ಟೋಯಿಂಗ್ ಬೆನ್ನಲ್ಲೇ ಮತ್ತೊಂದು ದಿಟ್ಟ ಕಾಯ್ದೆಯನ್ನ ಜಾರಿಗೊಳಿಸಲು ಮುಂದಾದ ಬೊಮ್ಮಾಯಿ ಸರ್ಕಾರ. ಗೃಹ ಸಚಿವರಿಂದ ಹೊಸ ಆದೇಶಕ್ಕೆ ಕ್ಷಣಗಣನೆ.

ನಮಸ್ಕಾರ ಸ್ನೇಹಿತರೇ ಜನ ಸಾಮಾನ್ಯರಿಗೆ ತೊಂದರೆಯಾಗುವಂತಹ ಕಾಯ್ದೆ, ನೀತಿ, ನಿಯಮಗಳು ಜಾರಿಯಲ್ಲಿದ್ದರೇ, ಅಂತಹ ನಿಯಮ ಅಥವಾ ಕಾಯ್ದೆಗಳಿಗೆ ತಿದ್ದುಪಡಿಯನ್ನ ಬೊಮ್ಮಾಯಿ ಸರ್ಕಾರದ ಗೃಹ ಸಚಿವ ಆರಗ ಜ್ಞಾನೇಂದ್ರ ತಂದಿದ್ದರು. ಈಗ ಅಂತಹ ಮತ್ತೊಂದು ಕಾಯ್ದೆಯನ್ನ ಜಾರಿ ತರಲು ಸರ್ಕಾರ ಮುಂದಾಗಿದೆ. ಹೌದು ಇಂದು ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರದ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದರು.

ಸ್ವತಃ ಶಾಸಕರಾದ ಗೂಳಿಹಟ್ಟಿ ಶೇಖರ್ ರವರ ತಾಯಿಯವರೇ ಮತಾಂತರವಾಗಿದ್ದಾರೆ ಎಂಬ ಸುದ್ದಿಯನ್ನ ಬಹಿರಂಗಪಡಿಸಿದ್ದರು. ಕೇವಲ ಶಾಸಕರ ತಾಯಿ ಮಾತ್ರವಲ್ಲದೇ, ಅವರ ಕ್ಷೇತ್ರದ ಹಲವಾರು ಜನರನ್ನ ಮತಾಂತರ ಮಾಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಹಣ, ಮನೆ, ಸೈಟುಗಳ ಆಮೀಷವೊಡ್ಡಿ ಮತಾಂತರ ಮಾಡುತ್ತಿದ್ದು, ಜನರ ಮುಗ್ದತೆಯನ್ನು ಹಾಗೂ ದೇವರ ಮೇಲಿನ ನಂಬಿಕೆಗಳನ್ನ ದುರುಪಯೋಗಪಡಿಸಿಕೊಂಡು ಮತಾಂತರ ಮಾಡಲಾಗುತ್ತಿದ್ದು, ಇದರ ಬಗ್ಗೆ ಕಠಿಣ ಕಾನೂನು ಕ್ರಮಗಳನ್ನ ಸರ್ಕಾರ ತೆಗೆದುಕೊಳ್ಳಬೇಕೆಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ ಸದನದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಜನರ ಮುಗ್ದತೆಯನ್ನ ದುರುಪಯೋಗಪಡಿಸಿಕೊಂಡು , ಆಸೆ, ಆಮೀಷಗಳನ್ನ ಒಡ್ಡುವುದು ಸರಿಯಲ್ಲ. ಸಝಘಟನೆಗಳು ಮತಾಂತರ ಮಾಡುವುದರಿಂದ ಸಮಾಜದಲ್ಲಿ ಅಶಾಂತಿ ಭುಗಿಲೇಳುವ ಸಾಧ್ಯತೆ ಇರುತ್ತದೆ. ಮತಾಂತರವನ್ನ ಒಂದು ಜಾಲದ ರೀತಿಯಲ್ಲಿ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಬರುವ ಸಾಧ್ಯತೆ ಹೆಚ್ಚಳವಾಗಿದೆ‌. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav