ಕೊಹ್ಲಿ ನಂತರ ಆರ್ಸಿಬಿ ತಂಡದ ನಾಯಕನ ರೇಸ್ ನಲ್ಲಿ ಮೂವರು ಫಿಕ್ಸ್, ಯಾರಾಗಬಹುದು ಗೊತ್ತೇ?? ನಿಮ್ಮ ಆಯ್ಕೆ ಯಾರು??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೇಟ್ ತಂಡಕ್ಕೆ ಬರೀ ರಾಜೀನಾಮೆಗಳದ್ದೇ ಸುದ್ದಿ. ಕಳೆದ ವಾರ ಟಿ 20 ವಿಶ್ವಕಪ್ ನಂತರ ತಾವು ಭಾರತ ತಂಡದ ನಾಯಕನ ಹುದ್ದೆಗೆ ರಾಜೀನಾಮೆ ನೀಡುವುದಾಗಿ ನಾಯಕ ವಿರಾಟ್ ಕೊಹ್ಲಿ ಘೋಷಿಸಿದ್ದರು. ಅದರ ಜೊತೆ ಈಗ ಈ ಐಪಿಎಲ್ ನ ಸೀಸನ್ ಮುಗಿದ ನಂತರ ಆರ್ಸಿಬಿ ತಂಡದ ನಾಯಕತ್ವ ಹುದ್ದೆಯಿಂದಲೂ ಸಹ ಕೆಳಗಿಳಿಯುತ್ತೇವೆ ಎಂದು ಘೋಷಿಸಿದ್ದಾರೆ.

ಇದು ಕ್ರಿಕೇಟ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಏಕಾಏಕಿ ನಾಯಕ ಕೊಹ್ಲಿ ಈ ರಾಜೀನಾಮೆ ತೆಗೆಯುವುದರ ಹಿಂದಿನ ಗುಟ್ಟೇನು ಎಂಬುದರ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ನಾಯಕ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ನಂತರ, ಆರ್ಸಿಬಿ ತಂಡದ ಮುಂದಿನ ನಾಯಕ ಯಾರಾಗಬೇಕು ಎಂಬ ಚರ್ಚೆ ಸಹ ಶುರುವಾಗಿದ್ದು, ಮೂವರು ಆಟಗಾರರ ಪಟ್ಟಿ ಮಾಡಲಾಗಿದೆ. ಬನ್ನಿ ನಾಯಕನ ಸಾಮರ್ಥ್ಯವಿರುವ ಆ ಮೃವರು ಯಾರೆಂದು ತಿಳಿಯೋಣ.

ಎಬಿ ಡಿ ವಿಲಿಯರ್ಸ್ – ಆರ್ಸಿಬಿ ಪಾಲಿನ ಆಪತ್ಭಾಂದವ ಎಬಿಡಿ ಮುಂದಿನ ನಾಯಕನಾಗಬಹುದು ಎಂದು ಹೇಳಲಾಗುತ್ತಿದೆ. ಆದರೇ ಅಂತರಾಷ್ಟ್ರೀಯ ಕ್ರಿಕೇಟ್ ಗೆ ವಿದಾಯ ಘೋಷಿಸಿರುವ ಎಬಿಡಿ, ನಾಯಕ ಸ್ಥಾನವನ್ನ ವಹಿಸಿಕೊಳ್ಳುತ್ತಾರೋ, ಇಲ್ಲವೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಮೂಲಗಳ ಪ್ರಕಾರ ಆರ್ಸಿಬಿ ಕಪ್ ಗೆದ್ದರೇ, ಎಬಿಡಿ ಐಪಿಎಲ್ ಕ್ರಿಕೇಟ್ ನಿಂದಲೂ ದೂರ ಉಳಿಯುವ ಸಂಭವ ಇದೆ.

ಯುಜವೇಂದ್ರ ಚಾಹಲ್ – ಆರ್ಸಿಬಿ ತಂಡದ ಭರವಸೆಯ ಸ್ಪಿನ್ಪರ್ ಎಂದರೇ ಅದು ಯುಜಿ ಚಾಹಲ್. ಹಲವಾರು ವರ್ಷಗಳಿಂದ ತಂಡದಲ್ಲಿ ಖಾಯಂ ಸದಸ್ಯರಾಗಿರುವ ಯುಜಿ ಚಾಹಲ್ ರನ್ನ ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇದೆ. ಆದರೇ ಚಾಹಲ್ ಅಸ್ಥಿರ ಪ್ರದರ್ಶನ ಸಹ ಆರ್ಸಿಬಿಗೆ ದೊಡ್ಡ ತಲೆ ನೋವಾಗಿದೆ‌.

ದೇವದತ್ ಪಡಿಕ್ಕಲ್ – ಆರ್ಸಿಬಿ ತಂಡದ ಉದಯೋನ್ಮುಖ ಬ್ಯಾಟ್ಸಮನ್‌ . ಇನ್ನು ಇಪ್ಪತ್ತು ವರ್ಷದ ಪಡಿಕಲ್, ಈಗಷ್ಟೇ ಕ್ರಿಕೇಟ್ ಜಗತ್ತಿನಲ್ಲಿ ತಮ್ಮ ಚಾಪು ಮೂಡಿಸುತ್ತಿದ್ದಾರೆ. ಆದರೇ ಚಿಕ್ಕ ವಯಸ್ಸಿನ ಪಡಿಕ್ಕಲ್ ಗೆ ಅಷ್ಟು ದೊಡ್ಡ ಜವಾಬ್ದಾರಿ ನೀಡುವುದು ಸರಿಯೇ ಎಂಬ ಪ್ರಶ್ನೆ ಸಹ ಎದ್ದಿದೆ. ಆದರೇ ಬೇರೆಯವರಿಗಿಂತ ಪಡಿಕಲ್ ಇರುವುದರಲ್ಲಿ ಉತ್ತಮ ಆಯ್ಕೆ ಎಂಬುದು ತಜ್ಞರ ಅಭಿಪ್ರಾಯ. ವಿರಾಟ್ ನಂತರ ಆರ್ಸಿಬಿ ತಂಡದ ನಾಯಕ ಯಾರಾಗಬೇಕು ಎಂಬ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav