್ಲವೇ ಟೀಮ್ ಡೇವಿಡ್ ರವರನ್ನ ಆಡಿಸಿ, ನಾಯಕ ಮೂರನೇ ಕ್ರಮಾಂಕದಲ್ಲಿ ಆಡಬೇಕು. ಆಗ ಆರ್ಸಿಬಿಯ ಬ್ಯಾಟಿಂಗ್ ಬಲ , ಎಬಿಡಿ, ಮ್ಯಾಕ್ಸವೆಲ್ ಜೊತೆ ಸೇರಿ ಉತ್ತಮವಾಗಿರುತ್ತದೆ.

ಮೂರನೆಯದಾಗಿ ಮ್ಯಾಕ್ಸವೆಲ್ ಗೆ ಬೌಲಿಂಗ್ ನೀಡಬೇಕು – ಸದ್ಯ ತಂಡದಲ್ಲಿ ವಾಷಿಂಗ್ಟನ್ ಸುಂದರ್ ಅಲಭ್ಯತೆ ಕಾರಣದಿಂದ ಆಫ್ ಸ್ಪಿನ್ನರ್ ಕೊರತೆ ಕಾಡುತ್ತಿದೆ. ಚೆನ್ನೈ ತಂಡದಲ್ಲಿ ಏಡಗೈ ಬ್ಯಾಟ್ಸಮನ್ ಗಳು ಹೆಚ್ಚಿರುವ ಕಾರಣ ನಾಯಕ ಕೊಹ್ಲಿ, ತಂಡದ ಏಕಮಾತ್ರ ಆಫ್ ಸ್ಪಿನ್ನರ್ ಆಗಿರುವ ಮ್ಯಾಕ್ಸವೆಲ್ ಗೆ ಬೌಲಿಂಗ್ ನೀಡಬೇಕು.

ಚೆನ್ನೈ ವಿರುದ್ದ ಕಣಕ್ಕಿಳಿಯುವ ಆರ್ಸಿಬಿಯ ಸಂಭವನೀಯ ತಂಡ ಹೀಗಿದೆ – ದೇವದತ್ ಪಡಿಕ್ಕಲ್, ಟೀಮ್ ಡೇವಿಡ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸವೆಲ್, ಎಬಿ ಡಿ ವಿಲಿಯರ್ಸ್, ಮಹಮದ್ ಅಜರುದ್ದೀನ್,ಶಹಬಾಜ್ ಅಹ್ಮದ್, ಕೈಲ್ ಜೇಮಿಸನ್, ಹರ್ಷಲ್ ಪಟೇಲ್,ಮಹಮದ್ ಸಿರಾಜ್,ಯುಜವೇಂದ್ರ ಚಾಹಲ್.