ಯಾವುದೇ ದೊಡ್ಡ ಟ್ರೋಫಿ ಗೆಲ್ಲದೇ ಇದ್ದರೂ ಕೊಹ್ಲಿ ಜೊತೆಗಿದ್ದ ಅಭಿಮಾನಿಗಳು ಮೊದಲ ಬಾರಿಗೆ ಬೇಸರ ವ್ಯಕ್ತ ಪಡಿಸಿದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತದೇಶದಲ್ಲಿ ಸಿನಿಮಾ ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವುದು ಕ್ರಿಕೆಟ್. ಹೌದು ಸ್ನೇಹಿತರೇ ಅದರಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಇರುವ ಜನಪ್ರಿಯತೆ ಯಾವ ಕ್ರಿಕೆಟಿಗನಿಗೂ ಇಲ್ಲ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಸಚಿನ್ ತೆಂಡೂಲ್ಕರ್ ಮಹೇಂದ್ರ ಸಿಂಗ್ ಧೋನಿ ಅನಂತರ ಅತ್ಯಂತ ಹೆಚ್ಚು ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆಯುವಂತಹ ಕ್ರಿಕೆಟಿಗೆ ಎಂದರೆ ಅದು ವಿರಾಟ್ ಕೊಹ್ಲಿ ಎಂದು ಹೇಳಬಹುದಾಗಿದೆ.
ವಿರಾಟ್ ಕೊಹ್ಲಿ ಅವರು ಈಗಾಗಲೇ ಎಲ್ಲಾ ಫಾರ್ಮೆಟ್ ನಲ್ಲಿ 71 ಶತಕವನ್ನು ದಾಖಲಿಸಿದ್ದಾರೆ. ಎಲ್ಲರೂ ಹೇಳುವಂತೆ ಸಚಿನ್ ರವರ ಶತಕದ ಶತಕ ದಾಖಲೆಯನ್ನು ಯಾರಾದರೂ ಮುರಿಯೋದಿದ್ದರೆ ಅದು ಖಂಡಿತವಾಗಿ ವಿರಾಟ್ ಕೊಹ್ಲಿ ಎಂದು ಹೇಳಬಹುದಾಗಿದೆ. ಇನ್ನು ವಿರಾಟ್ ಕೊಹ್ಲಿ ಅವರಿಗೆ ಎಷ್ಟೊಂದು ಅಭಿಮಾನಿಗಳು ಇದ್ದಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲಿ ಕೂಡ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ. ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಅವರು ಭಾರತೀಯ ಕಪ್ತಾನ ರಾಗಿ ಹಾಗೂ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನನಾಗಿ ಇರುವುದಕ್ಕೆ ಸಂತೋಷವನ್ನು ಕೂಡ ಪಟ್ಟುಕೊಂಡಿದ್ದಾರೆ.
ಆದರೆ ಈಗ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರ ವಿರುದ್ಧ ಮುನಿಸಿ ನಿಂತಿದ್ದಾರೆ ಯಾಕೆ ಗೊತ್ತಾ ಸಂಪೂರ್ಣ ವಿವರವನ್ನು ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ವಿರಾಟ್ ಕೊಹ್ಲಿ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ತಾನು ಟ್ವೆಂಟಿ ಟ್ವೆಂಟಿ ವರ್ಲ್ಡ್ ಕಪ್ ನಂತರ ಭಾರತೀಯ ಟಿ ಟ್ವೆಂಟಿ ಕ್ರಿಕೆಟ್ ತಂಡದ ಕಪ್ತಾನ ಸ್ಥಾನಕ್ಕೆ ಹಾಗೂ ಈ ಬಾರಿಯ ಐಪಿಎಲ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕೋಪಗೊಂಡಿದ್ದು ಏನೇ ಆಗಲಿ ನೀವು ನಾಯಕ ಸ್ಥಾನದಿಂದ ಕೆಳಗಿಳಿಯಬೇಕು ಐಪಿಎಲ್ ಕಪ್ ಗೆದ್ದಮೇಲೆ ಕೂಡ ನೀವೇ ನಾಯಕರಾಗಿ ಮುಂದುವರೆಯಬೇಕು ಇದೇ ನಮ್ಮ ಆಸೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಕೇವಲ ಬೆಂಗಳೂರು ಮೂಲದ ಅಭಿಮಾನಿಗಳು ಮಾತ್ರವಲ್ಲದೆ ದೇಶದಾದ್ಯಂತ ಇರುವ ವಿಮಾನಗಳು ಇದನ್ನೇ ಕೋರಿಕೊಂಡಿದ್ದಾರೆ.